ಹೈದರಾಬಾದ್, ಜನವರಿ 23: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದೆ. ಆದರೆ ಮಹಿಳೆಯರು ಈ ಸೌಲಭ್ಯವನ್ನು ಅತಿಯಾಗಿ ಬಳಸಿಕೊಂಡು ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ. ಉಚಿತ ಪ್ರಯಾಣದ ವೇಳೆ ಹಲವು ಬಾರಿ ಬಸ್ಸುಗಳಲ್ಲಿ ಪರಸ್ಪರ ಥಳಿಸಿಕೊಂಡಿರುವ ನಿದರ್ಶನಗಳೂ ಇವೆ. ಹೀಗೆ ಸುದ್ದಿಯಾಗಿದ್ದ TSRTC ಉಚಿತ ಬಸ್ ಪ್ರಯಾಣ ಇದೀಗ ಮಹಿಳೆಯರಿಬ್ಬರು ಮಾಡಿರುವ ಕೆಲಸದಿಂದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದ ಇಬ್ಬರು ಮಹಿಳೆಯರು ಸುಮ್ಮನೆ ಕುಳಿತುಕೊಳ್ಳುವುದು ಏಕೆಂದು ತಮ್ಮ ಕೈಲಾದ ಕೆಲಸವನ್ನು ಸಾಂಗೋಪಾಂಗವಾಗಿ ಮಾಡಿದ್ದಾರೆ. ಘಟನೆಯ ವಿಡಿಯೋ ತೆಗೆದ ಯುವಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ. ಘಟನೆ ಯಾವ ಡಿಪೋದಲ್ಲಿ ನಡೆದಿದೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ‘ಹೇ ರೇವಂತ್ ರೆಡ್ಡಿ, ಹೇ ಉತ್ತಮ್ ಕುಮಾರ್ ರೆಡ್ಡಿ, ಯೇ ಕ್ಯಾ ಹುವಾ! ಮನೆಯಲ್ಲಿ ಕುಳಿತು ಒಬ್ಬರೇ ಬೀಡಿ ಕಟ್ಟಿದರೆ ಬೇಜಾರಾಗುತ್ತದೆ ಎಂದು ಬಸ್ ಗಳಲ್ಲೂ ಹೀಗೆ ಕಾಯಕದಲ್ಲಿ ನಿರತರಾಗಿದ್ದಾರೆ ನೋಡಿ ಆನಂದಿಸಿ ಎಂದಿದ್ದಾರೆ.
హే రేవంత్ రెడ్డి, హే ఉత్తమ్ కుమార్ రెడ్డి, యే క్యా హువా!
ఇంట్లో కూర్చొని ఒక్కరే బీడీలు చేస్తే బోర్ కొడుతుందని ఇలా బస్సుల్లో కూడా మొదలుపెట్టారు!! pic.twitter.com/1DBb38ylsg— Narasimha BRS (@narasimhabegar2) January 21, 2024
ಈ ವಿಡಿಯೋ ಹಾಕಿದವರ ವಿರುದ್ಧ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಹಾಯ್ ಬಿಚ್ಚಗಾಡು! ಅವರಿಗೆ ಸೀಟು ಸಿಕ್ಕರೆ ಉಚಿತ ಬಸ್ ಯೋಜನೆ ಯಶಸ್ವಿಯಾಗಿದೆ ಎಂದರ್ಥ. ಅವರು ಬೇರೆ ಏನನ್ನೂ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ಅವರು ಏನನ್ನಾದರೂ ಮಾಡಿಕೊಳ್ಳಲಿ, ನಿನಗೇನು?ಇಷ್ಟು ಚೀಪಾಗಿ ಅವರ ಅನುಮತಿಯಿಲ್ಲದೆ ಆ ಮಹಿಳೆಯರ ವೀಡಿಯೊಗಳನ್ನು ತೆಗೆಯುವುದು ಅಪರಾಧವಲ್ಲವೆ ಎಂದೂ ಪ್ರಶ್ನಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.
ಸದ್ಯಕ್ಕೆ ಸರ್ಕಾರದಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಉಚಿತ ಬಸ್‌ಗಳಲ್ಲಿ ಸಾಕಷ್ಟು ಅಹಿತಕರ ಘಟನೆಗಳು ಮತ್ತು ಆಘಾತಕಾರಿ ಘಟನೆಗಳನ್ನು ನಾವು ಈಗಾಗಲೇ ನೋಡಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಏನೆಲ್ಲಾ ಬೆಳವಣಿಗೆಗಳು ಸೃಷ್ಟಿಯಾಗುತ್ತವೋ ಎಂದು ಜನ ಮಾತನಾಡುತ್ತಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:59 pm, Tue, 23 January 24