ರಾಯಚೂರು: ನಾಲಾ ಜಲಾಶಯಕ್ಕೆ ವಿದೇಶಿ ಹಕ್ಕಿಗಳ ವಲಸೆ; 5 ಸಾವಿರ ಬಗೆಯ ಪಕ್ಷಿಗಳ ಕಲರವ ಹೇಗಿದೆ ನೋಡಿ
TV9 Web | Updated By: preethi shettigar
Updated on:
Feb 09, 2022 | 10:37 AM
ಮಸ್ಕಿಯ ನಾಲಾ ಜಲಾಶಯದಲ್ಲಿ ದೇಶವಿದೇಶಗಳ ಒಟ್ಟು 5 ಸಾವಿರಕ್ಕೂ ಹೆಚ್ಚು ಹಕ್ಕಿಗಳ ದಂಡೇ ಚಳಿಗಾಲದಲ್ಲಿ ಸೇರುತ್ತವೆ. ಚಳಿಗಾಲ ಕಳೆದು ಬೇಸಿಗೆ ಶುರುವಾಗ್ತಿದ್ದಂತೆ ಒಂದೊಂದೇ ಪಕ್ಷಿಗಳು ಮತ್ತೆ ತಮ್ಮ ಊರುಗಳತ್ತ ಮುಖ ಮಾಡುತ್ತವೆ.
1 / 5
ಬಿಸಿಲುನಾಡು ಅಂತಲೇ ಕರೆಸಿಕೊಳ್ಳುವ ರಾಯಚೂರು ಜಿಲ್ಲೆಯನ್ನು ಕಂಡರೆ ಮೂಗು ಮುರಿಯುವವರೆ ಜಾಸ್ತಿ. ಆದರೆ ಅದೇ ಬಿಸಿಲುನಾಡನ್ನು ಅರಸಿ ವಿದೇಶಿ ಹಕ್ಕಿಗಳು ವಲಸೆ ಬರುತ್ತಿವೆ. ಹಳ್ಳದ ನೀರಲ್ಲಿ ತಮ್ಮದೇ ಭಾಷೆಯಲ್ಲಿ ಚಿಲಿಪಿಲಿ ಗುಟ್ಟುತ್ತಿರುವ ಹಕ್ಕಿಗಳು ಜನರ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ಸ್ಥಳೀಯ ಹಕ್ಕಿಗಳು ಅಷ್ಟೇ ಇಲ್ಲದೇ ವಿದೇಶಿ ಹಕ್ಕಿಗಳ ದಂಡೇ ಇದೆ. ವಿದೇಶಿ ಹಕ್ಕಿಗಳು ಇಲ್ಲಿನ ಹಕ್ಕಿಗಳ ಜೊತೆ ಹೊಸ ಒಡನಾಟ ಶುರು ಮಾಡಿಕೊಂಡಿವೆ.
2 / 5
ಇಂಥ ಮನಮೋಹಕ ದೃಶ್ಯಗಳಿಗೆ ಸಾಕ್ಷಿಯಾಗಿರುವುದು ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ನಾಲಾ ಜಲಾಶಯ. ಇದೇ ನಾಲಾ ಯೋಜನೆ ಜಲಾಶಯದ ಹಿನ್ನೀರಿನಲ್ಲೇ ನಿತ್ಯ ಸಾವಿರಾರು ಸಂಖ್ಯೆಯ ಹಕ್ಕಿಗಳ ಕಲರವ ಶುರುವಾಗಿದೆ. ಈ ಹಿನ್ನೀರಿನಲ್ಲಿ ಪ್ರತಿ ಚಳಿಗಾಲದ ಅವಧಿಯ ವೇಳೆ ದೇಶ, ವಿದೇಶಿ ಹಕ್ಕಿಗಳು ಇಲ್ಲಿ ಸದ್ದಿಲ್ಲದೇ ಬರುತ್ತಿವೆ. ಹೀಗೆ ಬರುವ ಹಕ್ಕಿಗಳು ಸದ್ದಿಲ್ಲದೇ ಚಳಿಗಾಲವನ್ನು ಮುಗಿಸಿಕೊಂಡು ತಮ್ಮೂರಿನತ್ತ ಮುಖ ಮಾಡೋವುದೇ ಈ ಹಕ್ಕಿಗಳ ವೈಶಿಷ್ಟ್ಯ.
3 / 5
ಇಲ್ಲಿ ನಸುಕಿನಲ್ಲಿ ಸೂರ್ಯೋದಯವಾಗೊವಷ್ಟರಲ್ಲಿಯೇ ಈ ಬಣ್ಣ-ಬಣ್ಣದ ಹಕ್ಕಿಗಳೇಲ್ಲಾ ತಮ್ಮ ಬಂಧು-ಬಳಗದ ಸಮೇತ ಜಲಾಶಯದ ಹಿನ್ನೀರಿನಲ್ಲಿ ಆಟ ಶುರುಮಾಡುತ್ತವೆ. ಹೀಗೆ ಗಂಟೆಗಟ್ಟಲೇ ತಮಾಷೆ ಕ್ಷಣಗಳನ್ನು ಕಳೆದು, ಬಿಸಿಲು ಜಾಸ್ತಿಯಾಗ್ತಿದ್ದಂತೆಯೇ ಮತ್ತೇ ತಮ್ಮ ಗೂಡು ಸೇರುವುದು ಈ ಹಕ್ಕಿಗಳಿಗೆ ಅಭ್ಯಾಸವಾಗಿದೆ.
4 / 5
ಅಷ್ಟಕ್ಕೂ ಇಲ್ಲಿ ಬರುವ ವಿದೇಶಿಗಳ ಪೈಕಿ ಕೆಂಪು, ಕೇಸರಿ, ಕಪ್ಪು, ಬಳಿ ಬಣ್ಣದ ಹಕ್ಕಿಗಳೇ ಹೆಚ್ಚು. ಇಲ್ಲಿ ಮಂಗೋಲಿಯಾ, ಚೀನಾ, ಟಿಬೇಟ್ ಸೇರಿ ವಿವಿಧ ದೇಶಗಳ ಹಕ್ಕಿಗಳು ಪ್ರತಿ ವರ್ಷ ಬಂದು ಹೋಗುತ್ತವೆ. ಜಲಾಯಶಕ್ಕೆ ಹೊಂದಿಕೊಂಡು ಪರ್ವತಿ ಶ್ರೇಣಿ ಇರುವುದರಿಂದ ಪಕ್ಷಿಗಳ ವಾಸಕ್ಕೆ ಯೋಗ್ಯವಾಗಿದೆ. ಸೆಲೆ ಡೆಕ್, ಬ್ಲಾಕ್ ವಿಂಗೇಡ್, ಸ್ಟಿಲ್ಟ್ ಬ್ಲಾಕ್, ಏಬಿಸ್ ಸ್ಪಾಟ್, ಬಿಲ್ಲೇಡ್ ಸೇರಿ ವಿವಿಧ ಪಕ್ಷಗಳು ಇಲ್ಲಿ ಕಾಣಸಿಗುತ್ತವೆ.
5 / 5
ಈ ವಿದೇಶಿ ಪಕ್ಷಿಗಳು ಚಳಿಗಾಲದಲ್ಲಿ ಬೆಚ್ಚಗಿನ ರಾಷ್ಟ್ರಗಳಾದ ಭಾರತ, ಬಾಂಗ್ಲಾ ಮುಂತಾದ ರಾಷ್ಟ್ರಗಳಿಗೆ ವಲಸೆ ಹೋಗುತ್ತವೆ. ಈ ಪಕ್ಷಿಗಳ ವೈಶಿಷ್ಟ್ಯವೆಂದರೆ ರಾತ್ರಿಯೆಲ್ಲಾ ಬೆಟ್ಟದ ತಪ್ಪಲಿನಲ್ಲಿ ಆಹಾರ ಹುಡುಕಾಡಿ, ಆಹಾರ ಸಂಗ್ರಹಿಸುತ್ತವೆ. ಬೆಳಿಗ್ಗೆ ಜಲಾಶಯದಲ್ಲಿ ಸಂಚರಿಸುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿ ಚನ್ನಬಸವ ಕಟ್ಟಿಮನಿ ಹೇಳಿದ್ದಾರೆ.