ಭಾರತದಲ್ಲಿ ಕೆಲಸ ಮಾಡಬೇಕಾದರೆ ದೇಶದ ಕಾನೂನು ಪಾಲಿಸಬೇಕು; ಸಾಮಾಜಿಕ ಜಾಲತಾಣಗಳಿಗೆ ಖಡಕ್ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ

|

Updated on: Feb 11, 2021 | 4:45 PM

ಅಮೆರಿಕದ ಕ್ಯಾಪಿಟಲ್ ಹಿಲ್​ನಲ್ಲಿ ಪೊಲೀಸರ ಪರ ನಿಲುವು ತಳೆದ ಟ್ವಿಟರ್, ಅಂತದ್ದೇ ಕೆಂಪುಕೋಟೆ ಪ್ರಕರಣದಲ್ಲಿ ಮಾತ್ರ ತನ್ನ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಈ ಮೂಲಕ ಮೈಕ್ರೋಬ್ಲಾಗಿಂಗ್ ಸೈಟ್​ಗಳು ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಎಂದು ಟ್ವಿಟರ್ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಭಾರತದಲ್ಲಿ ಕೆಲಸ ಮಾಡಬೇಕಾದರೆ ದೇಶದ ಕಾನೂನು ಪಾಲಿಸಬೇಕು; ಸಾಮಾಜಿಕ ಜಾಲತಾಣಗಳಿಗೆ ಖಡಕ್ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ
ಮೈಕ್ರೋಬ್ಲಾಗಿಂಗ್ ಸೈಟ್​ಗಳ ದ್ವಂದ್ವ ನಿಲುವುಗಳ ಕುರಿತು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಹರಿಹಾಯ್ದಿದ್ದಾರೆ.
Follow us on

ದೆಹಲಿ: ದೇಶದಲ್ಲಿ ಕಾರ್ಯನಿರ್ವಹಿಸುವ ಸಾಮಾಜಿಕ ಜಾಲತಾಣಗಳು ಭಾರತದ ಸಂವಿಧಾನಬದ್ಧ (Indian Constitution) ಕಾನೂನುಗಳಿಗೆ ಬದ್ಧವಾಗಿರಬೇಕು. ಒಂದುವೇಳೆ ಭಾರತದ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡರೆ ಅಂತಹ ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ (Ravi Shankar Prasad) ರಾಜ್ಯಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೆಲವು ಮೈಕ್ರೋಬ್ಲಾಗಿಂಗ್ ಸೈಟ್‌ಗಳು ದ್ವಂದ್ವ ನೀತಿ ಅನುಸರಿಸುತ್ತಿವೆ. ಅಮೆರಿಕದ ಕ್ಯಾಪಿಟಲ್ ಹಿಲ್ ಗಲಭೆ ಘಟನೆಗೆ ತಳೆದದಕ್ಕಿಂತ ಭಿನ್ನ ನಿಲುವನ್ನು ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವದಂದು ನಡೆದ ಗಲಭೆ ಕುರಿತು ತಾಳಲಾಗಿದೆ. ಅಮೆರಿಕದ ಕ್ಯಾಪಿಟಲ್ ಹಿಲ್​ನಲ್ಲಿ ಪೊಲೀಸರ ಪರ ನಿಲುವು ತಳೆದ ಟ್ವಿಟರ್, ಅಂತದ್ದೇ ಕೆಂಪುಕೋಟೆ ಪ್ರಕರಣದಲ್ಲಿ ಮಾತ್ರ ತನ್ನ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಈ ಮೂಲಕ ಮೈಕ್ರೋಬ್ಲಾಗಿಂಗ್ ಸೈಟ್​ಗಳು ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಎಂದು ಟ್ವಿಟರ್ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಇದೇನಿದು Koo.. ಏನಿದರ ವಿಶೇಷತೆ? ಕೇಂದ್ರ ಸರ್ಕಾರ ಈ ಆ್ಯಪ್​ಗೆ ಮಹತ್ವ ಕೊಡ್ತಿರೋದೇಕೆ?

ಟ್ವಿಟ್ಟರ್, ಫೇಸ್‌ಬುಕ್, ವಾಟ್ಸಾಪ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳು ಭಾರತದಲ್ಲಿ ಮುಕ್ತವಾಗಿ ಕಾರ್ಯನಿರ್ವಹಿಸಬಹುದು. ಆದರೆ, ಭಾರತದ ಸಂವಿಧಾನ, ಕಾನೂನನ್ನು ಮೀರದಂತೆ ಅವು ತಮ್ಮ ಕಾರ್ಯವೈಖರಿಯನ್ನು ಹೊಂದಿರಬೇಕು. ದೇಶದ ಕಾನೂನು ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕೂ ಡೌನ್​ಲೋಡ್ ಪ್ರಮಾಣದಲ್ಲಿ ಹೆಚ್ಚಳ
ಟ್ವಿಟರ್ ವಿರುದ್ಧ ದೇಶದಲ್ಲಿ ಕೂಗು ಹೆಚ್ಚುತ್ತಿದ್ದಂತೆ ದೇಶಿ ಮೈಕ್ರೋ ಬ್ಲಾಗಿಂಗ್ ಆ್ಯಪ್ ಕೂ (Koo App) ಡೌನ್​ಲೋಡ್ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಕೂ ಅತಿ ಕಡಿಮೆ ಅವಧಿಯಲ್ಲಿ 30 ಲಕ್ಷ ಡೌನ್​ಲೋಡ್ ಕಂಡಿದೆ ಎಂದು @KooAppIndia ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಆದರೆ, @KooAppIndia ತನ್ನ ಅಧಿಕೃತ ಖಾತೆಯಲ್ಲ ಎಂದು @Kooindia ಸ್ಪಷ್ಟಪಡಿಸಿದೆ. ಮೇಡ್ ಇನ್ ಇಂಡಿಯಾ ಆ್ಯಪ್ ಸ್ಪರ್ಧೆಯಲ್ಲಿ ಮೈಕ್ರೋ ಬ್ಲಾಗಿಂಗ್ ವಿಭಾಗದಲ್ಲಿ ಕೂ ವಿಜೇತವಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Published On - 4:41 pm, Thu, 11 February 21