Apple Seeds: ಸೇಬು ಹಣ್ಣಿನೊಂದಿಗೆ ಬೀಜಗಳನ್ನು ತಿನ್ನುತ್ತಿದ್ದೀರಾ? ಹಾಗಾದ್ರೆ ಅಪಾಯ ತಪ್ಪಿದ್ದಲ್ಲ

Updated on: May 26, 2023 | 8:55 PM

ನಮ್ಮಲ್ಲಿ ಹೆಚ್ಚಿನವರು ಸೇಬು ಹಣ್ಣನ್ನು ಬೀಜ ತೆಗೆದು ತಿನ್ನುತ್ತಾರೆ. ಆದರೆ ಮತ್ತೆ ಕೆಲವರು ಬೀಜಗಳನ್ನೂ ತಿನ್ನುತ್ತಾರೆ. ಆದರೆ ಬೀಜ ತಿನ್ನುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ ಎನ್ನುತ್ತಾರೆ ತಜ್ಞರು.

1 / 5
ಪ್ರತಿದಿನ ಒಂದು ಸೇಬು ತಿಂದರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು 
ವೈದ್ಯರು ಹೇಳುತ್ತಾರೆ. ಅವರೇ ಹೇಳುವಂತೆ ಈ ಹಣ್ಣು ಪೋಷಕಾಂಶಗಳಿಂದ ಕೂಡಿದ್ದು, 
ಇದರಲ್ಲಿರುವ ವಿಟಮಿನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು 
ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ.

ಪ್ರತಿದಿನ ಒಂದು ಸೇಬು ತಿಂದರೆ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ವೈದ್ಯರು ಹೇಳುತ್ತಾರೆ. ಅವರೇ ಹೇಳುವಂತೆ ಈ ಹಣ್ಣು ಪೋಷಕಾಂಶಗಳಿಂದ ಕೂಡಿದ್ದು, ಇದರಲ್ಲಿರುವ ವಿಟಮಿನ್, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ನಮ್ಮ ದೇಹವನ್ನು ಅನೇಕ ರೋಗಗಳಿಂದ ಮುಕ್ತಿ ನೀಡುತ್ತದೆ.

2 / 5

ನಮ್ಮಲ್ಲಿ ಹೆಚ್ಚಿನವರು ಸೇಬು ಹಣ್ಣನ್ನು ಬೀಜ ತೆಗೆದು ತಿನ್ನುತ್ತಾರೆ. ಆದರೆ ಮತ್ತೆ ಕೆಲವರು ಬೀಜಗಳನ್ನೂ ತಿನ್ನುತ್ತಾರೆ. ಆದರೆ ಬೀಜ ತಿನ್ನುವುದರಿಂದ ಅನೇಕ ಸಮಸ್ಯೆಗಳಿಗೆ ಕಾರಣವಾಗಲಿದೆ.

3 / 5

ಸೇಬು ಬೀಜಗಳು ಅಮಿಗ್ಡಾಲಿನ್ ಎಂಬ ವಿಷಕಾರಿ ಅಂಶವನ್ನು ಹೊಂದಿರುತ್ತದೆ. ಇದನ್ನು ತಿನ್ನುವಾಗ ಅಥವಾ ಅಗಿಯುವಾಗ, ಅಮಿಗ್ಡಾಲಿನ್ ಹೈಡ್ರೋಜನ್ ಸೈನೈಡ್ ಆಗಿ ಬದಲಾಗುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.

4 / 5

ಸೇಬು ಬೀಜ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ತಲುಪದಂತೆ ತಡೆಯುತ್ತದೆ. ಸಣ್ಣ ಪ್ರಮಾಣದ ಸೈನೈಡ್ ದೇಹಕ್ಕೆ ಅಲ್ಪಾವಧಿ ಹಾನಿಯನ್ನು ಉಂಟುಮಾಡಬಹುದು. ಇದು ತಲೆನೋವು, ಆಯಾಸ, ಆಲಸ್ಯ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.

5 / 5

ಅಮಿಗ್ಡಾಲಿನ್ ಮಾರಣಾಂತಿಕವಲ್ಲದಿದ್ದರೂ, ಅದು ದೇಹಕ್ಕೆ ಹಾನಿಕಾರಕ ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ಚಿಕ್ಕ ಮಕ್ಕಳಿಗೆ ಬೀಜಗಳನ್ನು ತೆಗೆದ ಸೇಬುಗಳನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ.

Loading...
Unable to load recommendations.
Follow Us