
ನಟಿ ಶರ್ಮಿಳಾ ಮಾಂಡ್ರೆ ಮತ್ತು ತಮಿಳು ಸಿನಿಮಾ ನಿರ್ಮಾಪಕ ಸುಂದರನ್ ಅವರು ನಾಲ್ಕು ತಿಂಗಳ ಹಿಂದೆ ಜುಲೈ 12 ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಇದೀಗ ನಟಿ ಶರ್ಮಿಳಾ ಮಾಂಡ್ರೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ. ಶರ್ಮಿಳಾ ಪೋಸ್ಟ್ಗೆ ಹಲವು ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ.
ಕೈ ಬೆರಳುಗಳಿಗೆ ಮಗುವಿನ ಬೂಟುಗಳನ್ನು ಧರಿಸಿ ಫೋಟೊ ಹಾಕಿರುವ ದಂಪತಿ, ‘ಪುಟ್ಟ ಹೆಜ್ಜೆಗಳು’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ದಂಪತಿಗಳು ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅವರ ಪೋಸ್ಟ್ಗೆ ಹಲವಾರು ಮಂದಿ ಕಮೆಂಟುಗಳನ್ನು ಮಾಡಿ ಶುಭ ಕೋರಿದ್ದಾರೆ.
ಶರ್ಮಿಳಾ ಮತ್ತು ಸುಂದರನ್ ಈ ಇಬ್ಬರ ಮದುವೆಯು ರಾಜಸ್ಥಾನದ ಜೈಪುರದ ಸಮೋದ್ ಅರಮನೆಯಲ್ಲಿ ಭಾರಿ ಅದ್ಧೂರಿಯಾಗಿ ನಡೆದಿತ್ತು. ಅದಕ್ಕೂ ಮುಂಚೆ ಜೂನ್ 25 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಶ್ಚಿತಾರ್ಥವನ್ನು ಈ ಜೋಡಿ ಮಾಡಿಕೊಂಡಿತ್ತು.
ಕೆಲವು ಚಿತ್ರರಂಗದ ಗಣ್ಯರು ಹಾಗೂ ಎರಡೂ ಕುಟುಂಬಗಳ ಸದಸ್ಯರುಗಳು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಮದುವೆಯಾದ ನಾಲ್ಕು ತಿಂಗಳ ಬಳಿಕ ಇದೀಗ ಖುಷಿ ಸುದ್ದಿಯನ್ನು ಜೋಡಿ ಹಂಚಿಕೊಂಡಿದೆ.