
ಎರಡು ವರ್ಷಗಳ ಬಳಿಕ ಮೈಸೂರು ನಂಜನಗೂಡು ದೊಡ್ಡ ಜಾತ್ರೆ ಅದ್ಧೂರಿಯಾಗಿ ನಡೆದಿದೆ.

ಬೆಳಗಿನ ಜಾವ 4 ಗಂಟೆಗೆ ಪಂಚ ಮಹಾರಥೋತ್ಸವಕ್ಕೆ ಮೈಸೂರು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಿದರು.

ದೊಡ್ಡ ರಥದಲ್ಲಿ ಶ್ರೀಕಂಠೇಶ್ವರ ವಿರಾಜಮಾನ, ಎರಡನೇ ರಥದಲ್ಲಿ ಪಾರ್ವತಿದೇವಿ, ಮೂರನೇ ರಥದಲ್ಲಿ ಗಣಪತಿ ನಾಲ್ಕನೇ ರಥದಲ್ಲಿ ಷಣ್ಮುಗ, ಐದನೇ ರಥದಲ್ಲಿ ಚಂಡಿಕೇಶ್ವರ ದೇವರುಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.

ಈ ಪಂಚ ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದುಬಂದಿತ್ತು. ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಶಾಸಕ ಹರ್ಷವರ್ಧನ್ ಭಾಗಿಯಾಗಿದ್ದರು.

ಪಂಚ ಮಹಾರಥೋತ್ಸವದಲ್ಲಿ ಪುನೀತ್ ರಾಜ್ಕುಮಾರ್ ಭಾವಚಿತ್ರ ರಾರಾಜಿಸಿದೆ. ಪುನೀತ್ ಪೋಟೋ ಮತ್ತು ಬಾವುಟ ಹಿಡಿದು ಅಭಿಮಾನಿಗಳು ಜೈಕಾರ ಹಾಕಿದರು.