Bangalore-Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದರ ಪಟ್ಟಿ ಬಿಡುಗಡೆ

|

Updated on: Feb 27, 2023 | 5:27 PM

ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ವೇ (ಎನ್ ಹೆಚ್ 275)ಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2022ರ ಫೆಬ್ರವರಿ 28 ರ ಬೆಳಗಿನ 8 ಗಂಟೆಯಿಂದ ಟೋಲ್ ಶುಲ್ಕ ವಸೂಲಿ ಪ್ರಾರಂಭಿಸುತ್ತಿದ್ದು, ವಿವಿಧ ವಾಹನಗಳ ಮಾದರಿಗಳಿಗೆ ಅನ್ವಯಿಸುವಂತೆ ರೂ.135 ರಿಂದ ರೂ. 880 ಶುಲ್ಕವನ್ನು ನಿಗದಿಪಡಿಸಿದೆ.

1 / 7
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ನಿರ್ಮಾಣ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು,  ಒಟ್ಟು 117 ಕಿ.ಮೀ​ ಉದ್ದದ ಹೆದ್ದಾರಿದಲ್ಲಿ ಮೊದಲ ಹಂತದ 56 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ಮಾರ್ಚ್ 11ರಂದು ಹೊಸ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೂ ಮುನ್ನ ಮೊದಲ ಹಂತದ ಹೆದ್ದಾರಿದಲ್ಲಿ ಟೋಲ್ ಆರಂಭವಾಗುತ್ತಿದ್ದು, ಎಕ್ಸ್ ಪ್ರೆಸ್ ನಿರ್ಮಾಣಕ್ಕಾಗಿ ಒಟ್ಟು  8,172 ರೂ. ಕೋಟಿ ಖರ್ಚು ಮಾಡಲಾಗಿದೆ.

2 / 7
ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ

ಬೆಂಗಳೂರು ಮೈಸೂರು ಎಕ್ಸ್​​ಪ್ರೆಸ್​​ ವೇ

3 / 7
ಮಿನಿ ಬಸ್/ ಸಣ್ಣ ವಾಣಿಜ್ಯ ವಾಹನಗಳಿಗೆ 200 ರೂ. ಏಕಮುಖ ಸಂಚಾರಕ್ಕಾಗಿ ಶುಲ್ಕ ನಿಗದಿಯಾಗಿದ್ದು, 24 ಗಂಟೆಯೊಳಗೆ ರೀಟರ್ನ್ ಬರುವುದಾದರೆ 330 ರೂ. ಶುಲ್ಕ ಪಾವತಿಸಬೇಕು. ಇದರೊಂದಿಗೆ ತಿಂಗಳಪೂರ್ತಿಯಾಗಿ ಪ್ರಯಾಣಿಸುವ ಅವಶ್ಯವಿದ್ದಲ್ಲಿ  7,315 ರೂ. ಪಾವತಿಸಿ ತಿಂಗಳ ಪಾಸ್ ಖರೀದಿಸಬಹುದಾಗಿದ್ದು, ಇದರಲ್ಲಿ ಸ್ಥಳೀಯ ವಾಹನಗಳಿಗೆ 110 ರೂ. ನಿಗದಿ ಮಾಡಲಾಗಿದೆ.

4 / 7
ಟ್ರಕ್ ಅಥವಾ ಬಸ್ ಗಳಿಗೆ 460 ರೂ. ಏಕಮುಖ ಸಂಚಾರಕ್ಕಾಗಿ ಶುಲ್ಕ ನಿಗದಿಯಾಗಿದ್ದು, 24 ಗಂಟೆಯೊಳಗೆ ರೀಟರ್ನ್ ಬರುವುದಾದರೆ 690 ರೂ. ಶುಲ್ಕ ಪಾವತಿಸಬೇಕು. ಇದರೊಂದಿಗೆ ತಿಂಗಳಪೂರ್ತಿಯಾಗಿ ಪ್ರಯಾಣಿಸುವ ಅವಶ್ಯವಿದ್ದಲ್ಲಿ  15,325 ರೂ. ಪಾವತಿಸಿ ತಿಂಗಳ ಪಾಸ್ ಖರೀದಿಸಬಹುದಾಗಿದ್ದು, ಇದರಲ್ಲಿ ಸ್ಥಳೀಯ ವಾಹನಗಳಿಗೆ 230 ರೂ.  ನಿಗದಿ ಮಾಡಲಾಗಿದೆ.

5 / 7
Bangalore-Mysore Expressway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ದರ ಪಟ್ಟಿ ಬಿಡುಗಡೆ

6 / 7
4 ರಿಂದ 6 ಆಕ್ಸೆಲ್ ಹೊಂದಿರುವ ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ 720 ರೂ. ಏಕಮುಖ ಸಂಚಾರಕ್ಕಾಗಿ ಶುಲ್ಕ ನಿಗದಿಯಾಗಿದ್ದು, 24 ಗಂಟೆಯೊಳಗೆ ರೀಟರ್ನ್ ಬರುವುದಾದರೆ 1,080 ರೂ. ಶುಲ್ಕ ಪಾವತಿಸಬೇಕು. ಇದರೊಂದಿಗೆ ತಿಂಗಳಪೂರ್ತಿಯಾಗಿ ಪ್ರಯಾಣಿಸುವ ಅವಶ್ಯವಿದ್ದಲ್ಲಿ  24,030 ರೂ. ಪಾವತಿಸಿ ತಿಂಗಳ ಪಾಸ್ ಖರೀದಿಸಬಹುದಾಗಿದ್ದು, ಇದರಲ್ಲಿ ಸ್ಥಳೀಯ ವಾಹನಗಳಿಗೆ 360 ರೂ. ನಿಗದಿ ಮಾಡಲಾಗಿದೆ.

7 / 7
7ಕ್ಕಿಂತ ಹೆಚ್ಚು ಆಕ್ಸೆಲ್ ಹೊಂದಿರುವ ವಾಣಿಜ್ಯ ವಾಹನಗಳು ಮತ್ತು ಯಂತ್ರ ಸಾಗಾಣಿಕೆ ವಾಹನಗಳಿಗೆ 880 ರೂ. ಏಕಮುಖ ಸಂಚಾರಕ್ಕಾಗಿ ಶುಲ್ಕ ನಿಗದಿಯಾಗಿದ್ದು, 24 ಗಂಟೆಯೊಳಗೆ ರೀಟರ್ನ್ ಬರುವುದಾದರೆ 1,315 ರೂ. ಶುಲ್ಕ ಪಾವತಿಸಬೇಕು. ಇದರೊಂದಿಗೆ ತಿಂಗಳಪೂರ್ತಿಯಾಗಿ ಪ್ರಯಾಣಿಸುವ ಅವಶ್ಯವಿದ್ದಲ್ಲಿ  29,255 ರೂ. ಪಾವತಿಸಿ ತಿಂಗಳ ಪಾಸ್ ಖರೀದಿಸಬಹುದಾಗಿದ್ದು, ಇದರಲ್ಲಿ ಸ್ಥಳೀಯ ವಾಹನಗಳಿಗೆ 440 ರೂ.  ನಿಗದಿ ಮಾಡಲಾಗಿದೆ.

Published On - 5:23 pm, Mon, 27 February 23