
ಹೊಸ ಜೀವನಕ್ಕೆ ಕಾಲಿಡುತ್ತಿರುವ ಜೋಡಿಯೊಂದು ವಿಶೇಷವಾಗಿ ಕಟೌಟ್ ಹಾಗೂ ಬ್ಯಾನರ್ ಹಾಕಿಸಿ ಎಲ್ಲರ ಗಮನ ಸೆಳೆದಿದೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯ ಮುರಗೋಡ ಕಲ್ಯಾಣ ಮಂಟಪದಲ್ಲಿ ನಾಳೆ ಸಂತೋಷ ಹಾದಿಮನಿ ಹಾಗೂ ಶಿಲ್ಪಾ ಇಬ್ಬರ ಮದುವೆ ನಡೆಯುತ್ತಿದ್ದು, ಮದುವೆ ಕಲ್ಯಾಣ ಮಂಟಪದ ಅಕ್ಕ ಪಕ್ಕ ಎಲ್ಲ ಕಡೆ ಕಟೌಟ್, ಬ್ಯಾನರ್ ಗಳು ರಾರಾಜಿಸುತ್ತಿವೆ.


ತಮ್ಮ ಭಾವಚಿತ್ರಗಳನ್ನು ಹೊಂದಿದ ಬ್ಯಾನರ್ ನಲ್ಲಿ ಸಂಚಾರಿ ನಿಯಮ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಆಹಾರದ ಬಗ್ಗೆ, ಮತದಾನ ಜಾಗೃತಿ ,ಪರಿಸರ ಜಾಗೃತಿ ,ಹಸಿವು , ಆರೋಗ್ಯಕರ ಜೀವನ ಹೆಣ್ಣು ಮಕ್ಕಳ ಶಿಕ್ಷಣ, ವರದಕ್ಷಿಣೆ ಬಗ್ಗೆ ಜಾಗೃತಿ ಸಾರುವಂತಹ ಬ್ಯಾನರ್ ಗಳನ್ನು ಮಾಡಿಸಿದ್ದಾರೆ.

ಕಲ್ಯಾಣ ಮಂಟಪದ ಸುತ್ತ ಕಟೌಟ್ಗಳನ್ನು ಹಾಕುವ ಮೂಲಕ ಬಂದಂತಹ ಆಪ್ತರು, ಸಂಬಂಧಿರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಇವರ ಸಾಮಾಜಿ ಕಳಕಳಿಯಿಂದ ಜನರಿಗೆ ಜಾಗೃತಿ ಮೂಡಿಸುತ್ತಿರುವ ಈ ಜೋಡಿಯ ಕೆಲಸಕ್ಕೆ ಸೆಲ್ಯೂಟ್ ಹೇಳಲೇಬೇಕು.
Published On - 11:10 pm, Thu, 9 February 23