- Kannada News Photo gallery Cricket photos CAB planning to name a stand after Jhulan Goswami at Eden Gardens
Jhulan Goswam: ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿರುವ ಸ್ಟ್ಯಾಂಡ್‌ಗೆ ಜೂಲನ್ ಗೋಸ್ವಾಮಿ ಹೆಸರು..!
Jhulan Goswam: ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದೊಂದಿಗೆ ಕೊನೆಯದಾಗಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿದಿದ್ದ ಜೂಲನ್ ಅವರ ಶ್ರೇಷ್ಠ ವೃತ್ತಿಜೀವನವನ್ನು ಗೌರವಿಸಲು, ಇದೀಗ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.
Updated on: Sep 24, 2022 | 6:51 PM

ವಿಶ್ವದ ಅತ್ಯಂತ ಯಶಸ್ವಿ ಮಹಿಳಾ ಬೌಲರ್ ಜೂಲನ್ ಗೋಸ್ವಾಮಿ ಅವರ ಎರಡು ದಶಕಗಳ ಸುದೀರ್ಘ ವೃತ್ತಿಜೀವನ ಅಂತ್ಯಗೊಂಡಿದೆ. ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದೊಂದಿಗೆ ಕೊನೆಯದಾಗಿ ಟೀಂ ಇಂಡಿಯಾದ ಜೆರ್ಸಿಯಲ್ಲಿ ಮೈದಾನಕ್ಕೆ ಇಳಿದಿದ್ದ ಜೂಲನ್ ಅವರ ಶ್ರೇಷ್ಠ ವೃತ್ತಿಜೀವನವನ್ನು ಗೌರವಿಸಲು, ಇದೀಗ ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ.

ಮಾಹಿತಿಯ ಪ್ರಕಾರ, ವಿಶ್ವವಿಖ್ಯಾತ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿರುವ ಸ್ಟ್ಯಾಂಡ್‌ಗೆ ಶೀಘ್ರದಲ್ಲೇ ಜೂಲನ್ ಗೋಸ್ವಾಮಿ ಹೆಸರಿಡಲು ಬಂಗಾಳದ ಕ್ರಿಕೆಟ್ ಅಸೋಸಿಯೇಷನ್ ಮುಂದಾಗಿದೆ.

ಕೋಲ್ಕತ್ತಾದಿಂದ ತಮ್ಮ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ಜೂಲನ್ ಗೋಸ್ವಾಮಿ ಅವರು ಸೆಪ್ಟೆಂಬರ್ 24 ರ ಶನಿವಾರದಂದು ಲಾರ್ಡ್ಸ್‌ನ ಐತಿಹಾಸಿಕ ಮೈದಾನದಲ್ಲಿ ಕೊನೆಯ ಬಾರಿಗೆ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾ ಪರ ಕೊನೆಯದಾಗಿ ಕಣಕ್ಕಿಳಿಯುತ್ತಿರುವ ಜೂಲನ್ ಅವರಿಗೆ ಟೀಂ ಇಂಡಿಯಾ ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ ಭಾವಪೂರ್ವಕ ವಿದಾಯ ಹೇಳಿದರು.

ಟೀಂ ಇಂಡಿಯಾ ಮಾತ್ರವಲ್ಲ, ಇಂಗ್ಲೆಂಡ್ ಕ್ರಿಕೆಟ್ ತಂಡವೂ ಟೀಂ ಇಂಡಿಯಾದ ಈ ದಂತಕಥೆಯನ್ನು ವಿಶೇಷ ರೀತಿಯಲ್ಲಿ ಗೌರವಿಸಿತು. ಇಂಗ್ಲೆಂಡ್ ಕೋಚ್ ಮತ್ತು ಇಸಿಬಿ ಅಧಿಕಾರಿಗಳು ಒಟ್ಟಾಗಿ ಜೂಲನ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಟೆಸ್ಟ್ ಜರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ಜರ್ಸಿಯ ಮೇಲೆ ಇಂಗ್ಲೆಂಡ್ ತಂಡದ ಎಲ್ಲಾ ಆಟಗಾರರು ಸಹಿ ಇದ್ದು, ಇದರಲ್ಲಿ ಜೂಲನ್‌ಗೆ ವಿಶೇಷ ಸಂದೇಶವನ್ನು ಸಹ ಬರೆದಿದ್ದಾರೆ.




