ಕ್ಯಾಟ್ ಶೋನಲ್ಲೂ ಸುಲ್ತಾನ್, ಶಫೇರ್, ಲೈಲಾ ಎಂಬ ಬೆಂಗಾಲಿ ಬೆಕ್ಕು ಗಳು ಹವಾ ಇತ್ತು. ಕ್ಯಾಟ್ ಶೋನಲ್ಲಿ 120 ಕ್ಕೂ ಹೆಚ್ಚು ಬೆಕ್ಕುಗಳು ನೋಂದಣಿಯಾಗಿದ್ದವು. ಇನ್ನು ಶೋದಲ್ಲಿ 7 ರೀತಿ ಬ್ರೀಡ್ಗಳ ಪ್ರದರ್ಶನ ನಡೆಯಿತು. ಪರ್ಷಿಯನ್, ಬೆಂಗಾಲ್, ಮೇನ್ ಕೂನ್, ಬ್ರಿಟೀಶ್ ಶಾರ್ಟ್ ಹೇರ, ಕ್ಲಾಸಿಕ್ ಲಾಂಗ್ ಹೇರ್, ಎಕ್ಸೈಟಿಕ್ ಶಾರ್ಟ್ ಹೇರ್ ಮತ್ತು ಇಂಡಿಮೋ ಎಂಬ ಲೋಕಲ್ ಕ್ಯಾಟ್ ತಳಿಗಳು ಶೋದಲ್ಲಿ ಕಂಡು ಬಂದವು.