ಕಲ್ಲು ಸಕ್ಕರೆ ಸೇವನೆಯಿಂದ ಪಡೆಯಿರಿ ಆರೋಗ್ಯ ಪ್ರಯೋಜನಗಳು
TV9 Web | Updated By: sandhya thejappa
Updated on:
Mar 15, 2022 | 8:50 AM
Rock Sugar: ಕಲ್ಲು ಸಕ್ಕರೆ ನೋಡುವುದಕ್ಕೆ ಕಲ್ಲಿನಂತಿದ್ದರೂ ಇದರ ಸೇವನೆಯಿಂದ ಹೆಚ್ಚು ಆರೋಗ್ಯ ಪ್ರಯೋಜನಗಳನ್ನ ಪಡೆದುಕೊಳ್ಳಬಹುದು. ಕೆಲ ಸಮಾನ್ಯ ಆರೋಗ್ಯ ಸಮಸ್ಯೆಗಳಿಗೆ ಕಲ್ಲು ಸಕ್ಕರೆ ರಾಮಬಾಣವಿದ್ದಂತೆ.
1 / 5
ಹವಾಮಾನ ಬದಲಾವಣೆಯಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಶೀತ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಶೀತ, ಕೆಮ್ಮು ನಿವಾರಣೆಗೆ ಕಲ್ಲು ಸಕ್ಕರೆ ಸೇವಿಸಿ.
2 / 5
ಮೂಗಿನ ರಕ್ತಸ್ರಾವವನ್ನು ತಕ್ಷಣವೇ ನಿಲ್ಲಿಸಲು ಕಲ್ಲು ಸಕ್ಕರೆ ಸಹಾಯ ಮಾಡುತ್ತದೆ. ನಿಮಗೆ ಮೂಗಿನಿಂದ ರಕ್ತಸ್ರಾವವಾಗುತ್ತಿದ್ದರೆ, ಕಲ್ಲು ಸಕ್ಕರೆ ತುಂಡುಗಳನ್ನು ನೀರಿನೊಂದಿಗೆ ಸೇವಿಸಿ.
3 / 5
ಸೇವಿಸಿದ ಆಹಾರ ಜೀರ್ಣವಾಗದಿದ್ದರೆ ಅಜೀರ್ಣ ಉಂಟಾಗಿ, ಮಲಬದ್ಧತೆ ಸಮಸ್ಯೆ ಎದುರಾಗಬಹುದು. ಉತ್ತಮ ಜೀರ್ಣಕ್ರಿಯೆಗೆ ಕಲ್ಲು ಸಕ್ಕರೆ ಸೇವಿಸಿ.
4 / 5
ಕಲ್ಲು ಸಕ್ಕರೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಋತುಚಕ್ರದ ವೇಳೆ ಕಿರಿ ಕಿರಿ ಅನುಭವಿಸುವ ಮಹಿಳೆಯರು ಕಲ್ಲು ಸಕ್ಕರೆ ಸೇವಿಸಿ.
5 / 5
ದೇಹ ಆಯಾಸಗೊಂಡರೆ ಯಾವುದಕ್ಕೂ ಮನಸ್ಸು ಇರಲ್ಲ. ಹೀಗಾಗಿ ಕಲ್ಲು ಸಕ್ಕರೆ ಸೇವಿಸಿ. ಕಲ್ಲು ಸಕ್ಕರೆ ಸೇವಿಸಿದರೆ ಮನಸಿಗ್ಗೆ ನೆಮ್ಮದಿ ಅನಿಸುತ್ತದೆ.