ಯಾದಗಿರಿಯ ಗ್ರಾಮೀಣ ಕ್ರೀಡೆ: ಎತ್ತುಗಳು ಕಲ್ಲು ಎಳೆಯುವ ಸ್ಪರ್ಧೆ; ಫೋಟೋಸ್​ ನೋಡಿ

| Updated By: ವಿವೇಕ ಬಿರಾದಾರ

Updated on: Nov 25, 2024 | 2:07 PM

ಆಧುನಿಕ ಜಗತ್ತಿನಲ್ಲಿ ಹಳೇ ಸಂಪ್ರದಾಯಗಳು ಮರೆಮಾಚಿ ಹೋಗುತ್ತಿವೆ. ಹಳೇ ಕ್ರೀಡೆಗಳು ಮಾಯವಾಗಿ ಹೊಸ ಜಮಾನ ಶುರುವಾಗಿದೆ. ಆದರೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದಲ್ಲಿ ಎತ್ತುಗಳ ಶಕ್ತಿ ಪ್ರದರ್ಶನಕ್ಕಾಗಿ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ.

1 / 8
ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜಮಾಲೋದ್ದೀನ್ ದರ್ಗಾದ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮೀಣ ಸೊಗಡಿನ ಕಲ್ಲು ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಂಗ್ರಣಿ ಕಲ್ಲನ್ನು ಫೈಲ್ವಾನರ ಮೂಲಕ ಎತ್ತುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗುತ್ತೆ. ಆದರೆ, ಈ ಜಾತ್ರೆಯಲ್ಲಿ ಮಾತ್ರ ಭಾರವಾದ ಕಲ್ಲನ್ನಯ ಎತ್ತುಗಳ ಮೂಲಕ ಎಳೆಯುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.

2 / 8
ಇದೇ ಕಾರಣಕ್ಕೆ ಯಾದಗಿರಿ ಜಿಲ್ಲೆ ಸೇರಿದಂತೆ ಪಕ್ಕದ ರಾಯಚೂರು, ವಿಜಯಪುರ, ಬಾಗಲಕೋಟ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಬಂದಿದ್ದ ಎತ್ತುಗಳನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಸುಮಾರು ನೂರು ಮೀಟರ್​ನ ಮೈದಾನವನ್ನು ತಯಾರಿ ಮಾಡಲಾಗಿತ್ತು. ಸುಮಾರು ಒಂದುವರೆ ಟನ್ ಕಲ್ಲನ್ನು ತಯಾರು ಮಾಡಲಾಗಿತ್ತು. ಜೋಡಿಎತ್ತು ಮೈದಾನಕ್ಕೆ ಇಳಿಸಲಾಗಿ ಬಳಿಕ ಕಲ್ಲನ್ನು ಕಟ್ಟಲಾಗುತ್ತೆ.

3 / 8
ನಂತರ, ಎತ್ತುಗಳು ಭಾರವಾದ ಕಲ್ಲನ್ನ ಎಳೆಯುತ್ತವೆ. ಎತ್ತುಗಳು ಕಲ್ಲನ್ನು ಎಳೆಯುವಾಗ ನೆರೆದ ಸಾವಿರಾರು ಜನ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಎತ್ತುಗಳನ್ನ ಹುರಿದುಂಬಿಸುತ್ತಾರೆ. ನೂರು ಮೀಟರ್​ ಮೈದಾನದಲ್ಲಿ ಯಾವ ಜೋಡಿಎತ್ತು ಎಷ್ಟು ರೌಂಡ್ಸ್ ಹಾಕುತ್ತೆ ಅಂತೆ ಕೌಂಟ್ ಮಾಡಲಾಗುತ್ತೆ. ಯಾವ ಎತ್ತಿನ ಜೋಡಿ ಅತಿ ಹೆಚ್ಚು ರೌಂಡ್ಸ್ ಹಾಕುತ್ತೆ ಅದು ವಿಜಯಶಾಲಿ ಎಂದು ಘೋಷಣೆ ಮಾಡಲಾಗುತ್ತೆ.

4 / 8
ಕೇವಲ ಮೊದಲ ಬಹುಮಾನ ಮಾತ್ರ ಅಲ್ಲದೆ ನಾಲ್ಕನೇ ಸ್ಥಾನಕ್ಕೆ ಬರುವ ಎತ್ತುಗಳಿಗೂ ಸಹ ಬಹುಮಾನ ನೀಡಲಾಗುತ್ತೆ. ಸಾಮಾನ್ಯವಾಗಿ ಎತ್ತುಗಳು ಅಂದರೆ ಕೃಷಿ ಕಾರ್ಯಕ್ಕೆ ಬಳಕೆ ಮಾಡಲಾಗುತ್ತೆ. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತುಗಳನ್ನು ಯಾವ ಕೆಲಸಕ್ಕೂ ಬಳಸುವುದಿಲ್ಲ.

5 / 8
ಎತ್ತುಗಳನ್ನು ಮಾಲೀಕರು ಮಕ್ಕಳ ತರಹ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಫೈಲ್ವಾನರಾಗಿ ಮಾಡಲು ಪೋಷಕರು ಪಡುವ ಶ್ರಮದ ರೀತಿ ಈ ಎತ್ತುಗಳನ್ನ ಬೆಳೆಸುತ್ತಾರೆ. ಪ್ರತಿ ತಿಂಗಳು ಏನಿಲ್ಲ ಅಂದರೆ, 30 ರಿಂದ 40 ಸಾವಿರ ರೂ. ಎತ್ತುಗಳಿಗಾಗಿ ಖರ್ಚು ಮಾಡುತ್ತಾರೆ. ಅದರಲ್ಲೂ, ನಿತ್ಯ ಫೈಲ್ವಾನರರು ಯಾವ ರೀತಿ ಮೊಟ್ಟೆ ತಿನ್ನುತ್ತಾರೆ ಅದೆರೀತಿ ನಿತ್ಯ ಎತ್ತುಗಳಿಗೆ ಮೊಟ್ಟೆ ನೀಡಲಾಗುತ್ತೆ.

6 / 8
ಈ ಎತ್ತುಗಳು ಸಾಮಾನ್ಯ ಕೃಷಿ ಕಾಯಕ ಮಾಡುವ ಎತ್ತುಗಳಿಗಿಂತ ಮೂರ್ನಾಲ್ಕು ಪಟ್ಟು ಶಕ್ತಿ ಶಾಲಿಯಾಗಿರುತ್ತವೆ. ಎರಿ ಮಣ್ಣಿನ ಭೂಮಿಯಲ್ಲಿ 15 ಕ್ವಿಂಟಲ್​ನ ಕಲ್ಲು ಎಳೆಯಬೇಕು ಅಂದರೆ ಸಾಮಾನ್ಯ ಮಾತಲ್ಲ. ಶಕ್ತಿ ಶಾಲಿ ಎತ್ತುಗಳು ಇದ್ದರೆ ಮಾತ್ರ ಸಾಧ್ಯ.

7 / 8
ಸಾಮಾನ್ಯವಾಗಿ ಎತ್ತುಗಳು 1 ರಿಂದ 2 ಲಕ್ಷ ರೂ. ಕೊಟ್ಟರೆ ಜೋಡಿಎತ್ತು ಸಿಗುತ್ತವೆ. ಆದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸುವ ಎತ್ತಗಳನ್ನು ಸುಮಾರು 7 ರಿಂದ 8 ಲಕ್ಷ ರೂ.ಗೆ ಮಾರಾಟವಾಗುತ್ತವೆ.

8 / 8
ಹಳೆ ಕಾಲದ ಸ್ಪರ್ಧೆಗಳು ನಶಿಸಿ ಹೋಗುತ್ತಿವೆ. ಗ್ರಾಮೀಣ ಕ್ರೀಡೆಗಳು ಮರೆಮಾಚುತ್ತಿವೆ. ಆದರೆ, ಗ್ರಾಮೀಣ ಭಾಗದ ಜನ ಇಂತಹ ಸ್ಪರ್ಧೆಗಳನ್ನು ಆಯೋಜನೆ ಮಾಡುವ ಮೂಲಕ ಹಳೆ ಕಾಲದ ಕಲೆ ಹಾಗೂ ಕ್ರೀಡೆಯನ್ನು ಉಳಿಸುತ್ತಿದ್ದಾರೆ.

Published On - 2:06 pm, Mon, 25 November 24