ನವದೆಹಲಿ: ಶ್ರೀಲಂಕಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿರುವ ಅನುರಾ ಕುಮಾರ ದಿಸಾನಾಯಕೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ಬರಮಾಡಿಕೊಂಡರು. ಇಂದು ಸಂಜೆ ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ದಿಸಾನಾಯಕೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ನಮ್ಮ ಭೂಮಿಯನ್ನು ಯಾವುದೇ ರೀತಿಯಲ್ಲಿ ಹಾನಿಕಾರಕ ರೀತಿಯಲ್ಲಿ ಬಳಸಲು ನಾವು ಅನುಮತಿಸುವುದಿಲ್ಲ ಎಂದು ನಾನು ಭಾರತದ ಪ್ರಧಾನಿಗೆ ಭರವಸೆ ನೀಡಿದ್ದೇನೆ ಎಂದಿದ್ದಾರೆ.
ಭಾರತದ ಹಿತದೃಷ್ಟಿಯಿಂದ ಭಾರತದೊಂದಿಗಿನ ಸಹಕಾರವು ಖಂಡಿತವಾಗಿಯೂ ಅಭಿವೃದ್ಧಿ ಹೊಂದುತ್ತದೆ. ಭಾರತಕ್ಕೆ ನಮ್ಮ ನಿರಂತರ ಬೆಂಬಲವನ್ನು ಭರವಸೆ ನೀಡಲು ನಾನು ಬಯಸುತ್ತೇನೆ. ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡುತ್ತಾ ಬಂದಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ದ್ವೀಪ ರಾಷ್ಟ್ರವು ಬಹಳ ಮಹತ್ವದ ಸ್ಥಾನವನ್ನು ಹೊಂದಿದೆ ಎಂದು ದಿಸಾನಾಯಕೆ ಹೇಳಿದ್ದಾರೆ.
VIDEO | PM Modi (@narendramodi) welcomes Sri Lankan President Anura Kumara Dissanayake
(@anuradisanayake) at Hyderabad House, Delhi, ahead of their bilateral talks.(Full video available on PTI Videos – https://t.co/n147TvrpG7) pic.twitter.com/3bvI9fyqGb
— Press Trust of India (@PTI_News) December 16, 2024
ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಅದ್ದೂರಿ ಸ್ವಾಗತ
“ನಮ್ಮ ಎರಡೂ ದೇಶಗಳಿಗೆ ಪಿಡುಗಾಗಿ ಪರಿಣಮಿಸಿರುವ ಮೀನುಗಾರರ ಸಮಸ್ಯೆಗೆ ನಾವು ಸುಸ್ಥಿರ ಪರಿಹಾರವನ್ನು ಕಂಡುಕೊಳ್ಳಲು ಬಯಸುತ್ತೇವೆ. ಆ ಪ್ರದೇಶದಲ್ಲಿ ಮೀನುಗಾರರಿಂದ ಕೆಳಭಾಗದ ಟ್ರಾಲಿಂಗ್ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಅದನ್ನು ಕೊನೆಗೊಳಿಸಬೇಕಾಗಿದೆ. ಏಕೆಂದರೆ ಇದು ಮೀನುಹಾರಿಕಾ ಉದ್ಯಮಕ್ಕೆ ತೊಂದರೆ ಉಂಟುಮಾಡುತ್ತದೆ ಎಂದು ಅನುರಾ ದಿಸಾನಾಯಕೆ ಹೇಳಿದ್ದಾರೆ.
I have also given an assurance to the Prime Minister of India that we will not allow our land to be used in any way in a manner that is detrimental to the interest of India.
The cooperation with India will certainly flourish and I want to reassure our continued support for… pic.twitter.com/HbxO3MZACn
— All India Radio News (@airnewsalerts) December 16, 2024
ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಹಾಯವನ್ನು ಸ್ಮರಿಸಿದ ದಿಸಾನಾಯಕೆ, “ನಾವು 2 ವರ್ಷಗಳ ಹಿಂದೆ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದೇವೆ. ಭಾರತವು ಆ ಕೆಸರೆರಚಾಟದಿಂದ ಹೊರಬರಲು ನಮಗೆ ಅಪಾರವಾಗಿ ಬೆಂಬಲ ನೀಡಿತು. ಅದರ ನಂತರ ವಿಶೇಷವಾಗಿ ಸಾಲಮುಕ್ತಗೊಳಿಸಲು ಭಾರತ ನಮಗೆ ಬಹಳ ಸಹಾಯ ಮಾಡಿದೆ. ಭಾರತದ ವಿದೇಶಾಂಗ ನೀತಿಯಲ್ಲಿ ಶ್ರೀಲಂಕಾ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ ಎಂದು ನನಗೆ ತಿಳಿದಿದೆ. ಭಾರತ ಶ್ರೀಲಂಕಾದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಯಾವಾಗಲೂ ರಕ್ಷಿಸುತ್ತದೆ.” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ