ಧೀರಜ್ ಸಾಹು ಐಟಿ ಕೇಸ್: 6ನೇ ದಿನವೂ ಮುಂದುವರೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ
ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 6ನೇ ದಿನವೂ ದಾಳಿ ಮುಂದುವರೆಸಿದ್ದಾರೆ. ಅಧಿಕಾರಿಗಳು ಒಡಿಶಾದ ಬಲಂಗೀರ್‌ನಲ್ಲಿರುವ ಸಂಸದರಿಗೆ ಸಂಪರ್ಕ ಹೊಂದಿರುವ ಕಂಪನಿಯನ್ನು ಪ್ರವೇಶಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಅನೇಕ ಸ್ಥಳಗಳಲ್ಲಿ ಸಾಹುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಯ 351 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ.
ಕಾಂಗ್ರೆಸ್ ಸಂಸದ ಧೀರಜ್ ಸಾಹು(Dheeraj Sahu) ಅವರ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 6ನೇ ದಿನವೂ ದಾಳಿ ಮುಂದುವರೆಸಿದ್ದಾರೆ. ಅಧಿಕಾರಿಗಳು ಒಡಿಶಾದ ಬಲಂಗೀರ್‌ನಲ್ಲಿರುವ ಸಂಸದರಿಗೆ ಸಂಪರ್ಕ ಹೊಂದಿರುವ ಕಂಪನಿಯನ್ನು ಪ್ರವೇಶಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯು ಒಡಿಶಾ ಮತ್ತು ಜಾರ್ಖಂಡ್‌ನ ಅನೇಕ ಸ್ಥಳಗಳಲ್ಲಿ ಸಾಹುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಯ 351 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿದೆ.
ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡ ಎಲ್ಲಾ ಹಣವನ್ನು ಒಡಿಶಾದ ಬಲಂಗಿರ್‌ನಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಯಲ್ಲಿ ಠೇವಣಿ ಮಾಡುತ್ತಾರೆ. ಸಾಹು ಜೊತೆ ನಂಟು ಹೊಂದಿರುವ ಒಡಿಶಾ ಮೂಲದ ಡಿಸ್ಟಿಲರಿ ಕಂಪನಿಯ ಮೇಲೆ ಈ ದಾಳಿಗಳು ಕಳೆದ ಐದು ದಿನಗಳಿಂದ ನಡೆಯುತ್ತಿವೆ.
ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್, ಅದರ ಪ್ರವರ್ತಕರು ಮತ್ತು ಇತರರ ವಿರುದ್ಧ ಡಿಸೆಂಬರ್ 6 ರಂದು ತೆರಿಗೆ ವಂಚನೆ ಮತ್ತು ಆಫ್-ದಿ-ಬುಕ್ ವಹಿವಾಟುಗಳ ಆರೋಪದ ಮೇಲೆ ದಾಳಿಗಳನ್ನು ಪ್ರಾರಂಭಿಸಲಾಗಿತ್ತು.
ಮತ್ತಷ್ಟು ಓದಿ: ಧೀರಜ್ ಸಾಹು ಐಟಿ ದಾಳಿ ಕೇಸ್: ಭ್ರಷ್ಟಾಚಾರ ಅವರ ಸ್ವಭಾವದಲ್ಲೇ ಇದೆ: ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ
ಆದಾಯ ತೆರಿಗೆ ಅಧಿಕಾರಿಗಳು 176 ಬ್ಯಾಗ್‌ಗಳಲ್ಲಿರುವ ಹಣದ ಎಣಿಕೆಯನ್ನು ಪೂರ್ಣಗೊಳಿಸಿದ್ದಾರೆ. ಬಿಜೆಪಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಮೇಲೆ ತನ್ನ ದಾಳಿಯನ್ನು ಮುಂದುವರೆಸಿವೆ.
ಸ್ವೀಕರಿಸಿದ 176 ಬ್ಯಾಗ್‌ಗಳಲ್ಲಿ 140 ಬ್ಯಾಗ್‌ಗಳಿಗೆ ಖಾತೆ ನೀಡಲಾಗಿದೆ ಮತ್ತು ಉಳಿದ ಬ್ಯಾಗ್‌ಗಳ ಎಣಿಕೆಯನ್ನು ಸೋಮವಾರ ನಿಗದಿಪಡಿಸಲಾಗಿದೆ ಎಂದು ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ಭಾನುವಾರ ತಿಳಿಸಿದ್ದಾರೆ.
ನಾವು 176 ಬ್ಯಾಗ್‌ಗಳನ್ನು ಸ್ವೀಕರಿಸಿದ್ದೇವೆ ಮತ್ತು ಅವುಗಳಲ್ಲಿ 140 ಎಣಿಕೆ ಮಾಡಲಾಗಿದೆ, ಉಳಿದದ್ದನ್ನು ಇಂದು ಎಣಿಸಲಾಗುತ್ತದೆ. 3 ಬ್ಯಾಂಕ್‌ಗಳ ಅಧಿಕಾರಿಗಳು ಎಣಿಕೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ನಮ್ಮ 50 ಅಧಿಕಾರಿಗಳು ಭಾಗಿಯಾಗಿದ್ದಾರೆ. ಸುಮಾರು 40 (ಕರೆನ್ಸಿ ಎಣಿಕೆ) ಯಂತ್ರಗಳನ್ನು ಇಲ್ಲಿಗೆ ತರಲಾಗಿದ್ದು, 25 ಬಳಕೆಯಲ್ಲಿವೆ ಮತ್ತು 15 ಅನ್ನು ಬ್ಯಾಕಪ್ ಆಗಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ದೇಶಿ ಮದ್ಯದ ನಗದು ಮಾರಾಟದ ಮೂಲಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಂದಾಜಿಸಿದೆ. ಅತ್ಯಂತ ಹೆಚ್ಚಿನ ನಗದು ಹಣದ ವಶದ ಹಿಂದಿನ ದಾಖಲೆಯು ಕಾನ್ಪುರದ ಉದ್ಯಮಿಯೋರ್ವನ ಹೆಸರಿನಲ್ಲಿತ್ತು. ಆದಾಯ ತೆರಿಗೆ ಅಧಿಕಾರಿಗಳು 2019ರಲ್ಲಿ ನಡೆದಿದ್ದ ದಾಳಿಯಲ್ಲಿ ಅವರಿಂದ 257 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Mon, 11 December 23