Artificial Intelligence: ಅದ್ಭುತವಾಗಿದೆ ಕಲಾವಿದನ ಈ ಕೈಚಳಕ, AI ಸಾಫ್ಟ್ವೇರ್ನಲ್ಲಿ ಮಾಡಿದ ಚಿತ್ರಗಳು, ಇಲ್ಲಿದೆ ನೋಡಿ
TV9 Web | Updated By: ಅಕ್ಷಯ್ ಪಲ್ಲಮಜಲು
Updated on:
May 19, 2023 | 6:35 PM
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್ವೇರ್ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ.
1 / 8
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್ವೇರ್ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ. ಡಿಜಿಟಲ್ ಸೃಷ್ಟಿಕರ್ತ ಮತ್ತು AI ಉತ್ಸಾಹಿ ಸಾಹಿದ್ ಅವರು ನಗರ ಮೆಟ್ರೋದಲ್ಲಿ ಹೇಗೆಲ್ಲ ವ್ಯಾಪರ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.
2 / 8
AI ಸಾಫ್ಟ್‌ವೇರ್ ಮೂಲಕ ಸಾಹಿದ್ ಅವರು ಮೆಟ್ರೋ ಒಳಗೆ ಒಬ್ಬ ವ್ಯಕ್ತಿ ಮೀನು ಮಾರಾಟ ಮಾಡುವ ಚಿತ್ರವನ್ನು ರಚಿಸಿದ್ದಾರೆ. ಒಂದು ಬಾರಿ ಅಯ್ಯೋ ಇದು ನಿಜವೇ ಎಂದು ಅನ್ನಿಸುತ್ತದೆ, ಆದರೆ ಸರಿಯಾಗಿ ನೋಡಿದರೆ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರ ಎಂದು ತಿಳಿಯುತ್ತದೆ.
3 / 8
ಇನ್ನೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರದಲ್ಲಿ ಒಂಟೆ ಮತ್ತು ಒಂದಿಷ್ಟು ಜನ ಕುಳಿತಿರುವುದನ್ನು ಕಾಣಬಹುದು, ಜತೆಗೆ ಆ ಮೆಟ್ರೋದಲ್ಲಿ ಮರಳುಗಳನ್ನು ಕಾಣಬಹುದು. ಇದು ಮರುಭೂಮಿ ಪ್ರದೇಶದಲ್ಲಿರುವ ಮೆಟ್ರೋ ಎಂಬಂತೆ ಭಾಸವಾಗುತ್ತದೆ.
4 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ವಡಾ ಪಾವ್ ಮಧ್ಯೆ ಜನರು ನಿಂತಿರುವುದು ಕಾಣಬಹುದು. ಇದು ನಿಜವಾಗಿದ್ದರೆ, ಖಂಡಿತ ಒಂದು ವಡಾ ಪಾವ್ ತೆಗೆದುಕೊಳ್ಳಬಹುದಿತ್ತು. ಇದು ನೋಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರದಂತೆ ಇಲ್ಲ ಯಾರೇ ವಡಾ ಪಾವ್ ಫೋಟೋವನ್ನು ಹತ್ತಿರದಿಂದ ತೆಗೆದಂತಿದೆ.
5 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ತೆಂಗಿನ ಕಾಯಿ ರಾಶಿಗಳು, ಅದರ ಮಧ್ಯೆ ಜನರು ಕುಳಿತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಒಂದು ಅಧ್ಭುತ ಚಿತ್ರವೆನ್ನುವುದರಲ್ಲಿ ಸುಳ್ಳಿಲ್ಲ
6 / 8
ಈ ಫೋಟೋ ಇನ್ನೂ ಸಖತ್ ಆಗಿದೆ, ಹೌದು ಎರಡು ಪ್ರಣಯ ಪಕ್ಷಿಗಳು ಚುಂಬಿಸುತ್ತಿರುವ ಫೋಟೋವನ್ನು ಬಿಡಿಸಿದ್ದಾರೆ. ಮೆಟ್ರೋದಲ್ಲಿ ಕಿಸ್ ಮಾಡುವ ಫೋಟೋ ಎಲ್ಲರ ಗಮನ ಸೆಳೆಯುವುದು ಖಂಡಿತ
7 / 8
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಡಿ ಬಂದ ಇನ್ನೊಂದು ಚಿತ್ರ ಹೈದರಾಬಾದ್ ಬಿರಿಯಾನಿ, ಇದು ಮಾತ್ರ ಸಖತ್ ಆಗಿತ್ತು. ಮೆಟ್ರೋದಲ್ಲಿ ಎಂದಾದರೂ ನೀವು ಬಿರಿಯಾನಿ ಮಾರಾಟ ಮಾಡುವುದನ್ನು ನೋಡಿದ್ದೀರಾ, ಇಲ್ಲಿದೆ ನೋಡಿ, ಒಬ್ಬ ವ್ಯಕ್ತಿ ಆ ಬಿರಿಯಾನಿ ಮೇಲಿನಿಂದ ನೋಡುತ್ತಾನೆ. ಇನ್ನೂ ಅನೇಕ ಜೇನಿನಂತೆ ಸುತ್ತುವರಿದು ನೋಡುತ್ತಾರೆ.
8 / 8
ಮೆಟ್ರೋದಲ್ಲಿ ಅಷ್ಟೊಂದು ಜನರ ಮಧ್ಯೆ ಮಾವಿನ ಹಣ್ಣು ಇರುವ ಫೋಟೋ, ಸಖತ್ ಆಗಿದೆ. ಅಲ್ಲಿರುವ ಮಕ್ಕಳ ಒಂದು ವೇಳೆ ನಿಜವಾಗಿದ್ದರೆ, ಒಂದು ಮಾವಿನ ಹಣ್ಣು ಎಸ್ಕೆಪ್ ಆಗುತ್ತಿತ್ತು.