ಡ್ರೈವಿಂಗ್​ ಲೈಸೆನ್ಸ್​, ಆರ್​ಸಿ ವ್ಯಾಲಿಡಿಟಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 27, 2020 | 6:36 PM

ಕೊರೊನಾ ವೈರಸ್​ ಎರಡನೇ ಅಲೆ ಹರಡುವ ಭೀತಿ ಎಲ್ಲೆಡೆ ಹೆಚ್ಚಾಗಿದೆ. ಈಗಾಗಲೇ ಇಂಗ್ಲೆಂಡ್​ನಿಂದ ಬಂದ ಸಾಕಷ್ಟ ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ವಾಹನಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳ ಸಿಂಧುತ್ವ ವಿಸ್ತರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

ಡ್ರೈವಿಂಗ್​ ಲೈಸೆನ್ಸ್​, ಆರ್​ಸಿ ವ್ಯಾಲಿಡಿಟಿ ವಿಸ್ತರಣೆ ಮಾಡಿದ ಕೇಂದ್ರ ಸರ್ಕಾರ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರ, ವಾಹನ ಫಿಟ್‌ನೆಸ್ ಪ್ರಮಾಣಪತ್ರದ ಸಿಂಧುತ್ವವನ್ನು ಮಾರ್ಚ್​​ 31, 2021ರವರೆಗೆ ವಿಸ್ತರಣೆ ಮಾಡಿದೆ.

ಕೊರೊನಾ ವೈರಸ್​ ಎರಡನೇ ಅಲೆ ಹರಡುವ ಭೀತಿ ಎಲ್ಲೆಡೆ ಹೆಚ್ಚಾಗಿದೆ. ಈಗಾಗಲೇ ಇಂಗ್ಲೆಂಡ್​ನಿಂದ ಬಂದ ಸಾಕಷ್ಟು ಜನರಲ್ಲಿ ಹೊಸ ವಿಧದ ಕೊರೊನಾ ವೈರಾಣು ಕಾಣಿಸಿಕೊಂಡಿದೆ. ಈ ಕಾರಣಕ್ಕೆ ವಾಹನಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳ ಸಿಂಧುತ್ವ ವಿಸ್ತರಿಸುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ.

ನಿಮ್ಮ ವಾಹನ ಪರವಾನಗಿ ವ್ಯಾಲಿಡಿಟಿ ಸೇರಿ ಇತರ ದಾಖಲೆಳೆಗಳ ವ್ಯಾಲಿಡಿಟಿ ಅಂತ್ಯಗೊಂಡಿದ್ದರೆ ನೀವು ಅದೇ ದಾಖಲೆಗಳನ್ನು ಇಟ್ಟುಕೊಂಡು ಮಾರ್ಚ್​​ 31ರವರೆಗೂ ವಾಹನ ಓಡಿಸಬಹುದು.

ಬ್ರಿಟನ್​ನಲ್ಲಿ ಕೊರೊನಾ ವೈರಾಣು ಹೊಸ ಅವತಾರ ತಾಳಿದೆ. ಈ ಮೂಲಕ 2ನೇ ಅಲೆಯ ಭೀತಿಯಿಂದ ಬ್ರಿಟನ್​ ಮತ್ತೆ ಲಾಕ್​ಡೌನ್​ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆ ಭೀಕರ ಮತ್ತು ಅಪಾಯಕಾರಿ ಎಂಬ ವಾದಗಳು ಇರುವ ಕಾರಣ ಇತರೆ ದೇಶಗಳು ಬ್ರಿಟನ್ನಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಯಾನ ಸ್ಥಗಿತಗೊಳಿಸಿವೆ. ಭಾರತದಲ್ಲಿ ಈ ವೈರಾಣು ಪತ್ತೆ ಆಗಿರುವ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

ಕರ್ನಾಟಕ ಮೂಲ ಸೌಕರ್ಯಕ್ಕೆ ಒತ್ತು: ಕೇಂದ್ರದಿಂದ 1.16 ಲಕ್ಷ ಕೋಟಿ ರೂ. ಯೋಜನೆ- ನಿತಿನ್​ ಗಡ್ಕರಿ