
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್‌ನಲ್ಲಿ ಹೊಸ ಮೇಳ ಶುರುವಾಗಿದೆ. ನೀವು ಆಕರ್ಷಕವಾದ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಖರೀದಿಸ ಬೇಕು ಅಂದಿಕೊಂಡಿದ್ದರೆ ಅಮೆಜಾನ್‌ನಲ್ಲಿ ಸ್ಮಾರ್ಟ್ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ ನಡೆಯುತ್ತಿದೆ. ಈ ಮೇಳವು ಅಕ್ಟೋಬರ್ 28 ರವರೆಗೆ ನಡೆಯಲಿದೆ.

ಸ್ಮಾರ್ಟ್ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ನಲ್ಲಿ ಒನ್‌ಪ್ಲಸ್, ರಿಯಲ್‌ಮಿ, ರೆಡ್ಮಿ, ಸ್ಯಾಮ್‌ಸಂಗ್ ಸೇರಿದಂತೆ ಇನ್ನಿತರೆ ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಶೇ. 40 ವರೆಗೆ ರಿಯಾಯಿತಿ ಪಡೆದುಕೊಂಡಿವೆ. ಜೊತೆಗೆ ಎಯು ಬ್ಯಾಂಕ್, ಫೆಡರಲ್ ಬ್ಯಾಂಕ್, ಆರ್‌ಬಿಎಲ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ಸಹ ಪಡೆಯಬಹುದಾಗಿದೆ. ಇಲ್ಲಿದೆ ನೋಡಿ ಕಡಿಮೆ ಬೆಲೆಗೆ ಲಭ್ಯವಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು

ಅಮೆಜಾನ್‌ನಲ್ಲಿ ನಡೆಯುತ್ತಿರುವ ಸ್ಮಾರ್ಟ್ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ನಲ್ಲಿ iQOO Z6 5G ಮತ್ತು Z6 5G Lite ಕ್ರಮವಾಗಿ 14,999 ರೂ. ಮತ್ತು 13,249 ರೂ. ಗೆ ಮಾರಾಟ ಆಗುತ್ತಿದೆ. ಅಲ್ಲದೆ iQOO Neo 6 5G ಯನ್ನು ಕೂಡ ನೀವು ಕೇವಲ 25,999 ರೂ. ಗಳಿಗೆ ನಿಮ್ಮಸಾಗಿಸಬಹುದು.

ಈ ವರ್ಷ ಬಿಡುಗಡೆ ಆದ ಒನ್‌ಪ್ಲಸ್ ಕಂಪನಿಯ ಪ್ರಸಿದ್ಧ OnePlus Nord CE 2 ಮತ್ತು OnePlus 10R ಪ್ರೈಮ್ ಸ್ಮಾರ್ಟ್ಫೋನ್ ಕ್ರಮವಾಗಿ 23,499 ರೂ. ಗಳಿಗೆ ಮತ್ತು 29,499 ರೂ. ಗಳಿಗೆ ಸೇಲ್ ಕಾಣುತ್ತಿದೆ.

ಸ್ಮಾರ್ಟ್ಫೋನ್ ಅಪ್‌ಗ್ರೇಡ್ ಡೇಸ್ ಸೇಲ್ನಲ್ಲಿ ಶವೋಮಿ ಕಂಪನಿಯ Redmi Note 11T 5G ಕೇವಲ 14,999 ರೂ. ಗೆ ಖರೀದಿಸಬಹುದು. ಅಂತೆಯೆ Redmi 10A ಬೆಲೆ 6,996ರೂ. ಆಗಿದೆ. Redmi Note 11 Pro+ 5G ಸ್ಮಾರ್ಟ್ಫೋನ್ ಬಂಪರ್ ಡಿಸ್ಕೌಂಟ್ ಪಡೆದುಕೊಂಡು 18,999 ರೂ. ಗಳಿಗೆ ಸೇಲ್ ಆಗುತ್ತಿದೆ. Redmi 9 Activ, Redmi A1 ಮತ್ತು Redmi K50i ಕೂಡ ಕ್ರಮವಾಗಿ 7,299 ರೂ., 5,489 ರೂ. ಮತ್ತು 19,999ರೂ. ಗೆ ನಿಮ್ಮದಾಗಿಸಬಹುದು.

ಇನ್ನು Redmi Note 11 Pro+ 5G ಸ್ಮಾರ್ಟ್ಫೋನ್ ಬಂಪರ್ ಡಿಸ್ಕೌಂಟ್ ಪಡೆದುಕೊಂಡು 18,999 ರೂ. ಗಳಿಗೆ ಸೇಲ್ ಆಗುತ್ತಿದೆ. Redmi 9 Activ, Redmi A1 ಮತ್ತು Redmi K50i ಕೂಡ ಕ್ರಮವಾಗಿ 7,299 ರೂ., 5,489 ರೂ. ಮತ್ತು 19,999ರೂ. ಗೆ ನಿಮ್ಮದಾಗಿಸಬಹುದು.

Realme Narzo 50 ಮತ್ತು Realme Narzo 50i ಕ್ರಮವಾಗಿ 9,999 ರೂ. ಮತ್ತು 5,749 ರೂ. ಗೆ ಲಭ್ಯವಿರುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ M13 5G ಸ್ಮಾರ್ಟ್ಫೋನ್ ರಿಯಾಯಿತಿ ಪಡೆದುಕೊಂಡು 12,999 ರೂ. ಗೆ ಸೇಲ್ ಕಾಣುತ್ತಿದೆ.

Tecno Pop 6 Pro ಕೇವಲ 5,399 ರೂ. ಡಿಸ್ಕೌಂಟ್ನಲ್ಲಿ ಕಾಣಿಸಿಕೊಂಡಿದೆ. ನೀವು ಇಲ್ಲಿ ಹೆಚ್ಚಿನ ಟಾಪ್ ಡೀಲ್‌ಗಳು ಮತ್ತು ಕೊಡುಗೆಗಳನ್ನು ವೀಕ್ಷಿಸಬಹುದು. ಇವುಗಳ ಜೊತೆಗೆ ಹೈ-ರೇಂಜ್ ಮಾದರಿಯ ಐಫೋಮ್ 13, ಐಫೋನ್ 12, ಸ್ಯಾಮ್‌ಸಂಗ್ ಗ್ಯಾಲಕ್ಸಿ S ಸರಣಿಯ ದುಬಾರಿ ಫೋನ್ಗಳು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ.
Published On - 1:50 pm, Thu, 27 October 22