Updated on: Jul 15, 2023 | 9:01 AM
ನಟಿ ಅವನೀತ್ ಕೌರ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಈಗಿನ್ನೂ 21 ವರ್ಷ. ರಿಯಾಲಿಟಿ ಶೋಗಳಲ್ಲಿ ಅವರು ಮಿಂಚಿದ್ದಾರೆ. ಸಿನಿಮಾದಲ್ಲಿ ನಟಿಸಿದ್ದಾರೆ.
ನವಾಜುದ್ದೀನ್ ಸಿದ್ಧಿಕಿ ನಟನೆಯ ‘ಟೀಕು ವೆಡ್ಸ್ ಶೇರು’ ಚಿತ್ರದಲ್ಲಿ ಅವನೀತ್ ನಟಿಸಿದ್ದರು. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆಯಿತು.
ಈ ಚಿತ್ರದಲ್ಲಿ ನವಾಜುದ್ದೀನ್ ಅವರಿಗೆ ಕಿಸ್ ಮಾಡಿ ಅವನೀತ್ ಕೌರ್ ಸುದ್ದಿ ಆಗಿದ್ದರು. ವಯಸ್ಸಿನ ಅಂತರ ಇಟ್ಟುಕೊಂಡು ಅನೇಕರು ಟೀಕೆ ಮಾಡಿದ್ದರು.
ಈಗ ಅವನೀತ್ ಅವರು ಬಿಕಿನಿ ಧರಿಸಿ ಮಿಂಚಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸ್ವಿಮ್ಮಿಂಗ್ಪೂಲ್ನಲ್ಲಿ ನಿಂತು ಅವನೀತ್ ಅವರು ಪೋಸ್ ಕೊಟ್ಟಿದ್ದಾರೆ. ಅವರ ಬೋಲ್ಡ್ನೆಸ್ಗೆ ಫ್ಯಾನ್ಸ್ ಬೋಲ್ಡ್ ಆಗಿದ್ದಾರೆ.
ಸದ್ಯ ‘ಲವ್ ಕಿ ಅರೇಂಜ್ ಮ್ಯಾರೇಜ್’ ಸಿನಿಮಾದಲ್ಲಿ ಅವನೀತ್ ಕೌರ್ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.
ಬೋಲ್ಡ್ ಲುಕ್ನಲ್ಲಿ ಮಿಂಚಿದ ಅವನೀತ್ ಕೌರ್