ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾದ ಅಸ್ಸಾಂನ ರಾಜಸಮಾಧಿ ಮೊಯ್ದಾಮ್

Updated on: Jul 26, 2024 | 2:57 PM

ಅಸ್ಸಾಂನ ರಾಜ ಮನೆತನಗಳ ಸಮಾಧಿ ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಭಾರತದ ಪಾಲಿಗೆ ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಹೇಳಿದೆ.

1 / 10
ಮೊಯ್ದಾಮ್​ ಅನ್ನು 2014 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ಜನವರಿ 2023 ರಲ್ಲಿ ಭಾರತವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.

ಮೊಯ್ದಾಮ್​ ಅನ್ನು 2014 ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ಜನವರಿ 2023 ರಲ್ಲಿ ಭಾರತವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.

2 / 10

ಅಸ್ಸಾಂನಲ್ಲಿರುವ ಚರೈಡಿಯೊ ಮೊಯ್ದಾಮ್ ಈಶಾನ್ಯ ಭಾರತದ ಪ್ರಮುಖ ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣವಾಗಿದೆ. ಈ ಪ್ರಾಚೀನಸಮಾದಿ ದಿಬ್ಬಗಳನ್ನು 13ರಿಂದ 18ನೇ ಶತಮಾನದ ಅವಧಿಯಲ್ಲಿ ಅಹೋಂ ರಾಜರು ನಿರ್ಮಿಸಿದರು.

3 / 10

ಅಸ್ಸಾಂನ ಶಿವಸಾಗರ ಜಿಲ್ಲೆಯಲ್ಲಿರುವ ಈ ಮೊಯ್ದಾನ್​ ಅನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ಭಾರತ ಸರ್ಕಾರವು 15 ಏಪ್ರಿಲ್ 2014 ರಂದು ಯುನೆಸ್ಕೋಗೆ ಪ್ರಸ್ತಾವನೆಯನ್ನು ಕಳುಹಿಸಿತ್ತು.

4 / 10

ಮೊದಲು ತಾಂತ್ರಿಕ ಮಿಷನ್ ತಂಡ ಬಂದು ಈ ಪ್ರಸ್ತಾವನೆಯನ್ನು ಅನುಮೋದಿಸಿತು. ಅದರ ದಸ್ತಾವೇಜನ್ನು ಸಿದ್ಧಪಡಿಸಲಾಯಿತು. ಇದರ ನಂತರ, ಯುನೆಸ್ಕೋದಲ್ಲಿ ಕೆಲಸ ಮಾಡುವ ತಂಡವು ಸ್ಮಾರಕಕ್ಕೆ ಭೇಟಿ ನೀಡಿದೆ.

5 / 10

ಇದಕ್ಕೂ ಮೊದಲು, ಏಷ್ಯಾದ ಯಾವುದೇ ಸಮಾಧಿ ಸ್ಥಳವನ್ನು ವಿಶ್ವ ಪರಂಪರೆಯೆಂದು ಘೋಷಿಸಲಾಗಿಲ್ಲ. ಭಾರತ ಸರ್ಕಾರ ಇದನ್ನು ವಿಶ್ವ ಪರಂಪರೆಯೆಂದು ಘೋಷಿಸಲು ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದೆ.

6 / 10

ಅಸ್ಸಾಂನಲ್ಲಿರುವ ಈ ಮೈದಾನವನ್ನು ವಿಶ್ವ ಪರಂಪರೆಯ ತಾಣವಾಗಿ ಘೋಷಿಸಲು ಭಾರತ ಸರ್ಕಾರವು 15 ಏಪ್ರಿಲ್ 2014ರಂದು ಯುನೆಸ್ಕೋಗೆ ಪ್ರಸ್ತಾವನೆ ಕಳುಹಿಸಿತ್ತು. ಮೊಯ್ದಾಮ್ ಅನ್ನು 2014ರಲ್ಲಿ ಯುನೆಸ್ಕೋ ವಿಶ್ವಪರಂಪರೆಯ ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

7 / 10

1228ರಿಂದ 1826ರಲ್ಲಿ ಯಾಂಡಬಒ ಒಪ್ಪಂದದ ಮೂಲಕ ಬ್ರಿಟಿಷರು ಸ್ವಾಧೀನಪಡಿಸಿಕೊಳ್ಳುವವರೆಗೆ 600 ವರ್ಷಗಳ ಕಾಲ ಅಸ್ಸಾಂ ಅನ್ನು ಆಳಿದ ಅಹೋಂ ಮೊದಲ ರಾಜಧಾನಿ ಚರೈಡಿಯೋ ಆಗಿತ್ತು.

8 / 10

ಇದು ಭಾರತದ ಪಾಲಿಗೆ ಅದೃಷ್ಟದ ದಿನ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ವಿಶ್ವ ಪರಂಪರೆಯ ಸಭೆಯನ್ನು ಆಯೋಜಿಸಲಾಗುತ್ತಿದ್ದು, ಭಾರತವು ಅದರ ಅಧ್ಯಕ್ಷತೆ ವಹಿಸುತ್ತಿದೆ.

9 / 10

ವಿಶ್ವ ಪಾರಂಪರಿಕ ಸಮಿತಿಯು ಶುಕ್ರವಾರ ಚರೈಡಿಯೊ ಮೊಯಿದಮ್ ಅನ್ನು ಭಾರತದ 43 ನೇ ವಿಶ್ವ ಪರಂಪರೆಯ ತಾಣವಾಗಿ ಸೇರಿಸುವುದಾಗಿ ಘೋಷಿಸಿತು.

10 / 10

ಅಸ್ಸಾಂನ ರಾಜ ಮನೆತನಗಳ ಸಮಾಧಿ ಸ್ಥಳಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದು ಭಾರತದ ಪಾಲಿಗೆ ದೊಡ್ಡ ಸಾಧನೆಯಾಗಿದೆ ಎಂದು ಕೇಂದ್ರ ಹೇಳಿದೆ.

Published On - 2:57 pm, Fri, 26 July 24

Loading...
Unable to load recommendations.
Follow Us