ಅನುಶ್ರೀ ಹನಿಮೂನ್ ಫೋಟೋಗೆ ಬಂತು ಆ ವಿಶೇಷ ಕಮೆಂಟ್

Updated on: Sep 30, 2025 | 7:27 AM

Anushree Honeymoon Photos: ಅನುಶ್ರೀ ಅವರು ಆಗಸ್ಟ್ 28ರಂದು ರೋಷನ್ ಜೊತೆ ಮದುವೆ ಆಗಿದ್ದಾರೆ. ಅವರು ಈಗ ಬಿಡುವು ಮಾಡಿಕೊಂಡು ಹನಿಮೂನ್ ತೆರಳಿದ್ದಾರೆ. ಈ ಸಂದರ್ಭದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

1 / 5
ಅನುಶ್ರೀ ಅವರು ವಿವಾಹದ ಬಳಿಕ ಜೀ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಆದ ಬಳಿಕವೇ ಅವರು ಮತ್ತೆ ತಮ್ಮ ವೃತ್ತಿ ಬದುಕಿನ ಕೆಲಸ ಆರಂಭಿಸಿದ್ದರು. ಈಗ ಬಿಡುವು ಮಾಡಿಕೊಂಡು ಅವರು ಹನಿಮೂನ್ ತೆರಳಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಅನುಶ್ರೀ ಅವರು ವಿವಾಹದ ಬಳಿಕ ಜೀ ಕನ್ನಡದಲ್ಲಿ ಕಾಣಿಸಿಕೊಂಡಿದ್ದರು. ಮದುವೆ ಆದ ಬಳಿಕವೇ ಅವರು ಮತ್ತೆ ತಮ್ಮ ವೃತ್ತಿ ಬದುಕಿನ ಕೆಲಸ ಆರಂಭಿಸಿದ್ದರು. ಈಗ ಬಿಡುವು ಮಾಡಿಕೊಂಡು ಅವರು ಹನಿಮೂನ್ ತೆರಳಿದ್ದಾರೆ. ಆ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 5

ಅನುಶ್ರೀ ವಿವಾಹದ ಬಳಿಕ ತೆರಳುತ್ತಿರುವ ಮೊದಲ ಟ್ರಿಪ್ ಇದಾಗಿದೆ. ಈ ಕಾರಣದಿಂದಲೇ ಅವರು ಪ್ರಕೃತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅನುಶ್ರೀ ಅವರಿಗೆ ಪ್ರಕೃತಿ ಎಂದರೆ ಸಖತ್ ಇಷ್ಟ. ಹೀಗಾಗಿ, ಹೊಲ, ಗದ್ದೆ ಇರುವ ಜಾಗಕ್ಕೆ ತೆರಳಿದ್ದಾರೆ.

3 / 5

ಅನುಶ್ರೀ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಅನೇಕರು ಈ ಜೋಡಿಯನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇದರಲ್ಲಿ ಒಂದು ಕಮೆಂಟ್ ಗಮನ ಸೆಳೆದಿದೆ.

4 / 5

ಹ್ಯಾಪಿ ಸೋಲ್ ಹೆಸರಿನ ಅನುಶ್ರೀ ಅಭಿಮಾನಿ, ‘ಯಾವ್ ಕೆಟ್ಟ ದೃಷ್ಟಿ ಬೀಳದೆ ಇರಲಿ ನಿಮ್ ಜೋಡಿಗೆ’ ಎಂದು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್​ಗೆ 500ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

5 / 5

ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ವಿವಿಧ ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಮದುವೆ ವಿಡಿಯೋಗಳನ್ನು ಅವರು ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದರು.

Published On - 7:27 am, Tue, 30 September 25

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us