ಹೈದರಾಬಾದ್ ಬಿರಿಯಾನಿಗೆ ಮೊಸರು ಕೇಳಿ ಪ್ರಾಣ ಕಳೆದುಕೊಂಡ ಯುವಕ.. ಪೋಷಕರ ಆಂದೋಲನ

|

Updated on: Sep 11, 2023 | 9:38 AM

Hyderabad: ಬಿರಿಯಾನಿಗೆ ಹೆಚ್ಚುವರಿ ಮೊಸರು ತರುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದಾಗ ಜಗಳ ಪ್ರಾರಂಭವಾಯಿತು. ಇದರಿಂದ ಸಿಬ್ಬಂದಿ ಲಿಯಾಖತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪಂಜಗುಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಮೆರಿಡಿಯನ್ ಹೋಟೆಲ್ ಸಿಬ್ಬಂದಿಯನ್ನು ಲಿಯಾಖತ್​ ಜೊತೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಮಾತನಾಡುವಾಗ ಲಿಯಾಖತ್ ಪ್ರಜ್ಞೆ ತಪ್ಪಿದ್ದಾರೆ.

ಹೈದರಾಬಾದ್ ಬಿರಿಯಾನಿಗೆ ಮೊಸರು ಕೇಳಿ ಪ್ರಾಣ ಕಳೆದುಕೊಂಡ ಯುವಕ.. ಪೋಷಕರ ಆಂದೋಲನ
ಹೈದರಾಬಾದ್ ಬಿರಿಯಾನಿಗೆ ಮೊಸರು ಕೇಳಿ ಪ್ರಾಣ ಕಳೆದುಕೊಂಡ ಯುವಕ
Follow us on

ಹೈದರಾಬಾದ್‌ ಬಿರಿಯಾನಿ (Hyderabad biryani) ಹೆಸರು, ವ್ಯಂಜನ ಜಗತ್ಪಸಿದ್ಧ, ಗಂಟಲಿಗೆ ಹಿತಕಾರಿಯೂ ಹೌದು. ಹೈದರಾಬಾದ್‌ ನಗರದ ಹಲವು ಹೋಟೆಲ್‌ಗಳು ಬಿರಿಯಾನಿಗೆ ಹೆಸರುವಾಸಿಯಾಗಿವೆ. ಪಂಜಾಗುಟ್ಟದಲ್ಲಿರುವ ಮೆರಿಡಿಯನ್ ಹೋಟೆಲ್ ಈ ವರ್ಗಕ್ಕೆ ಸೇರುತ್ತದೆ. ಇತ್ತೀಚೆಗೆ ಈ ಹಾಟ್ ಸ್ಪಾಟ್ ನಲ್ಲಿ ಬಿರಿಯಾನಿ ತಿನ್ನಲು ಬಂದ ಗ್ರಾಹಕನೊಬ್ಬ ಕೊಲೆಯಾಗಿದ್ದಾನೆ ( murder). ವಿವರ ನೋಡುವುದಾದರೆ ಹಳೇ ಪಟ್ಟಣ ಚಂದ್ರಯ್ಯನಗುಟ್ಟದ ಲಿಯಾಖತ್ ಎಂಬ ಯುವಕ (youth) ಮೆರಿಡಿಯನ್ ಹಟ್ಸ್‌ಗೆ ಬಿರಿಯಾನಿ ತಿನ್ನಲು ಬಂದಿದ್ದ. ಬಿರಿಯಾನಿಗೆ ಹೆಚ್ಚುವರಿ ಮೊಸರು ತರುವಂತೆ ಹೋಟೆಲ್ ಸಿಬ್ಬಂದಿಯನ್ನು (restaurant) ಕೇಳಿದಾಗ ಜಗಳ ಪ್ರಾರಂಭವಾಯಿತು. ಇದರಿಂದ ಸಿಬ್ಬಂದಿ ಲಿಯಾಖತ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪಂಜಗುಟ್ಟ ಪೊಲೀಸರು ಸ್ಥಳಕ್ಕಾಗಮಿಸಿ ಮೆರಿಡಿಯನ್ ಹೋಟೆಲ್ ಸಿಬ್ಬಂದಿಯನ್ನು ಲಿಯಾಖತ್​ ಜೊತೆಗೆ ಠಾಣೆಗೆ ಕರೆದೊಯ್ದಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಮಾತನಾಡುವಾಗ ಲಿಯಾಖತ್ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಪೊಲೀಸರು ಆತನನ್ನು ಸ್ಥಳೀಯ ಡೆಕ್ಕನ್ ಆಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಲಿಯಾಖತ್ ಮೃತಪಟ್ಟಿದ್ದಾರೆ. ಪೊಲೀಸರು ಶವವನ್ನು ಗಾಂಧಿ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ವಿಷಯ ತಿಳಿದ ಮೃತನ ಸಂಬಂಧಿಕರು ಆತಂಕಕ್ಕೊಳಗಾಗಿದ್ದಾರೆ. ಡೆಕ್ಕನ್ ಆಸ್ಪತ್ರೆಗೆ ಬಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂದೋಲನದಲ್ಲಿ ತೊಡಗಿದ್ದಾರೆ.

Also Read: ತೆಲಂಗಾಣದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಹೈಕೋರ್ಟ್​ನ​ ನ್ಯಾಯಮೂರ್ತಿಗೆ ಗಾಯ

ಹಲ್ಲೆ ನಡೆದ ತಕ್ಷಣ ಲಿಯಾಖತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಠಾಣೆಗೆ ಕರೆದೊಯ್ದಿದ್ದಾರೆ ಎಂದು ಲಿಯಾಖತ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಐಎಂ ಎಂಎಲ್ಸಿ ಮಿರ್ಜಾ ರೆಹಮತ್‌ಬಾಗ್ ಅವರು ಪಂಜಗುಟ್ಟ ಪೊಲೀಸ್ ಠಾಣೆಗೆ ಆಗಮಿಸಿ ಪೊಲೀಸರೊಂದಿಗೆ ಮಾತನಾಡಿದರು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೆರಿಡಿಯನ್ ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ