AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!

Success story: ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು.

ಯಶಸ್ಸಿನ ಕಥೆ: ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ!
ಛಲಬಿಡದ ಅಭಿಲಾಶಾ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಹೀಗೆ! Image Credit source: daijiworld.com
ಸಾಧು ಶ್ರೀನಾಥ್​
|

Updated on:Dec 11, 2023 | 12:19 PM

Share

ಹರಿಯಾಣ, ಡಿಸೆಂಬರ್​ 11: ಅಭಿಲಾಷಾ ಶರ್ಮಾ ಹುಟ್ಟಿ ಬೆಳೆದದ್ದು ಹರಿಯಾಣದಲ್ಲಿ. ಕಠಿಣವಾದ ಐಎಎಸ್​/ ಐಪಿಎಸ್​​ ಆಗಲು UPSC ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಅದರಲ್ಲಿ ಆರಂಭಿಕ ಪ್ರಯತ್ನಗಳಲ್ಲಿ ಅವರು ಅಗಾಧವಾದ ಕಷ್ಟಗಳನ್ನು ಎದುರಿಸಿ, ಯಶಸ್ಸು ಸಾಧಿಸಿದ್ದಾರೆ. ಕೇವಲ ಸಂಪೂರ್ಣ ಏಕಾಗ್ರತೆ, ಛಲ ಮತ್ತು ದೃಢ ನಿರ್ಧಾರದ ಮೂಲಕ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್​​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

UPSC ಯಲ್ಲಿ ಅಭಿಲಾಷಾ ಅವರ ಮೊದಲ ಪ್ರಯತ್ನ 2013 ರಲ್ಲಿ ನಡೆದಿತ್ತು. ಅದಾದಮೇಲೆ ಸತತ ಮೂರು ಪ್ರಯತ್ನಗಳು ವಿಫಲವಾದವು. ಅದರಿಂದ ಅವರು ಸಂದಿಗ್ಧತೆಗೆ ಸಿಲುಕಿದರು. ಆದಾಗ್ಯೂ, ತಮ್ಮನ್ನು ತಾನೇ ಹುರಿದುಂಬಿಸುತ್ತಾ, ಅವರು ದಿನದಲ್ಲಿ 15 ರಿಂದ 16 ಗಂಟೆಗಳ ಕಾಲ ಶ್ರಮದಾಯಕ ಅಧ್ಯಯನಗಳಿಗೆ ಮೀಸಲಿಡಲು ಪ್ರಾರಂಭಿಸಿದಳು. ಅವರು ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ರಾಜಕೀಯ ವಿಜ್ಞಾನವನ್ನು ತನ್ನ ಐಚ್ಛಿಕ ವಿಷಯಗಳಾಗಿ ಆರಿಸಿಕೊಂಡಿದ್ದರು ಎಂದು daijiworld.com ವರದಿ ಮಾಡಿದೆ.

ತನ್ನ ನಾಲ್ಕನೇ ಪ್ರಯತ್ನದಲ್ಲಿ, ಅಭಿಲಾಷಾ ಪ್ರಭಾವಶಾಲಿಯಾಗಿ ಅಖಿಲ ಭಾರತ ಮಟ್ಟದಲ್ಲಿ AIR 68 ಶ್ರೇಣಿಯನ್ನು ಪಡೆದರು. ಈ ಮಧ್ಯೆ, 2017 ರಲ್ಲಿ ಅಭಿಲಾಷಾ ವಿವಾಹವಾದರು. ತಮ್ಮ ಪತಿ ಅಂಕಿತ್‌ಗೆ ತನ್ನ ಯಶಸ್ಸನ್ನು ಅಂಕಿತಗೊಳಿಸಿದರು. ಅಭಿಲಾಷಾ ಪ್ರಕಾರ ಅವರ ಸಂಬಂಧವು ಸ್ನೇಹದಿಂದ ಪ್ರೀತಿಗೆ ತಿರುಗಿತ್ತು. ಮುಂದೆ ಮದುವೆಯಲ್ಲಿ ಕೊನೆಗೊಂಡಿತು. ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲದಲ್ಲಿ ಅಭಿಲಾಷಾಳನ್ನು ಮನಃಪೂರ್ವಕವಾಗಿ ಬೆಂಬಲಿಸಿದ ಪ್ರೇರಕ ಅಂಶವೆಂದರೆ ಅಂಕಿತ್.

ಇದನ್ನೂ ಓದಿ: ಮೈಮುರಿದು ದುಡಿದರೆ ಭೂತಾಯಿ ಕೈ ಹಿಡಿಯುತ್ತಾಳೆ ಎನ್ನುವ ಭಾಲ್ಕಿ ರೈತ ಗೋಲ್ಡನ್ ಸೀತಾಫಲ ಬೆಳೆದು ಬದುಕು ಬಂಗಾರವಾಗಿಸಿಕೊಂಡಿದ್ದಾರೆ!

ಐಎಎಸ್‌ ಆಕಾಂಕ್ಷಿಗಳಿಗೆ ದಿನಪತ್ರಿಕೆಗಳನ್ನು ಓದುವುದನ್ನು ದಿನಚರಿಯಾಗಿ ಮಾಡಿಕೊಳ್ಳುವಂತೆ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಮಾಹಿತಿ ಪಡೆಯುವಂತೆ ಅಭಿಲಾಷಾಗೆ ಅವರು ಸಲಹೆ ನೀಡಿದ್ದಾರೆ. ಅಧ್ಯಯನ ಮಾಡುವಾಗ ಸರಿಯಾಗಿ ಗಮನ ಕೇಂದ್ರೀಕರಿಸದಿದ್ದರೆ ಅದು ದೊಡ್ಡ ಅಡಚಣೆಯಾಗಬಹುದು ಎಂದು ಅಭಿಲಾಷಾ ಜೋಡಿ ಚೆನ್ನಾಗಿ ಅರಿತಿದ್ದರು. ಅದರಂತೆ ಕಠಿಣ ಪರಿಶ್ರಮ ಹಾಕಿ, 68 ಶ್ರೇಣಿಯಲ್ಲಿ UPSC ಪಾಸ್ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:54 am, Mon, 11 December 23

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ