AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿದ್ವಾರ: 70 ವರ್ಷದ ಮಹಿಳೆ ಮೇಲೆ ಸಾಕು ನಾಯಿ ದಾಳಿ, ಗಂಭೀರ ಗಾಯ

70 ವರ್ಷದ ಮಹಿಳೆ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಹರಿದ್ವಾರದಲ್ಲಿ ನಡೆದಿದೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಪಿಟ್‌ಬುಲ್ ತಳಿಯ ನಾಯಿಯೊಂದು 70 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಪೊಲೀಸರು ಈ ಮಾಹಿತಿ ನೀಡಿದ್ದಾರೆ.

ಹರಿದ್ವಾರ: 70 ವರ್ಷದ ಮಹಿಳೆ ಮೇಲೆ ಸಾಕು ನಾಯಿ ದಾಳಿ, ಗಂಭೀರ ಗಾಯ
ಪಿಟ್​ಬುಲ್-ಸಾಂದರ್ಭಿಕ ಚಿತ್ರImage Credit source: Timesnow
ನಯನಾ ರಾಜೀವ್
|

Updated on:Dec 11, 2023 | 8:26 AM

Share

70 ವರ್ಷದ ಮಹಿಳೆ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡ ಘಟನೆ ಹರಿದ್ವಾರದಲ್ಲಿ ನಡೆದಿದೆ. ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಪಿಟ್‌ಬುಲ್ ತಳಿಯ ನಾಯಿಯೊಂದು 70 ವರ್ಷದ ವೃದ್ಧೆಯ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ. ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದಾರೆ.

ಮಹಿಳೆಯನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ಕರೆತಂದಾಗ ರಕ್ತಸ್ರಾವವಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ಪರಿಗಣಿಸಿ, ಅವರನ್ನು ರಿಷಿಕೇಶದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ಕಳುಹಿಸಲಾಗಿದೆ. ಮಹಿಳೆಯ ಮೈಮೇಲೆ ಗಾಯಗಳಾಗಿವೆ ಎಂದು ಸಿವಿಲ್ ಆಸ್ಪತ್ರೆಯ ಡಾ.ವಂದನಾ ತಿಳಿಸಿದ್ದಾರೆ.

ಮಹಿಳೆಯ ಮಗ ನಾಯಿಯ ಮಾಲೀಕರ ವಿರುದ್ಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪ್ರಭಾರಿ ಆರ್.ಕೆ.ಸಕ್ಲಾನಿ ಮಾತನಾಡಿ, ಮಹಿಳೆ ಧಂಡೇರಾ ನಿವಾಸಿಯಾಗಿದ್ದು, ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದಾಗ ಪಿಟ್‌ಬುಲ್ ಅವರ ಮೇಲೆ ದಾಳಿ ಮಾಡಿದೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಮತ್ತಷ್ಟು ಓದಿ: ಜನನಿಬಿಡ ಚೆನ್ನೈ ರಸ್ತೆಯಲ್ಲಿ ಒಂದು ಗಂಟೆಯೊಳಗೆ 29 ಜನರಿಗೆ ಕಚ್ಚಿದ ಬೀದಿನಾಯಿ

ನಾಯಿ ಕಡಿತದಲ್ಲಿ ಅದರ ಹಲ್ಲು ನಾಟಿದ್ದರೆ ಅಂದರೆ ಹಲ್ಲಿನ ಗುರುತು ಎಲ್ಲಾದರೂ ಕಾಣಿಸಿಕೊಂಡಿದ್ದರೆ 10 ಸಾವಿರ ರೂ, ನಾಯಿ ಕಚ್ಚಿದ ರಭಸಕ್ಕೆ ಚರ್ಮ ಕಿತ್ತು ಬಂದಿದ್ದರೆ 20 ಸಾವಿರ ರೂ. ಪರಿಹಾರ ನೀಡಬೇಕು.

ಬಿಡಾಡಿ ಪ್ರಾಣಿಗಳ ದಾಳಿ ಹಾಗೂ ಬೀದಿ ನಾಯಿಗಳ ಹಾವಳಿ ಕುರಿತು 195 ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಪಂಜಾಬ್, ಹರ್ಯಾಣ ಮತ್ತು ಚಂಡೀಗಢಕ್ಕೆ ಹೈಕೋರ್ಟ್​ ಕೂಡ ಒಂದು ಸಮಿತಿಯನ್ನು ರಚಿಸುವಂತೆ ಕೇಳಿದೆ.

Published On - 8:25 am, Mon, 11 December 23