ಸೌತೆಕಾಯಿಯಲ್ಲಿ ಕಡಿಮೆ ಕ್ಯಾಲರಿ ಮತ್ತು ಹೀರಿಕೊಳ್ಳುವ ನಾರಿನಾಂಶ ಹೆಚ್ಚಿರುತ್ತದೆ. ಇದರಿಂದ ತೂಕ ಇಳಿಸುವವರು ಸೌತೆಯನ್ನು ಹೆಚ್ಚು ಸೇವಿಸಿ.
ಸೌತೆಕಾಯಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆ ಆಗದಂತೆ ಸೌತೆಕಾಯಿ ತಡೆಯುತ್ತದೆ.
ಸೌತೆಕಾಯಿ ಸಲಾಡ್ನ ಪ್ರತಿನಿತ್ಯ ಸೇವಿಸಿ. ಪ್ರತಿದಿನ ಸೌತೆಕಾಯಿ ಸೇವಿಸಿದರೆ ಕರುಳಿನ ಕ್ರಿಯೆ ಸರಾಗವಾಗಿ ಆಗುತ್ತದೆ.
ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟರೆ ಕಣ್ಣಿನ ಉರಿ ಕಡಿಮೆ ಆಗುತ್ತದೆ. ಹೀಗಾಗಿ ಬ್ಯೂಟಿ ಪಾರ್ಲರ್ಗಳಲ್ಲಿ ಸೌತೆಕಾಯಿ ಹೆಚ್ಚಾಗಿ ಬಳಸುತ್ತಾರೆ.
ಜೀರ್ಣಕ್ರಿಯೆ ಸರಿಯಾಗಲು ಸೌತೆಕಾಯಿ ಸೇವಿಸಿ. ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿ ಸೌತೆಕಾಯಿ ತಿನ್ನಿ.
Published On - 12:46 pm, Sun, 6 March 22