
ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ಮೆಷಿನ್ಗಳು, ಇದರಿಂದ ಪಿಂಕ್ ಲೈನ್ ನಲ್ಲಿ 98% ಸುರಂಗ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.