‘ಇಲಾಖಾ ದಾಳಿಯಿಂದ ಸಿಕ್ಕ ಹಣದ ವಿಶೇಷ ಸದುಪಯೋಗ’: ಡಾ ರವಿಕಿರಣ ಪಟವರ್ಧನ ಶಿರಸಿ

| Updated By: ಅಕ್ಷತಾ ವರ್ಕಾಡಿ

Updated on: Dec 15, 2023 | 5:28 PM

ಎರಡು ದಿನಗಳ ಹಿಂದೆ ಒರಿಸ್ಸಾದಲ್ಲಿ ನಡೆದ ದಾಳಿಯಲ್ಲಿ 351 ಕೋಟಿ ನಗದು ಸಂಗ್ರಹವಾಗಿದ್ದ ಸುದ್ದಿ 48 ಗಂಟೆಗಳ ನಂತರ ನಮಗೆ ನಿಮಗೆ ಮರೆತು ಹೋಗಿದೆ. ದಾಳಿಗಳಿಂದ ಸಂಗ್ರಹದ ಹಣ ಜನಸಾಮಾನ್ಯರಿಗೆ ಮರೆಯದಂತೆ ಒಂದು ಸೂಕ್ತ ಹೊಸ ಉಪಾಯವನ್ನು ಸರ್ಕಾರ ಮಾಡಬೇಕು ಅಂತ ನನ್ನ ಆಗ್ರಹವಾಗಿದೆ.

ಇಲಾಖಾ ದಾಳಿಯಿಂದ ಸಿಕ್ಕ ಹಣದ ವಿಶೇಷ ಸದುಪಯೋಗ: ಡಾ ರವಿಕಿರಣ ಪಟವರ್ಧನ ಶಿರಸಿ
Follow us on

ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ದಾಳಿ, ಇಡೀ ದಾಳಿ, ಸಿಬಿಐ ದಾಳಿ, ಜಿಎಸ್‌ಟಿ ದಾಳಿ, ಚುನಾವಣಾ ಆಯೋಗದಿಂದ ದಾಳಿ ಒಂದು ರೀತಿಯಲ್ಲಿ ದಾಳಿಗಳದ್ದೇ ದಾಳಿಯಾಗಿದೆ. ಈ ರೀತಿಯ ದಾಳಿಗಳಿಂದ ಸಂಗ್ರಹವಾದ ಅಂತಹ ಹಣ ಚಿನ್ನ, ಬೆಳ್ಳಿ, ಆಸ್ತಿ,ವಾಹನ ಮುಂತಾದವುಗಳು ಭಾರತ್ ಸರಕಾರದ ಖಜಾನೆಗೆ ತಲುಪುತ್ತದೆ. ಇನ್ನು ಚರಾ ಆಸ್ತಿ ಗಳು ಸಂಗ್ರಹವಾದ್ದದ್ದು ಒಂದೊಂದು ದಿನ ಹರಾಜಿನ ಮೂಲಕ ಅದರಿಂದ ಹಣ ಸಂಗ್ರಹಿಸಿ ಅದು ಭಾರತ ಸರ್ಕಾರದ ಖಜಾನೆ ತಲುಪುತ್ತದೆ. ದಾಳಿಗಳ ಹಣ ಪತ್ರಿಕೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಒಂದರಿಂದ ಐದು ದಿನಗಳವರೆಗೆ ಸುದ್ದಿಯಾಗಿ ಓಡಾಡುತ್ತದೆ ಆನಂತ ಮರೆಯುತ್ತದೆ. ಎರಡು ದಿನಗಳ ಹಿಂದೆ ಒರಿಸ್ಸಾದಲ್ಲಿ ನಡೆದ ದಾಳಿಯಲ್ಲಿ 351 ಕೋಟಿ ನಗದು ಸಂಗ್ರಹವಾಗಿದ್ದ ಸುದ್ದಿ 48 ಗಂಟೆಗಳ ನಂತರ ನಮಗೆ ನಿಮಗೆ ಮರೆತು ಹೋಗಿದೆ. ದಾಳಿಗಳಿಂದ ಸಂಗ್ರಹದ ಹಣ ಜನಸಾಮಾನ್ಯರಿಗೆ ಮರೆಯದಂತೆ ಒಂದು ಸೂಕ್ತ ಹೊಸ ಉಪಾಯವನ್ನು ಸರ್ಕಾರ ಮಾಡಬೇಕು ಅಂತ ನನ್ನ ಆಗ್ರಹಾರವಾಗಿದೆ.

ಈ ರೀತಿ ಧಾಳಿಗಳಿಂದ ಸಂಗ್ರವಾದಂತಹ ಹಣದಿಂದ ಆಯಾ ರಾಜ್ಯದಲ್ಲಿ ಆಯಾ ವಿಭಾಗಗಳಲ್ಲಿ ಇರುವಂತಹ ಸರಕಾರಿ ಪ್ರಾಥಮಿಕ ಶಾಲೆಗಳ ಶೌಚಾಲಯ ಸ್ವಚ್ಛತೆಗೆ ಈ ಹಣವನ್ನು ಠೇವು ರೂಪದಲ್ಲಿಇಟ್ಟು ಅದರಿಂದ ಬಂದಂತಹ ಬಡ್ಡಿಯಿಂದ ಶೌಚಾಲಯ ಸ್ವಚ್ಛತಾ ವ್ಯವಸ್ಥೆಯನ್ನು ನಿರ್ವಹಿಸುವಂತಾಗಬೇಕು ಅಲ್ಲದೆ ಅಲ್ಲಲ್ಲಿ ಈ ದಾಳಿಯಿಂದ ಸಂಗ್ರವಾದಂತಹ ಹಣವನ್ನು ಈ ಕೆಲಸಕ್ಕೆ ಉಪಯೋಗಿಸುತ್ತಿದ್ದೇವೆ ಎಂಬ ಮಾಹಿತಿ ಫಲಕವನ್ನು ಅಳವಡಿಸಬೇಕು. ಶೌಚಾಲಯಗಳನ್ನು ಎಲ್ಲಾ ಕಡೆಗಳಲ್ಲಿ ನಿರ್ಮಾಣವಂತು ಮಾಡಿದೆ ಆದರೆ ಇದರ ಸ್ವಚ್ಛತೆಯ ಕಡೆಗೆ ವಿಶೇಷ ಹಣದ,ಗಮನದ ಅವಶ್ಯಕತೆ ಇದ್ದು ಈ ದಾಳಿಯ ಹಣದಿಂದ ಈ ವ್ಯವಸ್ಥೆ ಉತ್ತಮವಾಗಿ ಸಾಗಬಹುದು ಅಂತ ಅನಿಸಿಕೆ. ಯಾವ ವಿಭಾಗದಲ್ಲಿ ಈ ದಾಳಿಯಿಂದ ಹಣ ಸಂಗ್ರಹವಾಗಿರುತ್ತದೆ ಆ ಭಾಗದ ಹೆದ್ದಾರಿ ರಾಜ್ಯ ಹೆದ್ದಾರಿ ನಿರ್ವಹಣೆಗೆ, ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಗೆ, ಸರಕಾರಿ ಆಸ್ಪತ್ರೆ ನಿರ್ವಹಣೆಗೆ , ಸ್ಮಶಾನಗಳ ನಿರ್ಮಾಣ ನಿರ್ವಹಣೆಗೆ, ಗ್ರಾಮ ಪಂಚಾಯಿತಿಯ ಗಟಾರ್ ನಿರ್ವಹಣೆಗೆ ಈ ಹಣವನ್ನು ಉಪಯೋಗಿಸುವಂತಹಾಗಬೇಕು ಅಲ್ಲದೆ ಈ ಮಾಹಿತಿಯ ಫಲಕಗಳು ಈ ಸ್ಥಳದಿಂದ ವ್ಯಕ್ತಿಯ, ಸಂಸ್ಥೆಯ ಮೇಲಿನ ದಾಳಿಯಿಂದ ಸಂಗ್ರವಾದಂತಹ ಹಣ ಎಂಬ ಫಲಕ ಎಲ್ಲ ಕಡೆಗಳಲ್ಲಿ ಇರುವಂತಾಗಬೇಕು ಆಗ ಈ ದಾಳಿಯ ನೆನಪು ಸದಾ ಜನರಲ್ಲಿ ಇರುತ್ತದೆ ಅಷ್ಟೇ ಅಲ್ಲದೆ ಈ ರೀತಿಯ ಗುಪ್ತಚರ ಮಾಹಿತಿಗಳು ಇಲಾಖೆಗೆ ಸುಲಭವಾಗಿ ಸಾರ್ವನಿಕರಿಂದಲೇ ಲಭಿಸುವಂತೆ ಈ ಉಪಾಯದಿಂದ ಸಾಧ್ಯ.

ಈ ರೀತಿಯ ಸಂಗ್ರಹದ ಹಣವನ್ನು ನೇರವಾಗಿ ಸರಕಾರದ ಸಾಲದ ತೀರಿಸಲಿಕ್ಕೆ ಬಳಸಬೇಕು. ಎಲ್ಲ ನಿಯತ ಕಾಲಿಕ ಪತ್ರಿಕೆಗಳಲ್ಲಿ ಈ ಹಣ ನೇರವಾಗಿ ಭಾರತ್ ಸರ್ಕಾರದ ಸಾಲ ತೀರಿಸುವ ಪ್ರಕ್ರಿಯೆಗೆ ಉಪಯೋಗಿಸಿದ್ದೇವೆ ಎಂಬ ಜಾಹೀರಾತನ್ನು ಹಣ ಸಂಗ್ರಹದ ಸ್ಥಳ ವ್ಯಕ್ತಿಯ ಹೆಸರಿನೊಂದಿಗೆ ಜಾಹೀರಾತನ್ನು ನೀಡಬೇಕು. ಇದರಿಂದಾಗಿ ಭಾರತ್ ಸರ್ಕಾರದ ಸಾಲದ ಪ್ರಮಾಣ ಸುಲಭವಾಗಿ ಇಳಿಕೆ ಆಗಬೇಕು.

ಭಾರತದಲ್ಲಿ ಪ್ರಗತಿ ಪ್ರಗತಿ ಪ್ರಗತಿ ಹೇಳುವ ಶಬ್ದ ಈಗ ಕೇಳುತ್ತಿದ್ದೇವೆ ಈ ಮೊತ್ತದ ಬಜೆಟ್ ಈ ಮೊತ್ತದ ನಮ್ಮ ಆರ್ಥಿಕತೆ ಎಂಬ ಶಬ್ದಗಳು ಕೇಳಿ ಬರುತ್ತಿದೆ. ಅದರಂತೆ ಭಾರತ್ ಸರ್ಕಾರವು ಸಾಲ ಮುಕ್ತವಾಗಬೇಕು ಎನ್ನುವುದು ಇಲ್ಲಿರುವಂತಹ ಒಂದು ಮಹತ್ವದ ಕಳಕಳಿ, ದೇಶದ ಒಳಗಿನ ಆಂತರಿಕ ಮೂಲಗಳಿಂದ ಸಂಗ್ರಹವಾದಂತ ಸಾಲ ಹಾಗೂ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಂತಹ ಸಾಲ.

ಎರಡು ಸಾಲಗಳಿಂದ ಭಾರತ್ ಸರ್ಕಾರ ಮುಕ್ತವಾದರೆ ಒಂದು ಡಾಲರಿಗೆ ಒಂದು ರೂಪಾಯಿ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವೇ ಇಲ್ಲ. ಅಥವಾ ಭಾರತ್ ಸರಕಾರದ ಸಾಲಗಳಿಗೆ ಪ್ರಜೆಗಳು ನೇರವಾಗಿ ವಂತಿಕೆಯನ್ನ ಕೊಡುವಂತಹ ಒಂದು ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ರೀತಿಯಾಗಿ ಸಾಲ ತೀರಿಸುವ ಪ್ರಕ್ರಿಯೆಗೆ ನೀಡಿದವಂತಿಕೆಗೆ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಯೋಚಿಸಬೇಕು, ಹಾಗೂ ಆ ಹಣದ ಮೂಲದ ಬಗ್ಗೆ ಯಾವುದೇ ರೀತಿಯ ವಿಚಾರಣೆ ಮಾಡದೇ ಇರುವಂತಹ ಒಂದು ದೊಡ್ಡ ಮನಸ್ಸು ಮಾಡಬೇಕು. ಒಂದು ಉದಾಹರಣೆಗೆ ಎಲ್ಲ ರಾಜಕಾರಣಿಗಳು 140 ಕೋಟಿ ಜನ 140 ಕೋಟಿ ಜನ ಎನ್ನುವ ಶಬ್ದ ಪದೇಪದೇ ಉಪಯೋಗಿಸುತ್ತಾರೆ. ಈ 140 ಕೋಟಿ ಜನ ಒಂದು ದಿನಕ್ಕೆ ಒಂದು ರೂಪಾಯಿಯನ್ನು ನೀಡಿದರೆ ಭಾರತ್ ಸರಕಾರದ 140 ಕೋಟಿ ರೂಪಾಯಿ ಸಾಲ ಒಂದೇ‌ ದಿನದಲ್ಲಿ ತೀರಿವುದು ಎನ್ನುವಂತಹ ಒಂದು ವಾಸ್ತವಿಕ ಸಂಗತಿಯಾಗಿದೆ. ಭಾರತ್ ಸರಕಾರ ಆದಷ್ಟು ಬೇಗ ಸಾಲ ಮುಕ್ತವಾಗಬೇಕು.

ಲೇಖನ : ಡಾ ರವಿಕಿರಣ ಪಟವರ್ಧನ ಶಿರಸಿ

ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: