Updated on:Dec 14, 2022 | 1:32 PM
ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದ್ದಾರೆ. ಏಕದಿನ ಸರಣಿಯಲ್ಲಿ ಸೋತಿರುವ ಟೀಂ ಇಂಡಿಯಾ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲೂ ಕಳಪೆ ಪ್ರದರ್ಶನ ನೀಡಿದೆ. ಅದರಲ್ಲೂ ಶುಭಮನ್ ಗಿಲ್, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಬೇಗನೇ ಪೆವಿಲಿಯನ್ಗೆ ಮರಳಿದ್ದಾರೆ.
ಈ ಮೂವರ ವಿಕೆಟ್ ಬಳಿಕ ಮೈದಾನಕ್ಕೆ ಬಂದ ರಿಷಭ್ ಪಂತ್ ಕೊಹ್ಲಿ ವಿಕೆಟ್ ಬಳಿಕ ನಾಲ್ಕನೇ ವಿಕೆಟ್ಗೆ ಪೂಜಾರ ಜೊತೆಗೂಡಿದ ಪಂತ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ ಮತ್ತೊಮ್ಮೆ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಎಡವಿದರು. ಈ ಪಂದ್ಯದಲ್ಲೂ ಪಂತ್ ತಮ್ಮ ಬ್ಯಾಡ್ ಶಾಟ್ ಸೆಲೆಕ್ಷನ್ನಿಂದಾಗಿ ತಮ್ಮ ವಿಕೆಟ್ ಕಳೆದುಕೊಳ್ಳಬೇಕಾಯಿತು.
ಚಟ್ಟೋಗ್ರಾಮ್‌ನಲ್ಲಿ ತಮ್ಮದೇ ಶೈಲಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ರಿಷಬ್ ಪಂತ್, ಬಂದ ಕೂಡಲೇ ಬೌಂಡರಿ ಕಲೆಹಾಕಲು ಆರಂಭಿಸಿದರು. ಪಂತ್ ತಮ್ಮ ಇನ್ನಿಂಗ್ಸ್‌ನಲ್ಲಿ 6 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳನ್ನು ಹೊಡೆದಿದ್ದಲ್ಲದೆ, 100ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದರು.
ಈ ಪಂದ್ಯದಲ್ಲಿ ಪಂತ್ ಅರ್ಧಶತಕವನ್ನು ಗಳಿಸದೇ ಇರಬಹುದು. ಆದರೆ 46 ರನ್‌ಗಳ ಈ ಇನ್ನಿಂಗ್ಸ್‌ನಲ್ಲಿ 2 ವಿಶೇಷ ಮೈಲಿಗಲ್ಲುಗಳನ್ನು ಸಾಧಿಸಿದರು. ಮೊದಲನೆಯದಾಗಿ, ಪಂತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 4000 ರನ್‌ಗಳನ್ನು ಪೂರ್ಣಗೊಳಿಸಿದರು.
ಎರಡನೇಯದಾಗಿ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 50 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ವಿಕೆಟ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾಗಿದ್ದಾರೆ.
ಅಲ್ಲದೆ ಟೀಂ ಇಂಡಿಯಾ ಪರ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್ ಹೊಡೆದವರ ಪಟ್ಟಿಯಲ್ಲಿ ಪಂತ್ ಎರಡನೇ ಸ್ಥಾನದಲ್ಲಿದ್ದಾರೆ. ಪಂತ್ ಒಟ್ಟು 54 ಇನ್ನಿಂಗ್ಸ್‌ಗಳಲ್ಲಿ 50 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 51 ಇನ್ನಿಂಗ್ಸ್‌ಗಳಲ್ಲಿ ಸಿಕ್ಸರ್ಗಳ ಅರ್ಧಶತಕ ಪೂರೈಸಿದ್ದಾರೆ.
Published On - 1:32 pm, Wed, 14 December 22