AI-Generated Images: AI ರಚಿತ ‘ಓಲ್ಡ್ ಡೆಲ್ಲಿಅಟ್ ನೈಟ್’ ಭಯಾನಕ ಚಿತ್ರಗಳು: ಈ ಚಿತ್ರಗಳು ನಿಮಗೆ ನಡುಕ ಹುಟ್ಟಿಸುವುದ ಖಂಡಿತ!
'ರಾತ್ರಿಯಲ್ಲಿ ಹಳೆಯ ದೆಹಲಿಯ' ಚಿತ್ರಗಳನ್ನು ರಚಿಸಿದ ಕೃತಕ ಬುದ್ದಿಮತ್ತೆ. ಈ ಭ್ಯಾನಕ ಚಿತ್ರಗಳು ನಿಮಗೆ ಖಂಡಿತವಾಗಿಯೂ ನಡುಕ ಹುಟ್ಟಿಸುತ್ತದೆ. ಈ ಚಿತ್ರಗಳು ಟ್ವಿಟ್ಟರ್ನಲ್ಲಿ ಹಲವರ ಗಮನ ಸೆಳೆದಿವೆ.
1 / 13
ಪ್ರತೀಕ್ ಅರೋರಾ ಎಂಬ ಕಲಾವಿದರೊಬ್ಬರು ಈ ವಿಭಿನ್ನ ಚಿತ್ರಗಳೊಂದಿಗೆ ಟ್ವಿಟರ್ ಥ್ರೆಡ್ ಅನ್ನು ಹಂಚಿಕೊಂಡಿದ್ದಾರೆ.
2 / 13
ಈ ಚಿತ್ರಗಳು ಅತಿವಾಸ್ತವಿಕವಾಗಿವೆ ಮತ್ತು ಮಾನವೀಯತೆಯ ವಿಕೃತ ರೂಪವನ್ನು ತೋರಿಸುತ್ತವೆ. ಇದು ವಿಕೃತವಾಗಿ ಜನರು ನಗುತ್ತಿರುವ ಚಿತ್ರಗಳು.
3 / 13
AI ರಚಿತಾ 'ರಾತ್ರಿಯಲ್ಲಿ ಹಳೆಯ ದೆಹಲಿಯ' ಚಿತ್ರಗಳನ್ನು ನೋಡಿದರೆ ನಿಮಗೆ ನಡುಕ ಹುಟ್ಟುವುದು ಖಂಡಿತ. ಕೃತಕ ಬುದ್ದಿಮತ್ತೆ ಸೃಷ್ಟಿಸಿದ ಈ ಭಯಾನಕ ಚಿತ್ರಗಳನ್ನು ನೆಟ್ಟಿಗರ ಗಮನ ಸೆಳೆದಿದೆ.
4 / 13
ಕೃತಕ ಬುದ್ಧಿಮತ್ತೆ (AI) ಸಹಾಯದಿಂದ ಚಿತ್ರಗಳನ್ನು ರಚಿಸುವುದು ಈಗ ಟ್ರೆಂಡ್ ಆಗಿದೆ. ನೀವು ಸಾಮಾಜಿಕ ಜಾಲತಾಣಗಳ ಬಳಕೆದಾರರಾಗಿದ್ದರೆ, AI ಬಳಸಿ ರಚಿಸಲಾದ ವಿವಿಧ ಚಿತ್ರಗಳನ್ನು ಕಲಾವಿದರು ಹಂಚಿಕೊಳ್ಳುವುದನ್ನು ನೀವು ನೋಡಿರಬಹುದು.
5 / 13
ಗಗನಯಾತ್ರಿಗಳು ವಧುವಾಗಿ ಬದಲಾಗಿರುವುದರಿಂದ ಹಿಡಿದು ಭಾರತದ ವಿವಿಧ ಭಾಗಗಳಲ್ಲಿನ ವಿವಾಹ ಸಮಾರಂಭಗಳವರೆಗೆ, ನೀವು ಆನ್‌ಲೈನ್‌ನಲ್ಲಿ ಹಲವಾರು AI ರಚಿತ ಚಿತ್ರಗಳನ್ನು ಕಾಣಬಹುದು.
6 / 13
ಈ ಚಿತ್ರಗಳಿಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಈ ಸೃಷ್ಟಿಯನ್ನು ಶ್ಲಾಘಿಸಿದರೆ, ಇತರರು ಹೇಗೆ ಭಯಾನಕವಾಗಿವೆ ಎಂಬುದನ್ನು ಹಂಚಿಕೊಂಡಿದ್ದಾರೆ.
7 / 13
ಮಿಡ್‌ಜರ್ನಿ ಎಂಬ ಒಂದು A.I. ಜನರೇಟರ್ ಉಪಯೋಗಿಸಿ ಈ ಚಿತ್ರಗಳನ್ನು ರಚಿಸಲಾಗಿದೆ
8 / 13
ಮಿಡ್‌ಜರ್ನಿಯ ರಚನೆಕಾರರು AI ಮಾದರಿಗೆ ಇತರ ಕಲಾವಿದರಿಂದ ಲಕ್ಷಾಂತರ ಕಲೆಯ ಉದಾಹರಣೆಗಳನ್ನು ತೋರಿಸುವ ಮೂಲಕ ಚಿತ್ರಗಳನ್ನು ಹೇಗೆ ರಚಿಸಬೇಕೆಂದು AI ಗೆ ಕಲಿಸಿದರು.
9 / 13
Lensa A.I., DALL-E 2, ಮತ್ತು Nightcafe ನಂತಹ ಪ್ಲಾಟ್‌ಫಾರ್ಮ್‌ಗಳು ಸುಲಭವಾಗಿ ಉತ್ತಮ-ಗುಣಮಟ್ಟದ ಚಿತ್ರಗಳನ್ನು ರಚಿಸಲುವುದರಿಂದ 2022 ರಲ್ಲಿ ಜನಪ್ರಿಯತೆಯನ್ನು ಗಳಿಸಿದವು.
10 / 13
AI ಆರ್ಟ್ ಜನರೇಟರ್‌ಗಳೊಂದಿಗೆ, ನೀವು ಬಯಸಿದಷ್ಟು ವಿವರವಾಗಿ ಪ್ರಾಂಪ್ಟ್ ರೀತಿಯಲ್ಲಿ ಟೈಪ್ ಮಾಡಬಹುದು. ಅದನ್ನು ವಿಶ್ಲೇಷಿಸಿ AI ನಿಮ್ಮ ಪರದೆಯ ಮೇಲೆ ನೀವು ಯೋಚಿಸುತ್ತಿರುವ ಚಿತ್ರವನ್ನು ತಕ್ಷಣವೇ ನಿಮ್ಮಮುಂದಿಡುತ್ತದೆ
11 / 13
ಸಾಫ್ಟ್‌ವೇರ್‌ನ ಸಾಮರ್ಥ್ಯಗಳನ್ನು ಅವಲಂಬಿಸಿ ಚಿತ್ರಗಳು ಶೈಲಿಯಲ್ಲಿ ಬದಲಾಗುತ್ತವೆ. 3D, 2D, ಸಿನಿಮೀಯ, ಆಧುನಿಕ, ನವೋದಯ ಹೀಗೆ ನೀವು ಬಯಸುವ ಯಾವುದೇ ಶೈಲಿಯಲ್ಲಿ ಚಿತ್ರವನ್ನು ಸಾಮಾನ್ಯವಾಗಿ ರಚಿಸಬಹುದು.
12 / 13
AI ಆರ್ಟ್ ಜನರೇಟರ್ ಸಾಮಾನ್ಯವಾಗಿ ಬಳಕೆದಾರ ನೀಡಿದ ವಿವರಗಳಿಂದ ಸೆಕೆಂಡುಗಳಲ್ಲಿ ಚಿತ್ರಗಳನ್ನು ರಚಿಸುತ್ತದೆ.
13 / 13
AI ನಲ್ಲಿ ಚಿತ್ರಗಳನ್ನು ರಚಿಸಲು ನಿಮಗೆ ಯಾವುದೇ ರೀತಿಯ ತರಬೇತಿಗಳ ಅಗಾಯ್ತವಿಲ್ಲ. ನೀವು ಕೂಡ ವಿವಿಧ ಆಪ್ಗಳ ಮೂಲಕ ಚಿತ್ರಗಳನ್ನು ರಚಿಸಬಿಹುದು