ರಾಜ್ಯದ ಜನರ ಕಷ್ಟಗಳನ್ನು ತಿಳಿಯಲು ನಮ್ಮೊಂದಿಗೆ ನಡೆಯಲಿ, ಕೆಎಸ್​​ಆರ್​​ಗೆ ಈ ಶೂ ಉಡುಗೊರೆಯಾಗಿ ನೀಡುವೆ: ವೈಎಸ್ ಶರ್ಮಿಳಾ

|

Updated on: Feb 02, 2023 | 6:02 PM

ಒಂದು ದಿನ ನಮ್ಮ ಜೊತೆಗೆ ನಡೆಯಲಿ ಎಂದು ನಾನು ಮುಖ್ಯಮಂತ್ರಿಯವರಿಗೆ ಸವಾಲು ಹಾಕುತ್ತೇನೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯಿಂದ ಇದ್ದಾರೆ ಮತ್ತು ನಿಮಗೆ ಪರಿಹರಿಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ತೋರಿಸಿದರೆ ನಾನು ರಾಜಕೀಯದಿಂದ ಹಿಂದೆ ಸರಿಯುತ್ತೇನೆ ಎಂದ ಶರ್ಮಿಳಾ

ರಾಜ್ಯದ ಜನರ ಕಷ್ಟಗಳನ್ನು ತಿಳಿಯಲು ನಮ್ಮೊಂದಿಗೆ ನಡೆಯಲಿ, ಕೆಎಸ್​​ಆರ್​​ಗೆ ಈ ಶೂ ಉಡುಗೊರೆಯಾಗಿ ನೀಡುವೆ: ವೈಎಸ್ ಶರ್ಮಿಳಾ
ವೈಎಸ್ ಶರ್ಮಿಳಾ
Follow us on

ಹೈದರಾಬಾದ್:  ರಾಜ್ಯದ ಜನರ ಕಷ್ಟಗಳನ್ನು ತಿಳಿಯಲು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (K Chandrasekhar Rao) ಕೇವಲ ಮೂರು ಕಿಲೋಮೀಟರ್ ನಮ್ಮೊಂದಿಗೆ ನಡೆಯಲಿ ಎಂದು ವೈಎಸ್‌ಆರ್ ತೆಲಂಗಾಣ ಪಕ್ಷದ (YSR Telangana Party) ಅಧ್ಯಕ್ಷೆ ವೈಎಸ್ ಶರ್ಮಿಳಾ (YS Sharmila) ಸವಾಲು ಹಾಕಿದ್ದಾರೆ. ಪಾದಯಾತ್ರೆ ಮಾಡುವುದಕ್ಕಾಗಿ ಕೆಸಿಆರ್ ಅವರಿಗೆ ಹೊಸ ಶೂ ಉಡುಗೊರೆಯಾಗಿ ನೀಡುವುದಾಗಿ  ಶೂ ಬಾಕ್ಸ್ ತೋರಿಸಿ ಶರ್ಮಿಳಾ ಹೇಳಿದ್ದಾರೆ.ಕಳೆದ ಒಂಬತ್ತು ವರ್ಷಗಳಿಂದ ರಾಜ್ಯದ ಜನರು ಸಂಕಷ್ಟದಲ್ಲಿದ್ದಾರೆ. ರಾಜ್ಯದಲ್ಲಿ ಈ ನಿರಂಕುಶ ಮತ್ತು ಅಸಮರ್ಥ ಆಡಳಿತದಿಂದ ಬಳಲದ ಯಾವುದೇ ವಿಭಾಗವಿಲ್ಲ. ರೈತರ ಸಂಕಟದಿಂದ ಹಿಡಿದು ಯುವಕರ ಸಂಕಷ್ಟ, ಮಹಿಳೆಯರ ಸಮಸ್ಯೆಗಳು ಶಿಕ್ಷಣದವರೆಗೆ ಕೆಸಿಆರ್ ಅವರು ನೀಡಿದ ಪ್ರತಿ ಭರವಸೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಶರ್ಮಿಳಾ ಹೇಳಿದ್ದಾರೆ.

ತಮ್ಮ ಪ್ರಜಾ ಪ್ರಸ್ಥಾನಂ ಪಾದಯಾತ್ರೆಯ ಕೊನೆಯ ಹಂತವನ್ನು ಪ್ರಾರಂಭಿಸುವ ಮುನ್ನವೇ ವೈಆರ್​​ಎಸ್ ಮುಖ್ಯಸ್ಥೆ ಈ ಹೇಳಿಕೆ ನೀಡಿದ್ದಾರೆ.
ಕೆಸಿಆರ್ ಅವರ ವೈಫಲ್ಯಗಳು ಮತ್ತು ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಪ್ರಯತ್ನಿಸಿದ್ದೆ. ಆಗ ನಮ್ಮ ಪಾದಯಾತ್ರೆಯ ಮೇಲೆ ನಿರ್ದಯವಾಗಿ ದಾಳಿ ಮಾಡಲಾಯಿತು ಎಂದು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ಆರ್ ರೆಡ್ಡಿ ಅವರ ಪುತ್ರಿ ಹೇಳಿದ್ದಾರೆ.


ರಾಜ್ಯ ಸರ್ಕಾರ ಪಾದಯಾತ್ರೆಗೆ ತಡೆಯೊಡ್ಡಿ ಎರಡು ತಿಂಗಳ ವಿರಾಮದ ನಂತರ, ಶರ್ಮಿಳಾ ತಮ್ಮ ಪಾದಯಾತ್ರೆಯನ್ನು ವಾರಂಗಲ್ ಜಿಲ್ಲೆಯಲ್ಲಿ ಪುನರಾರಂಭಿಸಲು ಸಿದ್ಧರಾಗಿದ್ದಾರೆ.  ಶೂ ಬಾಕ್ಸ್ ಮೇಲಕ್ಕೆತ್ತಿ ತೋರಿಸಿದ ಶರ್ಮಿಳಾ ನೀವೂ ನಮ್ಮೊಂದಿಗೆ ನಡೆಯಿರಿ ಎಂದು ಮುಖ್ಯಮಂತ್ರಿಗೆ ಸವಾಲು ಹಾಕಿದ್ದು , ನಿಮ್ಮ ಪಾದದ ಗಾತ್ರಕ್ಕೆ ಅನುಗುಣವಾಗಿ ಹೊಸ ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ: Kannur: ಚಲಿಸುತ್ತಿದ್ದ ಕಾರಿಗೆ ಬೆಂಕಿ, ಗರ್ಭಿಣಿ ಸೇರಿ ಇಬ್ಬರು ಸಜೀವ ದಹನ, ನಾಲ್ವರು ಪ್ರಾಣಾಪಾಯದಿಂದ ಪಾರು

ಒಂದು ದಿನ ನಮ್ಮ ಜೊತೆಗೆ ನಡೆಯಲಿ ಎಂದು ನಾನು ಮುಖ್ಯಮಂತ್ರಿಯವರಿಗೆ ಸವಾಲು ಹಾಕುತ್ತೇನೆ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯೂ ನೆಮ್ಮದಿಯಿಂದ ಇದ್ದಾರೆ ಮತ್ತು ನಿಮಗೆ ಪರಿಹರಿಸಲು ಯಾವುದೇ ಸಮಸ್ಯೆಗಳಿಲ್ಲ ಎಂದು ತೋರಿಸಿದರೆ ನಾನು ರಾಜಕೀಯದಿಂದ ಹಿಂದೆ ಸರಿಯುತ್ತೇನೆ. ನಮ್ಮೊಂದಿಗೆ ನಡೆಯಲು ನಾನು ಈ ಹೊಸ ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಇದು ನಿಮ್ಮ ಗಾತ್ರಕ್ಕೆ ಅನುಗುಣವಾಗಿರುತ್ತದೆ. ಅದು ಹೊಂದಿಕೆಯಾಗದಿದ್ದಲ್ಲಿ ವಿನಿಮಯ ಮಾಡಿಕೊಳ್ಳಲು ಬಿಲ್ ಇದೆ ಎಂದು ಶರ್ಮಿಳಾ ಹೇಳಿದ್ದಾರೆ.

ಎರಡು ತಿಂಗಳ ಹಿಂದೆ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಕಾರ್ಯಕರ್ತರು ಬಸ್‌ಗೆ ಬೆಂಕಿ ಹಚ್ಚಿದ್ದರು. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪಾದಯಾತ್ರೆ ಹಿಂಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು. ಶರ್ಮಿಳಾ ಅವರನ್ನು ನಂತರ ಹೈದರಾಬಾದ್‌ಗೆ ಸ್ಥಳಾಂತರಿಸಲಾಯಿತು ಎಂದು ವರದಿಯಾಗಿದೆ.ಆದರೆ ಮುಖ್ಯಮಂತ್ರಿಯವರ ಅಧಿಕೃತ ನಿವಾಸದ ಕಡೆಗೆ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುವಾಗ ಮತ್ತೆ ಬಂಧಿಸಲಾಯಿತು. ದಾಳಿಯಲ್ಲಿ ಹಾನಿಗೊಳಗಾದ ಕಾರನ್ನು ಶರ್ಮಿಳಾ ಮುಖ್ಯಮಂತ್ರಿಗಳ ನಿವಾಸದತ್ತ ಚಲಾಯಿಸಿ ಸಿಎಂ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ಬಯಸಿದ್ದರು. ಆದರೆ ಪೊಲೀಸರು ಆಕೆಯನ್ನು ದಾರಿ ಮಧ್ಯೆ ತಡೆದರು. ಆಕೆ ಕಾರಿನಿಂದ ಹೊರಬರಲು ನಿರಾಕರಿಸಿದಾಗ, ಪೊಲೀಸರು ಕಾರಿನಲ್ಲಿ ಶರ್ಮಿಳಾ ಕುಳಿತಿದ್ದಂತೆ ಅದನ್ನು ಪೊಲೀಸ್ ಠಾಣೆಗೆ ಎಳೆದೊಯ್ದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Thu, 2 February 23