AB PMJAY: ಬಜೆಟ್ನಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಡಬಲ್ ಹಣ ಮುಡಿಪಿಡುವ ಸಾಧ್ಯತೆ
Budget 2024 Expectations: ಫೆಬ್ರುವರಿ 1ರಂದು ಮಂಡಿಲಾಗುವ ಕೇಂದ್ರ ಬಜೆಟ್ನಲ್ಲಿ ಹಲವು ನಿರೀಕ್ಷೆಗಳಿವೆ. ಕೆಲ ಯೋಜನೆಗಳಿಗೆ ಹೆಚ್ಚು ಒತ್ತುಕೊಡಬಹುದು. ಅದರಲ್ಲಿ ಇನ್ಷೂರೆನ್ಸ್ ವಲಯಕ್ಕೆ ಪುಷ್ಟಿ ಕೊಡುವುದೂ ಸೇರಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಸ್ಟೋರಿಯಲ್ಲಿದೆ.....
1 / 6
ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ ಅಡಿಯಲ್ಲಿ ಇರುವ ಫಲಾನುಭವಿಗಳ ಸಂಖ್ಯೆಯನ್ನು 100 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ.
2 / 6
ಸದ್ಯ ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆಯಲ್ಲಿ 12 ಕೋಟಿ ಕುಟುಂಬಗಳಿಗೆ ಮತ್ತು 55 ಕೋಟಿ ವ್ಯಕ್ತಿಗಳಿಗೆ ಇನ್ಷೂರೆನ್ಸ್ ಕವರೇಜ್ ನೀಡಲಾಗುತ್ತಿದೆ.
3 / 6
ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ನ ಕವರೇಜ್ ಅನ್ನು ದ್ವಿಗುಣಗೊಳಿಸಲು ಯೋಜಿಸಿದೆ. ಸದ್ಯ ವರ್ಷಕ್ಕೆ 5 ಲಕ್ಷ ರೂ ಇರುವ ಇದರ ಕವರೇಜ್ ಅನ್ನು 10 ಲಕ್ಷ ರೂಗೆ ಏರಿಸುವ ಸಾಧ್ಯತೆ ಇದೆ.
4 / 6
ಅಧಿಕ ವೆಚ್ಚ ಬೇಡುವ ಕ್ಯಾನ್ಸರ್ ಮತ್ತು ಟ್ರಾನ್ಸ್ಪ್ಲಾಂಟ್ ಮೊದಲಾದ ಗಂಭೀರ ಕಾಯಿಲೆಗಳನ್ನು ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯ ವ್ಯಾಪ್ತಿಗೆ ತರಬಹುದು.
5 / 6
ಆಯುಷ್ಮಾನ್ ಭಾರತ್ ಸ್ಕೀಮ್ನಲ್ಲಿ ನೊಂದಾಯಿಸಬೇಕಾದರೆ ಮೊದಲು ಆಯುಷ್ಮಾನ್ ಆ್ಯಪ್ ಮೂಲಕ ಆಯುಷ್ಮಾನ್ ಕಾರ್ಡ್ ಪಡೆಯಬೇಕು.
6 / 6
ಮಾಮೂಲಿಕ ಹೆಲ್ತ್ ಇನ್ಷೂರೆನ್ಸ್ ಕಂಪನಿಗಳ ರೀತಿಯಲ್ಲಿಯೇ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಕಾರ್ಡ್ ಕೂಡ ಕೆಲಸ ಮಾಡುತ್ತದೆ. ಪಟ್ಟಿ ಮಾಡಲಾಗಿರುವ ಆಸ್ಪತ್ರೆಗಳಲ್ಲಿ ಕ್ಯಾಷ್ಲೆಸ್ ಆಗಿ ವೈದ್ಯಕೀಯ ಸೇವೆ ಪಡೆಯಬಹುದು. 1,900 ಮೆಡಿಕಲ್ ಪ್ರೊಸೀಜರ್ಗಳು ಈ ಸ್ಕೀಮ್ನಲ್ಲಿ ಒಳಗೊಳ್ಳುತ್ತವೆ.