
ಎರಡು ಪ್ರಸಿದ್ಧ ಇ ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ ವರ್ಷದ ಅತಿ ಡೊಡ್ಡ ಮೇಳ ಪ್ರಾರಂಭವಾಗಿದೆ. ಅಮೆಜಾನ್ ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 (Amazon Great Indian Festival Sale) ಆರಂಭಿಸಿದ್ದು ಈ ತಿಂಗಳ ಅಂತ್ಯದ ವರೆಗೆ ನಡೆಯಲಿದೆ.

ಇತ್ತ ಫ್ಲಿಪ್‌ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 (Flipkart Big Billion Days sale) ಸೆಪ್ಟೆಂಬರ್ 30 ರವರೆಗೆ ಆಯೋಜಿಸಲಾಗಿದೆ. ಎರಡೂ ತಾಣಗಳಲ್ಲಿ ಸ್ಮಾರ್ಟ್ ಫೋನುಗಳಿಗೆ ಬಂಪರ್ ಆಫರ್ ನೀಡಲಾಗಿದೆ. ಮುಖ್ಯವಾಗಿ ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ ಗಳು ಕಡಿಮೆ ದರಕ್ಕೆ ಮಾರಾಟ ಆಗುತ್ತಿದೆ.

ಕಳೆದ ವರ್ಷ ಬಿಡುಗಡೆ ಆದ ಐಫೋನ್ 13 ಅನ್ನು ನೀವು 60,000 ರೂ. ಒಳಗಡೆ ಖರೀದಿಸಬಹುದು. ಇದರ 128GB ಸ್ಟೋರೇಜ್ ಸಾಮರ್ಥ್ಯಕ್ಕೆ 57,990 ರೂ. ನಿಗದಿ ಮಾಡಲಾಗಿದೆ. 256GB ಸ್ಟೋರೇಜ್ ಗೆ 66,990 ರೂ. ಹಾಗೂ 512GB ಸ್ಟೋರೇಜ್ ಗೆ 86,990 ರೂ. ಇದೆ.

ಇನ್ನು ಐಫೋನ್ 12 ಮಾಡೆಲ್ 64GB ಗೆ 53,990 ರೂ. ಇದ್ದರೆ iPhone 12 128GB ಸ್ಟೋರೇಜ್ ಗೆ 58,990 ರೂ. ನಿಗದಿ ಮಾಡಲಾಗಿದೆ. ಅಂತೆಯೆ iPhone 12 256GB 67,990 ರೂ. ಇದೆ.

ಐಫೋನ್ 11 ಅನ್ನು ನೀವು 40,000 ರೂ. ಒಳಗಡೆ ಖರೀದಿಸಬಹುದು. ಇದರ 64GB ಸ್ಟೋರೇಜ್ ಸಾಮರ್ಥ್ಯಕ್ಕೆ 35,990 ರೂ. ನಿಗದಿ ಮಾಡಲಾಗಿದೆ. 128GB ಸ್ಟೋರೇಜ್ ಗೆ 39,990 ರೂ. ಇದೆ. ಆದರೆ, ಈ ಫೋನ್ 5ಜಿ ಬೆಂಬಲ ಪಡೆದುಕೊಂಡಿಲ್ಲ.

ಇನ್ನು ಗೂಗಲ್ ಪಿಕ್ಸೆಲ್ 6a ಸ್ಮಾರ್ಟ್ ಫೋನ್ ಕೇವಲ 27,699 ರೂ. ಗೆ ನಿಮ್ಮದಾಗಿಸಬಹುದು. ಅಂತೆಯೆ ನಥಿಂಗ್ ಫೋನ್ 1 6GB +128GB ಸ್ಟೋರೇಜ್ ಆಯ್ಕೆ 37,999 ರೂ. ರಿಲೀಸ್ ಆಗಿತ್ತು. ಇದನ್ನು ನೀವು 28,999 ರೂ. ಗೆ ಖರೀದಿಸಬಹುದು.

ಐಸಿಐಸಿಐ ಬ್ಯಾಂಕ್ ಕಾರ್ಡ್ ಅಥವಾ ಆಕ್ಸಿಸ್ ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್ ಪಡೆಯಬಹುದು. ಬ್ಯಾಂಕ್ ಆಫರ್ ಗಳ ಜೊತೆಗೆ ನೋ ಕಾಸ್ಟ್ ಇಎಂಐ ಮತ್ತು ಸ್ಮಾರ್ಟ್ ಫೋನ್ ಎಕ್ಸ್ ಚೇಂಜ್ ಆಫರ್ ಕೂಡ ಪಡೆದುಕೊಳ್ಳಬಹುದಾಗಿದೆ.