ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಕಾರು ಅಪಘಾತ, ಐಎಎಫ್ ಅಧಿಕಾರಿ ಪತ್ನಿ ಸ್ಥಳದಲ್ಲೇ ಸಾವು
ಮಥುರಾದ ಸುರಿರ್ ಕೊತ್ವಾಲಿ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಮೂತ್ರವಿಸರ್ಜನೆಗೆಂದು ಕಾರಿನಿಂದ ಇಳಿದ ವಾಯುಪಡೆ ಅಧಿಕಾರಿಯೊಬ್ಬರ ಪತ್ನಿಗೆ ಹಿಂಬದಿಯಿಂದ ಅತಿವೇಗದಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರಿಗೆ ಡಿಕ್ಕಿಯಾದ ರಭಸಕ್ಕೆ ಮಹಿಳೆ ನೌಝೀಲ್-ರಾಯ ರಸ್ತೆಯ ತೆಹ್ರಾ ಬಳಿಯ ಅಂಡರ್‌ಪಾಸ್ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತಕ್ಷಣವೇ ಯಮುನಾ ಎಕ್ಸ್ಪ್ರೆಸ್ ವೇ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಪಘಾತದಲ್ಲಿ ಗಾಯಗೊಂಡ ಇಬ್ಬರು ಬಾಲಕಿಯರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ದೇವಿ ಪ್ರಸಾದ್ ಮಿಶ್ರಾ ವಾಯುಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿದ್ದು, ಪ್ರಸ್ತುತ ದೆಹಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬುಧವಾರ ಬೆಳಗ್ಗೆ ದೆಹಲಿಯಿಂದ ಆಗ್ರಾಕ್ಕೆ ಯಮುನಾ ಎಕ್ಸ್‌ಪ್ರೆಸ್‌ವೇ ಮೂಲಕ ಕಾರಿನಲ್ಲಿ ಪತ್ನಿ ಕಿಸ್ಲಾಯಾ (40) ಹಾಗೂ ಇಬ್ಬರು ಪುತ್ರಿಯರಾದ ಜಿಜ್ಞಾಸಾ ಮತ್ತು ಅದಮ್ಯ ಜತೆ ತೆರಳುತ್ತಿದ್ದರು. ಬೆಳಗ್ಗೆ 8 ಗಂಟೆಗೆ ಸುರಿರ್ ಕೊತ್ವಾಲಿ ಪ್ರದೇಶದ ಮೈಲ್ ಸ್ಟೋನ್ 80 ರ ಬಳಿ ತಲುಪಿದ ಅವರು ತಮ್ಮ ಕಾರನ್ನು ಬದಿಯಲ್ಲಿ ನಿಲ್ಲಿಸಿ ಇಳಿದಿದ್ದಾರೆ. ಕಾರಿನಿಂದ ಕೆಳಗಿಳಿದು ಬದಿಯಲ್ಲಿ ನಿಂತಿದ್ದಾಗ ನೋಯ್ಡಾ ಕಡೆಯಿಂದ ಅತೀ ವೇಗದಲ್ಲಿ ಬಂದ ಹುಂಡೈ ಕಾರು ಡಿಕ್ಕಿ ಹೊಡೆದಿದೆ.
ಮತ್ತಷ್ಟು ಓದಿ: ಉತ್ತರಾಖಂಡ: ನದಿಗೆ ಕಾರು ಉರುಳಿ, ಕರ್ನಾಟಕದ ಇಬ್ಬರು ಸೇರಿ ಒಟ್ಟು 6 ಮಂದಿ ಸಾವು
ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ. ಪೊಲೀಸರು ಗಾಯಾಳುಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮಹಿಳೆಯ ಮೃತದೇಹದ ಪಂಚನಾಮವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಕೊತ್ವಾಲಿ ಉಸ್ತುವಾರಿ ಇನ್ಸ್‌ಪೆಕ್ಟರ್ ನರೇಂದ್ರ ಯಾದವ್ ತಿಳಿಸಿದ್ದಾರೆ. ಜತೆಗೆ ಎರಡೂ ವಾಹನಗಳನ್ನು ರಸ್ತೆಯಿಂದ ಇಳಿಸಿ ಸಂಚಾರ ಸುಗಮಗೊಳಿಸಲಾಗಿದೆ. ಕಾರು ಚಾಲಕನನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ