
ಹೈದರಾಬಾದ್: ವಿಮಾನ ಹತ್ತುವಾಗ ಪ್ರಯಾಣಿಕರೊಬ್ಬರು ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರೋ ಘಟನೆ ನಗರದ ಶಂಷಾಬಾದ್ ಏರ್ಪೋರ್ಟ್ನಲ್ಲಿ ಸಂಭವಿಸಿದೆ. ಕೊಲ್ಕತ್ತಾ ಮೂಲದ ಮಹಿಳೆ ಜಶೋಧಾ ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ತಿರುಪತಿಗೆ ತೆರಳಲು ಶಂಷಾಬಾದ್ ಏರ್ಪೋರ್ಟ್ಗೆ ಬಂದಿದ್ದ ಜಶೋಧಾ ವಿಮಾನ ಹತ್ತುವಾಗ ಕುಸಿದು ಬಿದ್ದು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ಮಹಿಳೆ ಕ್ಯಾನ್ಸರ್ನಿಂದ ಬಳಲುತ್ತಿದ್ದು ಅದರಿಂದ ಸಾವು ಸಂಭವಿಸಿರಬಹುದು ಎನ್ನಲಾಗಿದೆ.
Published On - 1:57 pm, Thu, 16 July 20