AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆಯಲ್ಲಿ ಸೃಷ್ಟಿಯಾದ ಪಕ್ಷಿಗಳ ಲೋಕ; ಇಲ್ಲಿದೆ ಅದರ ಝಲಕ್​

ಅದು ಆಲಮಟ್ಟಿ ಜಲಾಶಯ ಹಿನ್ನೀರು ಹಾಗೂ ಘಟಪ್ರಭಾ ‌ನದಿ ವ್ಯಾಪ್ತಿ ಪ್ರದೇಶ. ಅಲ್ಲಿ ಚಳಿಗಾಲದ ಅವಧಿಯಲ್ಲಿ ಹೋದರೆ ಕಣ್ಣಿಗೆ ಹಬ್ಬ. ಹಿನ್ನೀರಲ್ಲಿ ದೇಶ-ವಿದೇಶದಿಂದ ಬಂದ ಸುಂದರ ಅತಿಥಿಗಳು ಕಣ್ಮನ ಸೆಳೆಯುತ್ತಾರೆ. ಬಳಕುವ ಬಳ್ಳಿಯಂತೆ ನಡೆಯುವ, ಆಕಾಶದಲ್ಲಿ ಚಿತ್ತಾರ ಬರೆಯುವ ಹಕ್ಕಿಗಳ ದೃಶ್ಯ ನಯನ ‌ಮನೋಹರ.ಇಂತ ಜಾಗದಲ್ಲಿ ಹಕ್ಕಿ ಹಬ್ಬ ಆಚರಿಸಲಾಯಿತು.

ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 28, 2024 | 8:40 PM

ಅದು ಆಲಮಟ್ಟಿ ಜಲಾಶಯ ಹಿನ್ನೀರು ಹಾಗೂ ಘಟಪ್ರಭಾ ‌ನದಿ ವ್ಯಾಪ್ತಿ ಪ್ರದೇಶ. ಅಲ್ಲಿ ಚಳಿಗಾಲದ ಅವಧಿಯಲ್ಲಿ ಹೋದರೆ ಕಣ್ಣಿಗೆ ಹಬ್ಬ. ಹಿನ್ನೀರಲ್ಲಿ ದೇಶ-ವಿದೇಶದಿಂದ ಬಂದ ಸುಂದರ ಅತಿಥಿಗಳು ಕಣ್ಮನ ಸೆಳೆಯುತ್ತಾರೆ. ಬಳಕುವ ಬಳ್ಳಿಯಂತೆ ನಡೆಯುವ, ಆಕಾಶದಲ್ಲಿ ಚಿತ್ತಾರ ಬರೆಯುವ ಹಕ್ಕಿಗಳ ದೃಶ್ಯ ನಯನ ‌ಮನೋಹರ.ಇಂತ ಜಾಗದಲ್ಲಿ ಹಕ್ಕಿ ಹಬ್ಬ ಆಚರಿಸಲಾಯಿತು.

ಅದು ಆಲಮಟ್ಟಿ ಜಲಾಶಯ ಹಿನ್ನೀರು ಹಾಗೂ ಘಟಪ್ರಭಾ ‌ನದಿ ವ್ಯಾಪ್ತಿ ಪ್ರದೇಶ. ಅಲ್ಲಿ ಚಳಿಗಾಲದ ಅವಧಿಯಲ್ಲಿ ಹೋದರೆ ಕಣ್ಣಿಗೆ ಹಬ್ಬ. ಹಿನ್ನೀರಲ್ಲಿ ದೇಶ-ವಿದೇಶದಿಂದ ಬಂದ ಸುಂದರ ಅತಿಥಿಗಳು ಕಣ್ಮನ ಸೆಳೆಯುತ್ತಾರೆ. ಬಳಕುವ ಬಳ್ಳಿಯಂತೆ ನಡೆಯುವ, ಆಕಾಶದಲ್ಲಿ ಚಿತ್ತಾರ ಬರೆಯುವ ಹಕ್ಕಿಗಳ ದೃಶ್ಯ ನಯನ ‌ಮನೋಹರ.ಇಂತ ಜಾಗದಲ್ಲಿ ಹಕ್ಕಿ ಹಬ್ಬ ಆಚರಿಸಲಾಯಿತು.

1 / 9
ಆಕಾಶಕ್ಕೆ ಅಲಂಕಾರ‌ ಮಾಡಿದ ಹಕ್ಕಿಗಳ ಚಿತ್ತಾರ. ನೀರಲ್ಲಿ ಸಾಲು ಸಾಲಾಗಿ ಅಂಕುಡೊಂಕು ಹೆಜ್ಜೆ ಇಡುತ್ತಾ ಸಾಗುತ್ತಿರುವ ಹಕ್ಕಿಗಳು. ಹಕ್ಕಿಗಳ ಫೋಟೋಗ್ರಾಫಿಯಲ್ಲಿ ಪಕ್ಷಿಪ್ರೀಯರು, ಪೋಟೊಗ್ರಾಫರ್, ತಜ್ಞರು.ಇನ್ನೊಂದು ಕಡೆ ಪಕ್ಷಿಗಳ ಬಗ್ಗೆ ಜಾಗೃತಿ ‌ಮೂಡಿಸುತ್ತಿರುವ ತಜ್ಞರು.ಇದಕ್ಕೆಲ್ಲ ಕಾರಣ ಆಗಿದ್ದು ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ನಡೆದ ಹಕ್ಕಿಹಬ್ಬ.

2 / 9
ಬಾಗಲಕೋಟೆ ಯಲ್ಲಿ ಪ್ರತಿ ವರ್ಷ ಈ ದಿನದಲ್ಲಿ ದೇಶ-ವಿದೇಶದಿಂದ ಕಲರ್ ಪುಲ್ ಹಕ್ಕಿಗಳು ಬರುತ್ತವೆ. ಅವುಗಳನ್ನು ನೋಡೋದೆ ಕಣ್ಣಿಗೆ ಹಬ್ಬ.ಜಿಲ್ಲೆಯ ಬೀಳಗಿ ತಾಲ್ಲೂಕಿನ ಚಿಕ್ಕಸಂಗಮ, ಹೆರಕಲ್, ಅನಗವಾಡಿ, ಬೀರಕಬ್ಬಿ, ರೊಳ್ಳಿ, ಮಲ್ಲಾಪುರ, ಬೆಣ್ಣೂರ, ಸಾಳಗುಂದಿ ಪ್ರದೇಶದ ವ್ಯಾಪ್ತಿಯಲ್ಲಿ ಆಲಮಟ್ಟಿ ಜಲಾಶಯ ಹಿನ್ನೀರಲ್ಲಿ ಪಕ್ಷಿಗಳ ಸುಂದರ ಲೋಕವೇ ಸೃಷ್ಟಿ ಆಗಿರುತ್ತದೆ.

3 / 9
ಇಂತಹ ಜಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ,ಅರಣ್ಯ ಇಲಾಖೆ,ಅರಣ್ಯ ವಸತಿ ಹಾಗೂ ವಿಹಾರಧಾಮಗಳ ಸಂಸ್ಥೆ ವತಿಯಿಂದ ಆಯೋಜನೆ ಮಾಡಲಾಗಿತ್ತು.ಇದರಲ್ಲಿ ಕರ್ನಾಟಕ, ಆಂದ್ರ, ಕೇರಳ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳಿಂದ 80ಕ್ಕೂ ಹೆಚ್ಚು ಜನ ಪಕ್ಷಿಪ್ರೀಯರು,ತಜ್ಞರು,ವೈಲ್ಡ್ ಪೊಟೊಗ್ರಾಫರ್ ಬಂದಿದ್ದರು.

4 / 9
ಬೆಳ್ಳಂಬೆಳಿಗ್ಗೆ ನದಿ ದಡದಲ್ಲಿ ಹಕ್ಕಿಗಳ ವಿಭಿನ್ನ ಪೊಟೊ ಕ್ಲಿಕ್ಕಿಸಿದರು.ಜೊತೆಗೆ ಅವುಗಳ ಚಲನವಲನ,ಹಾರಾಟ ನಡೆದಾಟ,ಸಂತತಿ ಆಹಾರ ಪದ್ದತಿ ಎಲ್ಲವನ್ನೂ ಅಧ್ಯಯನ ‌ಮಾಡಿದರು.ಇವರೆಲ್ಲ ಕ್ಲಿಕ್ಕಿಸಿದ ಹಕ್ಕಿಗಳ ಭಾವಚಿತ್ರಗಳನ್ನು ತೋಟಗಾರಿಕೆ ವಿವಿಯಲ್ಲಿ ನಡೆದ ಹಕ್ಕಿ ಹಬ್ಬ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಿ,ಬಂದವರಿಗೆ ಜಾಗೃತಿ ‌ಮೂಡಿಸಿದರು.

5 / 9
 ಘಟಪ್ರಭಾ ‌ನದಿ ಹಾಗೂ ಆಲಮಟ್ಟಿ ಹಿನ್ನೀರು ವ್ಯಾಪ್ತಿಯಲ್ಲಿ ಪ್ರತಿ ವರ್ಷ ಚಳಿಗಾಲದಲ್ಲಿ ನವೆಂಬರ್​ನಿಂದ ಎಪ್ರಿಲ್​ವರೆಗೆ ದೇಶ-ವಿದೇಶದಿಂದ‌ ಹಕ್ಕಿಗಳು ಆಹಾರ ಅರಸಿ ಸಂತಾನೋತ್ಪತ್ತಿಗೆ ‌ಬರುತ್ತವೆ. ಅವುಗಳಿಗೆ ನದಿ ತೀರದ ಕ್ರಿಮಿಗಳೇ ಭೂರಿ ಭೋಜನ. ಪ್ಲೆಮಿಂಗೊ, ರಿವರ್ಟರ್ನ್,ಬಾರ್ ಹೆಡೆಡ್ ಗೀಜ್,ಕಾರ್ಮೊರೆಂಟ್ ಸೇರಿದಂತೆ ೩೬ ವಿದೇಶಿ ತಳಿಯ ಹಕ್ಕಿಗಳು ಬರುತ್ತವೆ.

6 / 9
ಆಸ್ಟ್ರೇಲಿಯಾ, ಮಂಗೋಲಿಯಾ,ಸೈಬೀರಿಯಾ,ಇರಾನ್ ಮೂಲದಿಂದ‌ ಈ ಹಕ್ಕಿಗಳು ಬರುತ್ತಿದ್ದು ಹನಿಮೂನ್ ಬರ್ಡ್ ಅಂತಲೂ ಇವುಗಳನ್ನು ಕರೆಯುತ್ತಾರೆ. ಅವುಗಳ ಹಾರಾಟ ನಡೆದಾಟ ನೋಡೋದೆ ನಯನ ಮನೋಹರ. ಇದೇ ಕಾರಣಕ್ಕೆ ಸರಕಾರ ಜಿಲ್ಲೆಯಲ್ಲಿ ಚಿಕ್ಕ ಸಂಗಮದಲ್ಲಿ ಪಕ್ಷಿ ಸಂರಕ್ಷಿತ ಪ್ರದೇಶ ಎಂದು‌ ಘೋಷಣೆ‌ ಮಾಡಲಾಗಿದೆ.

7 / 9
ಇನ್ನು ಇಂತಹ ಪ್ರದೇಶದಲ್ಲಿ ‌ಮೂರು ದಿನಗಳ ಕಾಲ ಹಕ್ಕಿ ಹಬ್ಬ ಆಚರಿಸಲಾಗಿದೆ. 80 ಕ್ಕೂ ಹೆಚ್ಚು ಪಕ್ಷಿ ಪ್ರೀಯರು ಮುದ್ದಾದ,ಸುಂದರ ಪಕ್ಷಿಗಳ ಚಲನವಲನ‌‌ ಸೆರೆ ಹಿಡಿದಿದ್ದಾರೆ.ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ, ಅಧ್ಯಯನಕ್ಕಾಗಿ ಇದನ್ನು ಹಮ್ಮಿಕೊಳ್ಳಲಾಗಿತ್ತು.

8 / 9
ಇದು ಹತ್ತನೇ ಹಕ್ಕಿ ಹಬ್ಬ ಆಗಿದ್ದು,ತಜ್ಞರು ದೇಶವಿದೇಶದಿಂದ ಬರುವ ಹಕ್ಕಿಗಳಿಗೆ ಇಲ್ಲಿ ಸುರಕ್ಷತೆಯಿಲ್ಲ.ರೈತರು ಹಿನ್ನೀರಲ್ಲಿ ಉಳುಮೆ‌ ಮಾಡುತ್ತಾರೆ,ಕುರಿಗಾಹಿಗಳು ಕುರಿ‌ ಮೇಯಿಸಲು ಬರುತ್ತಾರೆ. ಅವರು ನಾಯಿ ಕರೆದುಕೊಂಡು ಬರೋದು.ಈ ಎಲ್ಲ ಕಾರಣದಿಂದ ಪಕ್ಷಿ ಭಯಪಡುತ್ತವೆ.ಆದ್ದರಿಂದ ಇದಕ್ಕೆ ಬ್ರೆಕ್ ಹಾಕಿ ಜನರಿಗೂ ದೂರದಿಂದ ನೋಡುವ ಸೌಲಭ್ಯ ಕಲ್ಪಿಸಬೇಕು ಅಂತಾರೆ ಪಕ್ಷಿ ತಜ್ಞರು.

9 / 9
Follow us
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?

ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ

ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು

ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ

ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್

ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ

ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ

ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ

ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ