ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಎದುರು ಮಂಡಿಯೂರಿ ಕುಳಿತ ಬ್ರಿಟನ್ ಪ್ರಧಾನಿ ರಿಷಿ ಸುನಕ್ ವಿಧೇಯತೆಗೆ ಜನರ ಮೆಚ್ಚುಗೆ
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರೆದುರು ಮಂಡಿಯೂರಿ ಕುಳಿತ ಬ್ರಿಟನ್ ಪ್ರಧಾನಿ ರಿಷಿ ಸುನಕ್(Rishi Sunak) ವಿದೇಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ, ಎರಡು ದಿನಗಳ ಈ ಸಭೆಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ನಾಯಕರು ಆಗಮಿಸಿದ್ದರು. ಈ ಸಮಯದಲ್ಲಿ ತೆಗೆದು ಕೆಲವು ಚಿತ್ರಗಳು ಮುನ್ನೆಲೆಗೆ ಬಂದಿವೆ. ಬಾಂಗ್ಲಾದೇಶದ ಪ್ರಧಾನಿ ಎದುರು ಮೊಣಕಾಲೂರಿ ಕುಳಿತ ರಿಷಿ ಸುನಕ್ ಅವರ ಚಿತ್ರ ವೈರಲ್ ಆಗಿದೆ.

ರಿಷಿ ಸುನಕ್ ಪ್ರಧಾನಿಯಂಥಾ ಹುದ್ದೆಯಲ್ಲಿದ್ದರೂ ಒಂದು ಚೂರು ಅಹಂವಿಲ್ಲ ಎಂದಿದ್ದಾರೆ. ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೆಪ್ಟೆಂಬರ್ 8 ರಂದು ನವದೆಹಲಿಗೆ ಆಗಮಿಸಿದ್ದರು. ಜಿ-20 ನಾಯಕರ ಶೃಂಗಸಭೆಯಲ್ಲಿ ಭಾರತದ ಅಳಿಯನಾಗಿ ಪಾಲ್ಗೊಳ್ಳುತ್ತಿರುವುದು ನಿಜಕ್ಕೂ ವಿಶೇಷ ಎಂದು ಹೇಳಿದ್ದರು.
ಸುನಕ್ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿಯವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಭಾನುವಾರ ಬೆಳಿಗ್ಗೆ ಮಳೆಯ ನಡುವೆ ದೆಹಲಿಯ ಅಕ್ಷರಧಾಮ ದೇವಸ್ಥಾನವನ್ನು ತಲುಪಿದರು. ಇಲ್ಲಿ ಅವರು ಸಕಲ ವಿಧಿವಿಧಾನಗಳೊಂದಿಗೆ ಸ್ವಾಮಿ ನಾರಾಯಣನ ದರ್ಶನ ಪಡೆದರು. ಬಳಿಕ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಿದರು.
ಮತ್ತಷ್ಟು ಓದಿ: ಜಿ20- ಶೃಂಗಸಭೆ: ಹಸಿರು ಹವಾಮಾನ ನಿಧಿಗೆ 2 ಬಿಲಿಯನ್ ಡಾಲರ್ ಸಹಾಯ ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್
ಇದಕ್ಕೂ ಮೊದಲು, ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಅವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಚರ್ಚೆಗಳಿಗಾಗಿ ದ್ವಿಪಕ್ಷೀಯ ಭೇಟಿಗಾಗಿ ಪಿಎಂ ಮೋದಿ ಸುನಕ್‌ಗೆ ಆಹ್ವಾನವನ್ನು ನೀಡಿದರು.
ಭಾರತ-ಬಾಂಗ್ಲಾದೇಶ ದ್ವಿಪಕ್ಷೀಯ ಸಹಕಾರವನ್ನು ವೈವಿಧ್ಯಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ. ಸಂಪರ್ಕ, ಸಂಸ್ಕೃತಿ, ಜನರಿಂದ ಜನರ ಸಂಪರ್ಕ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಂಬಂಧಗಳನ್ನು ಬಲಪಡಿಸಲು ಅವರು ಒಪ್ಪಿಕೊಂಡಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ