ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ಮನೆಯಲ್ಲಿಯೇ ಪತ್ನಿಗೆ ಹೆರಿಗೆ ಮಾಡಿಸಲು ಪತಿ ಯತ್ನ, ಮಹಿಳೆ ಸಾವು

ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್ ಟ್ರೆಂಡ್ ಹೆಚ್ಚಾಗಿದೆ, ಅಡುಗೆಯ ರೆಸಿಪಿಯಿಂದ ಹಿಡಿದು ಯೋಗ, ವ್ಯಾಯಾಮದವರೆಗೂ ಯೂಟ್ಯೂಬ್​ನಲ್ಲಿ ನೋಡಿಕೊಂಡೇ ಮಾಡುವವರು ಹೆಚ್ಚು. ಇದೀಗ ವ್ಯಕ್ತಿಯೊಬ್ಬ ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಆಕೆ ಮನೆಯಲ್ಲಿಯೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಯೂಟ್ಯೂಬ್​ನಲ್ಲಿ ವಿಡಿಯೋ ನೋಡಿ ಮನೆಯಲ್ಲಿಯೇ ಪತ್ನಿಗೆ ಹೆರಿಗೆ ಮಾಡಿಸಲು ಪತಿ ಯತ್ನ, ಮಹಿಳೆ ಸಾವು
ಗರ್ಭಿಣಿ
Image Credit source: parents

Updated on: Aug 25, 2023 | 7:56 AM

ಕಳೆದ ಹಲವು ವರ್ಷಗಳಿಂದ ಯೂಟ್ಯೂಬ್ ಟ್ರೆಂಡ್ ಹೆಚ್ಚಾಗಿದೆ, ಅಡುಗೆಯ ರೆಸಿಪಿಯಿಂದ ಹಿಡಿದು ಯೋಗ, ವ್ಯಾಯಾಮದವರೆಗೂ ಯೂಟ್ಯೂಬ್​ನಲ್ಲಿ ನೋಡಿಕೊಂಡೇ ಮಾಡುವವರು ಹೆಚ್ಚು. ಇದೀಗ ವ್ಯಕ್ತಿಯೊಬ್ಬ ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಮಾಡಿಸಲು ಹೋಗಿ ಆಕೆ ಮನೆಯಲ್ಲಿಯೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಗೂಗಲ್​ ಆಗಲಿ ಯೂಟ್ಯೂಬ್ ಆಗಲಿ ನಿಮ್ಮ ಮಾಹಿತಿಗಾಗಿಯೇ ಇರುವುದು ನಿಜ ಆದರೆ ಅದನ್ನು ನೋಡಿಕೊಂಡು ಯಾವುದೋ ಔಷಧಗಳನ್ನು ತೆಗೆದುಕೊಳ್ಳುವುದು, ಮಾತ್ರೆಗಳನ್ನು ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಬಾರದು.

ವ್ಯಕ್ತಿ ಮನೆಯಲ್ಲಿಯೇ ಯೂಟ್ಯೂಬ್ ನೋಡಿ ಹೆರಿಗೆ ಮಾಡಿಸುತ್ತೀನಿ ಎಂದು ಹೋಗಿ ಪತ್ನಿಯನ್ನೇ ಕಳೆದುಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ವಾಸವಾಗಿರುವ ಮಾದೇಶ ಎಂಬುವವರ ಪತ್ನಿ ಲೋಕನಾಯಕಿ ಗರ್ಭಿಣಿಯಾಗಿದ್ದರು.

ಮಾಹಿತಿ ಪ್ರಕಾರ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು, ಆತ ಯೂಟ್ಯೂಬ್ ಮೂಲಕ ಮನೆಯಲ್ಲಿಯೇ ಹೆರಿಗೆ ಮಾಡಿಸಲು ಮುಂದಾಗಿದ್ದಾರೆ.

ಮತ್ತಷ್ಟು ಓದಿ: ಕೆಎಸ್​ಆರ್​​ಟಿಸಿ ಬಸ್​​ನಲ್ಲಿಯೇ ಹೆರಿಗೆ, ಮಹಿಳಾ ಕಂಡಕ್ಟರ್ ಸಮಯ ಪ್ರಜ್ಞೆಗೆ ಶ್ಲಾಘನೆ

ಹೆರಿಗೆಯೂ ಆಗಿದೆ ಆದರೆ ಹೊಕ್ಕುಳ ಬಳ್ಳಿಯನ್ನು ಸರಿಯಾಗಿ ಕತ್ತರಿಸಲು ಸಾಧ್ಯವಾಗಲಿಲ್ಲ, ರಕ್ತಸ್ರಾವ ಉಂಟಾಗಿ ಮಹಿಳೆ ಮೃತಪಟ್ಟಿದ್ದಾರೆ.
ತಕ್ಷಣವೇ ಅವರನ್ನು ಹತ್ತಿರದ ಪಿಎಚ್​ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಥಿಕಾ ಪೊಲೀಸರಿಗೆ ದೂರು ನೀಡಿದ್ದಾರೆ. ಮಾದೇಶ್ ಅವರ ವಿರುದ್ಧ 174 ಸೆಕ್ಷನ್​ನಲ್ಲಿ ಪ್ರಕರಣ ದಾಖಲಿಸಲಾಗಿದೆ, ತನಿಖೆ ನಡೆಯುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ