
ವಾರ್ಷಿಕ ಬೀಟಿಂಗ್ ದಿ ರಿಟ್ರೀಟ್ ಸಮಾರಂಭವು ಶನಿವಾರ ಮುಗಿದ ನಂತರ ರಾಷ್ಟ್ರ ರಾಜ್ಯಧಾನಿಯ ವಿಜಯ್ ಚೌಕನಲ್ಲಿ ಆಕಾಶದಲ್ಲಿ ಸಾವಿರಾರು ಡ್ರೋನ್ಗಳು ನಕ್ಷತ್ರಿಕ ಪ್ರದರ್ಶನವನ್ನು ಪ್ರದರ್ಶಿಸಲಾಯಿತು.

ನೂರಾರು ಡ್ರೋನ್ಗಳು ಒಟ್ಟಿಗೆ ಹಾರಿ ಆಕಾಶದಲ್ಲಿ ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣವನ್ನು ಮಿನುಗುವ ಮೂಲಕ ರಾಷ್ಟ್ರ ರಾಜಧಾನಿಯ ಮೇಲೆ ಚಿತ್ತಾರ ಮೂಡಿಸಿದವು.

ಮಹಾತ್ಮಾ ಗಾಂಧೀಜಿಯವರು ಕೋಲು ಹಿಡಿಕೊಂಡು ಭೂಮಾತೆಗೆ ಕಾಲಿಡುವುದರಿಂದ ಹಿಡಿದು ಭಾರತದ ಭೂಪಟದವರೆಗೆ ಸಿಂಹದವರೆಗೆ ಡ್ರೋನ್ಗಳು ವಿವಿಧ ರಚನೆಗಳನ್ನು ಪ್ರಸ್ತುಪಡಿಸಿದವು.

ಸ್ವದೇಶಿ ತಂತ್ರಜ್ಞನದ ಮೂಲಕ ನಿರ್ಮಿಸಲಾದ ಡ್ರೋನ್ಗಳ ಪದ್ರರ್ಶನವು ಸಮಾರಂಭದಲ್ಲಿ ಇದೇ ಮೊದಲನೆಯದು.

ಸಮಾರಂಭಕ್ಕೆ ನೆರೆದಿದ್ದ ಜನರು ಆಕಾಶದ ಮೇಲೆ ಹಾಗೂ ಉತ್ತರ ಮತ್ತು ದಕ್ಷಿಣದ ಗೋಡೆಗಳ ಮೇಲೆ ತಮ್ಮ ಕಣ್ಣುಗಳನ್ನು ನೆಟ್ಟಿದ್ದರು. ಪ್ರೊಜೆಕ್ಷನ್ ಮ್ಯಾಪಿಂಗ್ ಅಥವಾ ಲೇಸರ್ ಶೋ ದೇಶದ 75ನೇ ವರ್ಷಗಳ ಸ್ವಾತಂತ್ರ್ಯದ ಸ್ಮರಣಾರ್ಥವಾಗಿ ಚಿತ್ರಿಸಲಾಗಿತ್ತು.

ಸಿಂಕ್ರೊನೈಸ್ ಮಾಡಿದ ಹಿನ್ನೆಲೆ ಸಂಗೀತದೊಂದಿಗೆ ವರ್ಣರಂಜಿತ ಪ್ರದರ್ಶನವು ಸುಮಾರು 30ನಿಮಿಷಗಳ ಕಾಲ ನಡೆದಿದ್ದು, ಲೇಸರ್ ಶೋ ನಂತರ ಆಕಾಶವು ಮಿನುಗುವ ಡ್ರೋನ್ಗಳಿಂದ ಬೆರಗುಗೊಳಿಸಿತು.

ರಾಷ್ಟ್ರಪತಿ ಮತ್ತು ಸಶಸ್ತ್ರ ಪಡೆಗಳ ಸರ್ವೋಚ್ಛ ಕಮಾಂಡರ್ ರಾಮ್ನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಮಾರ್ಷಲ್ ವಿಆರ್ ಚೌಧರಿ ಮತ್ತು ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.