ಧೀರಜ್ ಸಾಹು ಐಟಿ ದಾಳಿ ಕೇಸ್: ಭ್ರಷ್ಟಾಚಾರ ಅವರ ಸ್ವಭಾವದಲ್ಲೇ ಇದೆ: ಕಾಂಗ್ರೆಸ್ ವಿರುದ್ಧ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ
ಕಾಂಗ್ರೆಸ್ ಸಂಸದ ಧೀರಜ್ ಸಾಹು ಐಟಿ ದಾಳಿಯಲ್ಲಿ 200 ಕೋಟಿ ರೂ.ಗೂ ಅಧಿಕ ನಗದು ವಶಪಡಿಸಿಕೊಂಡ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿದ್ದು, ಸ್ವಾತಂತ್ರ್ಯದ ನಂತರ ಸಂಸದರೊಬ್ಬರ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದು, ನನಗೆ ತುಂಬಾ ಆಶ್ಚರ್ಯವಾಗಿದೆ. ಆದರೆ ಭ್ರಷ್ಟಾಚಾರ ಅವರ ಸ್ವಭಾವದಲ್ಲಿಯೇ ಅಡಿಗಿರುವುದರಿಂದ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಸಂಸದ ಧೀರಜ್ ಸಾಹು (Dheeraj sahu) ಗೆ ಸೇರಿದ ಒಡಿಶಾದ ಅತಿದೊಡ್ಡ ಮದ್ಯ ತಯಾರಿಕಾ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿ. ಕಚೇರಿಗಳ ಮೇಲೆ ಐಟಿ ದಾಳಿ ಮಾಡಿದ್ದು, ಈ ವೇಳೆ ಒಟ್ಟು 290 ಕೋಟಿ ರೂ. ನಗದು ಪತ್ತೆಯಾದ ಬಗ್ಗೆ ಮಾಹಿತಿ ಇದೆ. ಸದ್ಯ ಈ ವಿಚಾರವಾಗಿ ಮಾಧ್ಯಮದವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದು, ಭ್ರಷ್ಟಾಚಾರ ಅವರ ಸ್ವಭಾವದಲ್ಲಿಯೇ ಅಡಿಗಿರುವುದರಿಂದ ಕಾಂಗ್ರೆಸ್ ಮೌನಕ್ಕೆ ಶರಣಾಗಿದೆ. ಸ್ವಾತಂತ್ರ್ಯದ ನಂತರ ಸಂಸದರೊಬ್ಬರ ಮನೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದು, ನನಗೆ ತುಂಬಾ ಆಶ್ಚರ್ಯವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಧೀರಜ್ ಸಾಹು ಮನೆಯಲ್ಲಿ ಕೋಟ್ಯಂತರ ರೂ. ಹಣ ಸಿಕ್ಕಿದೆ. ಆದರೆ ಇಡೀ INDI ಮೈತ್ರಿಕೂಟವು ಈ ಭ್ರಷ್ಟಾಚಾರದ ಬಗ್ಗೆ ಮೌನವಹಿಸಿದೆ ಎಂದು ಕಿಡಿಕಾರಿದ್ದಾರೆ.
#WATCH | On over Rs 200 crore cash recovered in the raid on Congress MP Dheeraj Sahu, Union Minister Amit Shah says, “I am very surprised. After independence, such a large amount of cash has been seized from an MP’s house. Crores of rupees have been recovered but the whole INDI… pic.twitter.com/Rph7Xdhljh
— ANI (@ANI) December 10, 2023
ಜೆಡಿಯು, ಆರ್ಜೆಡಿ, ಡಿಎಂಕೆ ಮತ್ತು ಎಸ್ಪಿ ಎಲ್ಲರೂ ಮೌನವಾಗಿ ಕುಳಿತಿದ್ದಾರೆ. ಆದರೆ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಏಕೆ ಪ್ರಚಾರ ಮಾಡಲಾಗಿದೆ ಎಂದು ನನಗೆ ಈಗ ಅರ್ಥವಾಗಿದೆ. ಅವರ ಭ್ರಷ್ಟಾಚಾರದ ಎಲ್ಲಾ ರಹಸ್ಯಗಳು ಬಹಿರಂಗಗೊಳ್ಳುತ್ತವೆ ಎಂಬ ಭಯದಲ್ಲಿ ಹೀಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಐಟಿ ದಾಳಿ ನಡೆಯುವ ಮುನ್ನ ಇಲಾಖೆ ತಯಾರಿ ಹೇಗಿರುತ್ತೆ? ಸುಳ್ಳು ಕೇಸ್ ದಾಖಲಿಸುವುದಿಲ್ಲವಾ ಇಲಾಖೆ?
ಧೀರಜ್ ಸಾಹುಗೆ ಸೇರಿದ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿ. ಕಚೇರಿಗಳ ಮೇಲೆ 5ನೇ ದಿನವೂ ಐಟಿ ಅಧಿಕಾರಿಗಳಿಂದ ಹಣ ಎಣಿಕೆ ಕಾರ್ಯ ಮುಂದುವರೆದಿದೆ. ಐಟಿ ದಾಳಿ ವೇಳೆ ಒಟ್ಟು 290 ಕೋಟಿ ನಗದು ಪತ್ತೆಯಾದ ಬಗ್ಗೆ ಮಾಹಿತಿ ಇದೆ. ಈವರೆಗೆ 120 ಬ್ಯಾಗ್‌ಗಳಲ್ಲಿದ್ದ ಹಣವನ್ನು ಮಾತ್ರ ಅಧಿಕಾರಿಗಳು ಎಣಿಸಿದ್ದಾರೆ. ಉಳಿದ ಬ್ಯಾಗ್‌ಗಳಲ್ಲಿರುವ ನಗದು ಎಣಿಕೆ ಮಾಡಲಾಗುತ್ತಿದೆ. ನಗದು ಎಣಿಕೆ ಕಾರ್ಯ ಇಂದು ಮುಕ್ತಾಯ ಸಾಧ್ಯತೆ ಇದೆ. ಎಣಿಕೆ ವೇಳೆ ಹಲವು ಕ್ಯಾಷ್ ಕೌಂಟಿಂಗ್ ಮಷಿನ್‌ಗಳು ಕೆಟ್ಟು ಹೋಗಿವೆ ಎನ್ನಲಾಗುತ್ತಿದೆ.
ಧೀರಜ್ ಸಾಹು ಮನೆಯಲ್ಲೇ 100 ಕೋಟಿ ರೂ. ನಗದು ಪತ್ತೆಯಾಗಿತ್ತು. ಸಂಸದನ ಮನೆಯಲ್ಲಿ 9 ರಾಕ್‌ಗಳಲ್ಲಿ 100 ಕೋಟಿ ನಗದು ಪತ್ತೆ ಆಗಿತ್ತು. ಡಿಸೆಂಬರ್ 6ರಂದು ಒಡಿಶಾ, ಜಾರ್ಖಂಡ್, ಬಂಗಾಳದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 pm, Sun, 10 December 23