- Kannada News Photo gallery Rishab Shetty Wedding Anniversary: Kantara hero shares cute photos with wife Pragathi Shetty
Rishab Shetty: ರಿಷಬ್ ಶೆಟ್ಟಿ ವಿವಾಹ ವಾರ್ಷಿಕೋತ್ಸವ; ಪತ್ನಿ ಜತೆಗಿನ ಚಂದದ ಫೋಟೋ ಹಂಚಿಕೊಂಡ ‘ಕಾಂತಾರ’ ಹೀರೋ
Rishab Shetty Wedding Anniversary: ‘ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ದಾಂಪತ್ಯ. ಈ ದಾಂಪತ್ಯಕ್ಕೆ ಇಂದು ವಾರ್ಷಿಕೋತ್ಸವದ ಸಂಭ್ರಮ’ ಎಂದು ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ.
Updated on: Feb 09, 2023 | 9:04 PM

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ಅವರಿಗೆ ಇಂದು (ಫೆ.9) ವಿವಾಹ ವಾರ್ಷಿಕೋತ್ಸವದ ಸಡಗರ. ಈ ಪ್ರಯುಕ್ತ ಅವರು ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಚಿತ್ರರಂಗದಲ್ಲಿ ಸಕ್ಸಸ್ಫುಲ್ ಸೆಲೆಬ್ರಿಟಿಯಾಗಿ ರಿಷಬ್ ಶೆಟ್ಟಿ ಗುರುತಿಸಿಕೊಂಡಿದ್ದಾರೆ. ಅವರ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿರುವುದು ಪತ್ನಿ ಪ್ರಗತಿ ಶೆಟ್ಟಿ. ಇಬ್ಬರಿಗೂ ಅಭಿಮಾನಿಗಳು ಮತ್ತು ಆಪ್ತರು ವಿವಾಹ ವಾರ್ಷಿಕೋತ್ಸವದ ಅಭಿನಂದನೆ ತಿಳಿಸುತ್ತಿದ್ದಾರೆ.

2017ರಲ್ಲಿ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ವಸ್ತ್ರ ವಿನ್ಯಾಸಕಿಯಾಗಿ ಪ್ರಗತಿ ಶೆಟ್ಟಿ ಬ್ಯುಸಿ ಆಗಿದ್ದಾರೆ. ಆ ಮೂಲಕ ಅವರು ಕೂಡ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ.

‘ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿ, ಪ್ರೀತಿಯಿಂದ ದಾಂಪತ್ಯ. ಈ ದಾಂಪತ್ಯಕ್ಕೆ ಇಂದು ವಾರ್ಷಿಕೋತ್ಸವದ ಸಂಭ್ರಮ’ ಎಂದು ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ಈ ಜೋಡಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಶುಭ ಹಾರೈಸಿದ್ದಾರೆ.

‘ಕಾಂತಾರ’ ಸಿನಿಮಾದ ಗೆಲುವಿನ ಬಳಿಕ ರಿಷಬ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರಿಗೆ ಇದ್ದ ಡಿಮ್ಯಾಂಡ್ ಹೆಚ್ಚಾಗಿದೆ. ಈಗ ಅವರು ‘ಕಾಂತಾರ 2’ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.



















