ಶಿವಮೊಗ್ಗದಲ್ಲಿ ಗಮನ ಸೆಳೆದ ಕ್ಯಾಟ್ ಶೋ; ಇಲ್ಲಿದೆ ಅದರ ಝಲಕ್
ಶಿವಮೊಗ್ಗ ನಗರದಲ್ಲಿ ಭಾನುವಾರ ಹಿನ್ನೆಲೆ ಒಂದಿಷ್ಟು ಮನರಂಜನೆ ಮತ್ತು ಸಂತಸದ ಕ್ಷಣ ಕಳೆಯುವುದಕ್ಕೆ ಒಂದು ಕ್ಯಾಟ್ ಶೋ ಆಯೋಜನೆ ಮಾಡಲಾಗಿತ್ತು. ಈ ಶೋ ನೋಡಿದ ಜನರು ಅಚ್ಚರಿ ಮತ್ತು ಅಕ್ಕರೆ ತೋರಿಸಿದ್ದು, ಶೋ ದಲ್ಲಿ ಇವರ ವಯ್ಯಾರ ನೋಡಿದ ಮಲೆನಾಡಿಗರು ಫುಲ್ ಫೀದಾ ಆಗಿದ್ದರು.
1 / 9
ಶಿವಮೊಗ್ಗದ ಸೆಕ್ರೆಡ್ ಹಾರ್ಟ್ನಲ್ಲಿರುವ ಸ್ನೇಹ ಭವನದಲ್ಲಿ ಕ್ಯಾಟ್ ಶೋ ನಡೆಯಿತು. ಈ ಶೋ ನೋಡಲು ಒಳಗೆ ಹೋಗುತ್ತಿದ್ದಂತೆ ಜನರಿಗೆ ವಿವಿಧ ಜಾತಿ ಮತ್ತು ಬಣ್ಣದ ಬೆಕ್ಕುಗಳು ಕಣ್ಣಿಗೆ ಬಿದ್ದವು. ದೇಶ ಮತ್ತು ವಿದೇಶದ ವಿವಿಧ ತಳಿಯ ಬೆಕ್ಕಗಳನ್ನು ಈ ಶೋದಲ್ಲಿ ಭಾಗವಹಿಸಿದ್ದವು.
2 / 9
ಶಿವಮೊಗ್ಗ, ಮೈಸೂರು, ಬೆಂಗಳೂರು ಚಿಕ್ಕಮಗಳೂರು, ಉತ್ತರಕನ್ನಡ, ದಾವಣಗೆರೆ ಜಿಲ್ಲೆ ಸೇರಿದಂತೆ ಕೇರಳದಿಂದ ಈ ಕ್ಯಾಟ್ ಗಳು ಶೋಗೆ ಬಂದಿದ್ದವು. ಇವುಗಳನ್ನು ಪ್ರೀತಿಯಿಂದ ಸಾಕಿ ಸಲುಹಿದ ಕ್ಯಾಟ್ ಮಾಲೀಕರು ಈ ಶೋದಲ್ಲಿ ತಮ್ಮ ತಮ್ಮ ಬೆಕ್ಕುಗಳ ಕರಾಮತ್ತು ತೋರಿಸಿದರು.
3 / 9
ಕ್ಯಾಟ್ ಶೋನಲ್ಲೂ ಸುಲ್ತಾನ್, ಶಫೇರ್, ಲೈಲಾ ಎಂಬ ಬೆಂಗಾಲಿ ಬೆಕ್ಕು ಗಳು ಹವಾ ಇತ್ತು. ಕ್ಯಾಟ್ ಶೋನಲ್ಲಿ 120 ಕ್ಕೂ ಹೆಚ್ಚು ಬೆಕ್ಕುಗಳು ನೋಂದಣಿಯಾಗಿದ್ದವು. ಇನ್ನು ಶೋದಲ್ಲಿ 7 ರೀತಿ ಬ್ರೀಡ್ಗಳ ಪ್ರದರ್ಶನ ನಡೆಯಿತು. ಪರ್ಷಿಯನ್, ಬೆಂಗಾಲ್, ಮೇನ್ ಕೂನ್, ಬ್ರಿಟೀಶ್ ಶಾರ್ಟ್ ಹೇರ, ಕ್ಲಾಸಿಕ್ ಲಾಂಗ್ ಹೇರ್, ಎಕ್ಸೈಟಿಕ್ ಶಾರ್ಟ್ ಹೇರ್ ಮತ್ತು ಇಂಡಿಮೋ ಎಂಬ ಲೋಕಲ್ ಕ್ಯಾಟ್ ತಳಿಗಳು ಶೋದಲ್ಲಿ ಕಂಡು ಬಂದವು.
4 / 9
ಅದರಲ್ಲೂ ಪರ್ಶಿಯನ್ನಿಂದ ಇಂಡಿಮೋ ವರೆಗೆ ಬೆಕ್ಕುಗಳು ಮೂರು ಲಕ್ಷದ ಬೆಲೆಬಾಳುವ ಬೆಕ್ಕುಗಳು ಪ್ರೇಕ್ಷಕರ ಗಮನ ಸೆಳೆದಿದ್ದವು. ಶೋದಲ್ಲಿ ಒಂದರಕ್ಕಿಂತ ಒಂದು ವಿಭಿನ್ನ ಮತ್ತು ದೇಶ ಮತ್ತು ವಿದೇಶಿ ತಳಿಯಿಂದ ಕೂಡಿತ್ತು. ಉದ್ದ ಉದ್ದ ಕೂದಲು. ಬೆಕ್ಕಿನ ಕಣ್ಣುಗಳೇ ಪ್ರಮುಖ ಆಕರ್ಷಣೆಯಾಗಿತ್ತು.
5 / 9
ಮಾಲೀಕರು ಎತ್ತುಕೊಂಡು ಬರುವುದು, ಸಾಕಿರುವುದು ಬಗ್ಗೆ ಪ್ರಶ್ನಿಸಲಾಯಿತು. ಯಾರು ಉತ್ತಮವಾಗಿ ಸಾಕಿರುತ್ತಾರೆ. ಮತ್ತು ಬೆಕ್ಕಿನ ಅಗತ್ಯವನ್ನ ಅರಿತು ಉತ್ತರಿಸುತ್ತಾರೆ ಅವರಿಗೆ ಪ್ರಶಸ್ತಿ ಈ ಕ್ಯಾಶೋನಲ್ಲಿ ಲಭಿಸುತ್ತದೆ. ಅತ್ಯುತ್ತಮ ಬೆಕ್ಕುಗಳಿಗೆ 10 ಟಾಪ್ ಟೆನ್ ತನಕ ಪ್ರಶಸ್ತಿ ಲಭಿಸುತ್ತದೆ.
6 / 9
ಇನ್ನು ಪ್ರವೇಶದ್ವಾರದಲ್ಲಿ ಕ್ಯಾಟ್ ವ್ಯಾಕ್ಸಿನೇಷನ್ ಸಹ ರಚಿಸಲಾಗಿದೆ. ಗೇಟ್ ವೇ ಕ್ಯಾಟ್ ಕ್ಲಬ್ ವತಿಯಿಂದ ಈ ಕ್ಯಾಟ್ ಶೋ ನಡೆದಿದೆ. ಕ್ಲಬ್ ನ ಪ್ರೆಸಿಡೆಂಟ್ ಮಹಮದ್ ಅದ್ನಾನ್ ಎಂ ಉತ್ತಮವಾಗಿ ಅಯೋಜಿಸಿದ್ದಾರೆ. ಶಿವಮೊಗ್ಗ ಮೊಹಮದ್ ಲುಕ್ಮಾನ್ ಅಹಮದ್ ಮತ್ತು ಪ್ರಸಾದ್ ಈ ಕ್ಯಾಟ್ ಪ್ರದರ್ಶನದಲ್ಲಿ ಸಾಥ್ ನೀಡಿದ್ದರು.
7 / 9
ಮೈಸೂರಿನ ಹಮೀದ್ ಸುಲ್ತಾನ್ ನನ್ನ ಸಾಕಿದ್ದಕ್ಕೆ ಪ್ರಶಸ್ತಿ ಬಂದಿದೆ. ಹಮೀದ್ ಸುಲ್ತಾನ್ ಬ್ರೀಡು ಯಾವುದೇ ಆಕ್ರಮಣ ಶಾಲಿ ಬರಕ್ಕಲ್ಲ. ನೋಡಲು ಹುಲಿ ತರ ಕಾಣುತ್ತೆ. ರಷ್ಯಾದಲ್ಲಿ ಮಹಿಳೆಯ ಒಬ್ಬಳು ಬೆಂಗಾಲ್ ಬ್ರೀಡ್ ಕಂಡಿಹಿಡಿದಿದ್ದಾರೆ. ಅದೇ ಬ್ರೀಡ್ ನ ಐದು ತಳಿಯ ಬೆಕ್ಕಗಳನ್ನು ಹಮೀದ್ ಪ್ರದರ್ಶನಕ್ಕೆ ಬಂದಿದ್ದವು. ಹೀಗೆ ಒಂದರಕ್ಕಿಂತ ಒಂದು ಬೆಕ್ಕುಗಳು ವಿಭಿನ್ನ ಮತ್ತು ಆಕರ್ಷಣೆಯಿಂದ ಕೂಡಿದ್ದವು.
8 / 9
ಇಂತಹ ಪ್ರಾಣಿ ಸಾಕುವುದರಿಂದ ಮನುಷ್ಯನಿಗೆ ರಿಲ್ಯಾಕ್ಸ್ ಮತ್ತು ನೆಮ್ಮದಿ ಸಿಗುತ್ತದೆ. ಮನಷ್ಯರಂತೆ ಇವು ಸಂಬಂಧವನ್ನು ಗಟ್ಟಿಯಾಗಿ ಇಡುತ್ತವೆ. ಒಂದು ಸಲ ಪ್ರೇಂಡ್ ಶೀಪ್ ಆದ್ರೆ ಸಾಕು. ಬೆಕ್ಕು ಆ ಕುಟುಂಬವನ್ನು ಎಂದಿಗೂ ಬಿಡುವುದಿಲ್ಲ. ಅಷ್ಟೊಂದು ವಿಶ್ವಾಸವು ಬೆಕ್ಕು ತನ್ನ ಮಾಲೀಕನಿಗೆ ತೋರಿಸುತ್ತದೆ. ಹೀಗಾಗಿ ಮನೆಯಲ್ಲಿ ಬೆಕ್ಕುಗಳನ್ನು ಸಾಕಿದ್ರೆ ಒಂದು ಪಾಸಿಟಿವ್ ಎನರ್ಜಿ ಬರುತ್ತದೆ. ಎಲ್ಲ ಟೆನ್ಷನ್ ಕೂಡಾ ಕಡಿಮೆಯಾಗುತ್ತದಂತೆ.
9 / 9
ಇನ್ನು ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಈ ಕ್ಯಾಟ್ ಶೋದಲ್ಲಿ ಜನರು ಭಾಗವಹಿಸಿದ್ದರು. ಬೆಕ್ಕು ಅಂದ್ರೆ ಜನರು ಪ್ರಾಣ ಬಿಡುತ್ತಾರೆ, ಸದಾ ತಮ್ಮ ಮನೆ ಯೊಳಗೆ ಇದ್ದು ಎಲ್ಲರ ಪ್ರೀತಿ ಪಾತ್ರಕ್ಕೆ ಸಾಕು ಬೆಕ್ಕು ಆಗಿರುತ್ತದೆ. ಹೀಗೆ ಕ್ಯಾಟ್ ಶೋದಲ್ಲಿ ವಿವಿಧ ತಳಿಯ ಕ್ಯಾಟ್ ಗಳನ್ನು ಪ್ರೇಕ್ಷಕರ ಗಮನ ಸೆಳದವು.