Crazy and Impossible: ಇದು ನೋಡಲು ಹಾಸ್ಯಾಸ್ಪದವಾಗಿದ್ದರೂ ಕೂಡ ನಿಮ್ಮ ಜೀವ ನಿಮ್ಮ ಜವಾಬ್ದಾರಿ ನೆನಪಿರಲಿ
TV9 Web | Updated By: ಅಕ್ಷತಾ ವರ್ಕಾಡಿ
Updated on:
Dec 14, 2022 | 5:34 PM
ಇಲ್ಲಿ ಸಾಕಷ್ಟು ಉದಾಹರಣೆಗಳ ಮೂಲಕ ಕಾರ್ ಆಕ್ಸಿಡೆಂಟ್ ಆಗಿರುವ ಘಟನೆಗಳ ಕುರಿತು ಮಾಹಿತಿ ಇಲ್ಲಿದೆ. ಇದೂ ನಿಮಗೆ ನೋಡುವಾಗ ಹಾಸ್ಯಾಸ್ಪದವಾಗಿದ್ದರೂ ಕೂಡ ನಿಮ್ಮ ಜೀವದ ಬಗ್ಗೆ ನೀವೂ ಎಚ್ಚರದಿಂದಿರುವುದು ಅಗತ್ಯವಾಗಿದೆ.
1 / 8
ಈ ಚಿತ್ರ ನೋಡಿದಾಕ್ಷಣ ಒಂದು ಕ್ಷಣ ನೀವು ಬೆರಗಾಗುತ್ತೀರಾ. ಈ ತರ ಕೂಡ ಆಕ್ಸಿಡೆಂಟ್ ಸಂಭವಿಸಲು ಸಾಧ್ಯವೇ ಎಂದು ನೀವು ಯೋಚಿಸುತ್ತಿರಬಹುದು. ಆದರೆ ಅದೃಷ್ಟವೆಂದರೆ ಈ ಅಪಘಾತದಲ್ಲಿ ಯಾವುದೇ ದೊಡ್ಡ ಮಟ್ಟದ ಗಾಯ ಅಥವಾ ಸಾವುನೋವುಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
2 / 8
ಈ ಚಿತ್ರ ನೋಡಿದ ತಕ್ಷಣ ನೀವೂ ಏನಪ್ಪಾ ಈ ತರನೂ ಕಾರ್ ಪಾರ್ಕಿಂಗ್ ಮಾಡಬಹುದಾ? ಅಂತಾ ಅನ್ಕೊತ್ತಿದ್ದೀರಾ? ಆದರೆ ನೀವೂ ಯಾವಾತ್ತೂ ಈ ತರಹದ ಸಾಹಸ ಮಾಡಲು ಹೋಗದಿರಿ. ಇದು ಅಪಘಾತವೊಂದರಲ್ಲಿ ಕಾರು ಹೋಗಿ ಈ ತರ ನಿಂತಿದೆ.
3 / 8
ಇಂತಹ ಘಟನೆಗಳು ಸಾಮಾನ್ಯವಾಗಿ ಕಂಡುಬರುತ್ತಿರುತ್ತದೆ. ಬೆಂಗಳೂರಿನಲ್ಲಿ ರಸ್ತೆ ಬದಿಯ ತೆರೆದ ಚರಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಘಟನೆಗಳಿವೆ. ಆದರೆ ಈ ಚಿತ್ರಣದ ಪ್ರಕಾರ ಚಾಲಕ ಅಲ್ಲಿ ತಪ್ಪು ತಿರುವು ಮಾಡಿರಬೇಕು ಎಂದು ಅನಿಸುತ್ತದೆ.
4 / 8
ಸಾಮಾನ್ಯವಾಗಿ ನೀವೂ ವಾಹನಗಳನ್ನು ಮನೆಯ ಮುಂದೆ ಪಾರ್ಕ್ ಮಾಡೋದನ್ನ ನೋಡಿರುತ್ತೀರಿ ಹಾಗೆಯೇ ನಿಮ್ಮ ಮನೆಯಲ್ಲಿ ಕಾರಿದ್ದರೆ ನಿಮಗೆ ಎಲ್ಲಿ ಪಾರ್ಕ್ ಮಾಡಬೇಕು ಎಂದು ತಿಳಿದಿರುತ್ತದೆ. ಆದರೆ ಇಲ್ಲೊಬ್ಬ ಮನೆಯ ಹಂಚಿನ ಮೇಲೆ ಕಾರ್ ಪಾರ್ಕ್ ಮಾಡಿದ್ದಾನೆ. ಚಾಲಕನ ನಿಯಂತ್ರಣ ತಪ್ಪಿ ಕಾರು ನೇರವಾಗಿ ಮನೆಯ ಹಂಚಿನ ಮೇಲೆ ನಿಂತಿದೆ.
5 / 8
ನೀವು ಮರದ ಮೇಲೆ ಕಾಗೆ ನೋಡಿರುತ್ತೀರಾ, ಆದರೆ ಮರದ ಮೇಲೆ ಕಾರು ನೋಡಿದ್ದೀರಾ? ಈ ಚಿತ್ರವನ್ನು ಗಮನಿಸಿ. ಹೌದು ರೇಸಿಂಗ್ ಕಾರು ಒಂದು ಹೋಗುವ ರಭಸದಲ್ಲಿ ನಿಯಂತ್ರಣ ತಪ್ಪಿ ನೇರವಾಗಿ ಹೋಗಿ ಮರದ ಮೇಲೆ ನಿಂತಿದೆ.
6 / 8
ನೀರಿನಲ್ಲಿ ಈಜುತ್ತಿರುವ ಕಾರನ್ನು ಒಮ್ಮೆ ನೋಡಿ. ಹೌದು ಈ ಕಾರು ನಿಯಂತ್ರಣ ತಪ್ಪಿ ನೇರವಾಗಿ ಯಾರಾದ್ದೋ ಸ್ವಿಮಿಂಗ್ ಪೂಲ್ ಒಳಗಡೆ ಬಿದ್ದಿದೆ.
7 / 8
ಮರದ ಕೆಳಗಡೆ ಕಾರು ಪಾರ್ಕ್ ಮಾಡಿದಾಗ ಒಂದಲ್ಲಾ ಒಂದು ಸಲವಾದರೂ ಈ ಅನುಭವ ನಿಮಗಾಗಿರುತ್ತದೆ. ಕಾರಿಗೆ ಬಿಸಿಲು ತಾಗದಿರಲಿ ಎಂದು ನೀವೂ ಯೋಚಿಸಿ ನೀವು ಪಾರ್ಕ್ ಮಾಡಿದರೆ ಮರದಲ್ಲಿನ ಪಕ್ಷಿಗಳು ನಿಮ್ಮ ಕಾರಿನ ಮೇಲೆ ಚೆನ್ನಾಗಿ ಚಿತ್ರ ಬಿಡಿಸಿರುತ್ತದೆ.
8 / 8
ನನ್ ಕಾರಿಗೂ ಸ್ವಲ್ಪ ಜಾಗ ಕೊಡಪ್ಪ ಅಂತಾ ಹೇಳಿದ ಹಾಗೆಯೇ ಇದೆ. ಸ್ವಲ್ಪ ಜಾಗ ಬಿಡಿ ನಾನು ಅಜೆಸ್ಟ್ ಮಾಡ್ಕೊತೀನಿ.
Published On - 5:00 pm, Wed, 14 December 22