Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ
ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್‌ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದ್ದಾರೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ, ಖಂಡಿತವಾಗಿಯೂ ಪ್ರತಿ ದೇಶಕ್ಕೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನೊಂದಿಗೆ ಬರುವ ಉತ್ಪನ್ನಗಳ ಹೆಚ್ಚಿದ ಬಳಕೆಯೊಂದಿಗೆ, ತ್ಯಾಜ್ಯದ ಪ್ರಮಾಣವೂ ಮಿತಿಮೀರಿದೆ. ಆದರೆ, ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಪುಟ್ಟ ಕಂಪನಿ ಹಗಲಿರುಳು ಶ್ರಮಿಸುತ್ತಿದೆ. ಪುಣೆಯ ಈ ಪುಟ್ಟ ಕೆಮಿಕಲ್ ಲ್ಯಾಬ್ ಭರವಸೆಯ ಕಿರಣವನ್ನು ಹುಟ್ಟು ಹಾಕಿದೆ. ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್‌ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.
ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಅನೀಶ್ ಮಲ್ಪಾನಿ ಅವರು ಹಂಚಿಕೊಂಡ ಟ್ವಿಟರ್ ಪೋಸ್ಟ್ ಪ್ರಕಾರ, ಉತ್ಪನ್ನವನ್ನು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ರಚಿಸಲಾಗಿದೆ. ನಾವು ಬದುಕುವ ಪರಿಸರವನ್ನು ಉಳಿಸಲು ಇದೊಂದು ಸಣ್ಣ ಪ್ರಯತ್ನ ಎಂದು ತಿಳಿಸಿದ್ದಾರೆ. “ಕೊನೆಗೂ ಚಿಪ್‌ಗಳ ಪ್ಯಾಕೆಟ್‌ಗಳ ಮರುಬಳಕೆಯಿಂದ ತಯಾರಿಸಿದ ಪ್ರಪಂಚದ ಮೊದಲ ಸನ್‌ಗ್ಲಾಸ್‌ಗಳು ನಿಮ್ಮಮುಂದೆ, ಅದೂ ನಮ್ಮ ಭಾರತದಲ್ಲಿ!” ಎಂದು ಅನೀಶ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
This has been the hardest thing I have ever been a part of.
Finally: Presenting the world’s first recycled sunglasses made from packets of chips, right here in India! pic.twitter.com/OSZQYyrgVc
— Anish Malpani (@AnishMalpani) February 16, 2023
ಇದಕ್ಕೆ ಸೇರಿಸಿ ಮಲ್ಪಾನಿ ಇನ್ನೂ ಕೆಲವು ಮಾಹಿತಿಯನ್ನು ನೀಡಿದರು. ಉತ್ತಮ ಗುಣಮಟ್ಟದ ಸನ್‌ಗ್ಲಾಸ್‌ಗಳನ್ನು ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಿಸುವ ವಿಧಾನವನ್ನು ನಾವು ಕಂಡುಕೊಂಡಿದ್ದೇವೆ. ಅಷ್ಟೇ ಅಲ್ಲದೆ ಈ ಪ್ರಕ್ರಿಯೆಗೆ ನಾವಿನ್ನೂ ಪೇಟೆಂಟ್ ಅನ್ನು ಮಾಡಿಕೊಂಡಿಲ್ಲ. ಈ ಪೇಟೆಂಟ್-ಬಾಕಿ ಉಳಿದಿರುವ ಪ್ರಕ್ರಿಯೆಯನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರಿಸಲು ಆಶಯ ಮುಂದಾಗಿದೆ. ಸನ್‌ಗ್ಲಾಸ್‌ಗಳು ಪ್ರಾರಂಭ ಮಾತ್ರ ಇನ್ನು ಹಲವು ಪ್ರಾಡಕ್ಟ್ಗಳನ್ನು ನಿಮ್ಮ ಮುಂದೆ ಇಡುವ ಯೋಜನೆ ನಮ್ಮದು. ಈ ರೀತಿ ನಾವು ಚಿಂದಿ ಆಯುವವರನ್ನು ಪ್ರಾಮಾಣಿಕವಾಗಿ ಸಬಲೀಕರಣಗೊಳಿಸಲು ಮುಂದಾಗಿದ್ದೇವೆ.
For more context:
This multi-layered plastic waste is considered impossible to recycle with close to 0% being recycled globally. 80% of ALL ocean leakage is flexible plastic packaging. It’s honestly the worst. pic.twitter.com/Vw3iEW6BYi
— Anish Malpani (@AnishMalpani) February 16, 2023
ಈ ಪೋಸ್ಟ್ ಅನ್ನು ನೋಡಿದ ನೆಟ್ಟಿಗರು ಬಹಳಷ್ಟು ಪ್ರೇರೇಪಿತರಾಗಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಕ್ಕೆ ಅನೇಕರು ಕಂಪನಿಯನ್ನು ಅಭಿನಂದಿಸಿದ್ದಾರೆ.
a. go to shark tank! b. take my money (do you do prescription based glasses?)
— Malay Desai (@MalayD) February 16, 2023
Awesome. God speed to you and team. I bought one though I wear powered glasses.
Btw, what would it cost to replicate/setup the patent pending recycling plant?
— Ranjan Varma (@ranjanv_) February 16, 2023
Awesome. God speed to you and team. I bought one though I wear powered glasses.
Btw, what would it cost to replicate/setup the patent pending recycling plant?
— Ranjan Varma (@ranjanv_) February 16, 2023