ದಸರಾ 2026: ಗಾಂಧಿ ಬಜಾರ್‌ನಲ್ಲಿ ಕಣ್ಣುಕೋರೈಸುತ್ತಿವೆ ಬಣ್ಣಬಣ್ಣದ ಗೊಂಬೆಗಳು!

Edited By:

Updated on: Oct 09, 2026 | 8:41 AM

ದಸರಾ ಮತ್ತು ನವರಾತ್ರಿ ಸಂಭ್ರಮಕ್ಕೆ ಬೆಂಗಳೂರು ಸಜ್ಜಾಗಿದ್ದು, ಗಾಂಧಿ ಬಜಾರ್ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಬಣ್ಣಬಣ್ಣದ ಸಾಂಪ್ರದಾಯಿಕ ಗೊಂಬೆಗಳು ಎಂಟ್ರಿ ಕೊಟ್ಟಿವೆ. ಸಣ್ಣದರಿಂದ ಹಿಡಿದು ದೊಡ್ಡ ಗಾತ್ರದ ಗೊಂಬೆಗಳ ಸಂಗ್ರಹ ಲಭ್ಯವಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ. ಬಣ್ಣ ಬಣ್ಣದ ಗೊಂಬೆಗಳ ಸೊಬಗು ನೋಡಿ.

1 / 6
ನಾಡಹಬ್ಬ ದಸರಾ ಮತ್ತು ನವರಾತ್ರಿ ಆಚರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ ಹಾಗೂ ಸಿದ್ಧತೆಗಳು ಕಳೆಗಟ್ಟಿವೆ. ನವರಾತ್ರಿಯ ಒಂಬತ್ತು ದಿನಗಳನ್ನು ಅತ್ಯಂತ ವಿಶೇಷವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಸಾರ್ವಜನಿಕರು ಹಾಗೂ ಭಕ್ತಾದಿಗಳು ಈಗಾಗಲೇ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ನಾಡಹಬ್ಬ ದಸರಾ ಮತ್ತು ನವರಾತ್ರಿ ಆಚರಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ಹಬ್ಬದ ಸಂಭ್ರಮ ಹಾಗೂ ಸಿದ್ಧತೆಗಳು ಕಳೆಗಟ್ಟಿವೆ. ನವರಾತ್ರಿಯ ಒಂಬತ್ತು ದಿನಗಳನ್ನು ಅತ್ಯಂತ ವಿಶೇಷವಾಗಿ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಸಾರ್ವಜನಿಕರು ಹಾಗೂ ಭಕ್ತಾದಿಗಳು ಈಗಾಗಲೇ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

2 / 6

ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಗೊಂಬೆಗಳು ವಿಭಿನ್ನ ಬೆಲೆಗಳಲ್ಲಿ ಲಭ್ಯವಿದ್ದು, ಗ್ರಾಹಕರು ತಮ್ಮ ಬಜೆಟ್‌ಗೆ ತಕ್ಕಂತೆ ಖರೀದಿ ಮಾಡುತ್ತಿದ್ದಾರೆ. ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಹಕರಾದ ಅನಿತಾ ಮತ್ತು ಜಯಶ್ರೀ ಅವರು, ಪ್ರಸಕ್ತ ಸಾಲಿನಲ್ಲಿ ಲಭ್ಯವಿರುವ ವಿಭಿನ್ನ ಮಾದರಿಯ ಗೊಂಬೆಗಳ ಸಂಗ್ರಹ ಮತ್ತು ಹಬ್ಬದ ವಾತಾವರಣದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

3 / 6

ನವರಾತ್ರಿ ಗೊಂಬೆ ಅಲಂಕಾರದಲ್ಲಿ ಕೇವಲ ದೇವತೆಗಳ ಮೂರ್ತಿಗಳು ಮಾತ್ರವಲ್ಲದೆ, ಸಾಧು-ಸಂತರು, ರಾಷ್ಟ್ರಪುರುಷರು, ಸಾಮಾನ್ಯ ಮನುಷ್ಯರ ದಿನನಿತ್ಯದ ಜೀವನಶೈಲಿ, ಹಳ್ಳಿಯ ನೈಜ ಬದುಕು, ಕೃಷಿ ಪದ್ಧತಿ, ವ್ಯಾಪಾರ, ಕ್ರೀಡೆ, ವಿವಿಧ ಉದ್ಯೋಗಗಳ ಚಿತ್ರಣ ಹಾಗೂ ಪಶು-ಪಕ್ಷಿಗಳ ಪ್ರತಿಕೃತಿಗಳಿಗೂ ಸ್ಥಾನ ನೀಡಲಾಗುತ್ತದೆ. ಇದು ಭಾರತೀಯ ಸಂಸ್ಕೃತಿಯ ಜೀವನ ವೈವಿಧ್ಯತೆಯನ್ನು ಸಂಪೂರ್ಣವಾಗಿ ಬಿಂಬಿಸುತ್ತದೆ.

4 / 6

ನವರಾತ್ರಿಯಲ್ಲಿ ಗೊಂಬೆಗಳನ್ನು ಜೋಡಿಸುವ ಪದ್ಧತಿಯು ಕೇವಲ ಒಂದು ಆಚರಣೆಯಷ್ಟೇ ಅಲ್ಲದೆ, ಪ್ರಕೃತಿ ಮತ್ತು ಮಾನವ ಜೀವನದ ಮಹತ್ವದ ಸಂದೇಶವನ್ನು ನೀಡುತ್ತದೆ. ಸೃಷ್ಟಿಯಲ್ಲಿ ದೇವರ ಸ್ಥಾನದಿಂದ ಹಿಡಿದು ಸಣ್ಣ ಜೀವಿಗಳವರೆಗೆ ಪ್ರತಿಯೊಂದಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ, ಯಾವುದನ್ನೂ ತುಚ್ಛವಾಗಿ ನೋಡಬಾರದು ಮತ್ತು ಸಕಲವೂ ದೈವಿಕ ಅಂಶವೇ ಎಂಬ ಉದಾತ್ತ ಚಿಂತನೆಯನ್ನು ಇದು ಸಾರುತ್ತದೆ.

5 / 6

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಚ್ಚಾವಸ್ತುಗಳ ವೆಚ್ಚ ಹೆಚ್ಚಾಗಿರುವುದರಿಂದ ಗೊಂಬೆಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ ಎಂದು ವ್ಯಾಪಾರಿ ಸುಮಲತಾ ತಿಳಿಸಿದ್ದಾರೆ. ಗ್ರಾಹಕರು ಡಿಜಿಟಲ್ ಇ-ಕಾಮರ್ಸ್ ಅಥವಾ ಆನ್‌ಲೈನ್ ವೇದಿಕೆಗಳ ಮೊರೆಹೋಗದೆ, ಸ್ಥಳೀಯ ಮಾರುಕಟ್ಟೆ ಹಾಗೂ ಅಂಗಡಿಗಳಿಗೆ ಖುದ್ದಾಗಿ ಭೇಟಿ ನೀಡಿ ಖರೀದಿ ಮಾಡುವ ಮೂಲಕ ಸಣ್ಣ ವ್ಯಾಪಾರಿಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದ್ದಾರೆ.

6 / 6

ನವರಾತ್ರಿಯ ಪ್ರಮುಖ ಆಕರ್ಷಣೆಯಾದ 'ಗೊಂಬೆ ಕೂರಿಸುವ' ಸಂಪ್ರದಾಯಕ್ಕಾಗಿ ಗಾಂಧಿ ಬಜಾರ್ ಸೇರಿದಂತೆ ಬೆಂಗಳೂರಿನ ವಿವಿಧ ಪ್ರಮುಖ ಮಾರುಕಟ್ಟೆಗಳಿಗೆ ಬಣ್ಣಬಣ್ಣದ ಹಾಗೂ ಚಿತ್ತಾಕರ್ಷಕ ಗೊಂಬೆಗಳು ಲಗ್ಗೆಯಿಟ್ಟಿವೆ. ಸಣ್ಣ ಗಾತ್ರದಿಂದ ಹಿಡಿದು ಬೃಹತ್ ಗಾತ್ರದವರೆಗಿನ ವಿಭಿನ್ನ ವಿನ್ಯಾಸದ ಗೊಂಬೆಗಳು ಗ್ರಾಹಕರನ್ನು ವಿಶೇಷವಾಗಿ ಆಕರ್ಷಿಸುತ್ತಿದ್ದು, ವ್ಯಾಪಾರ ವಹಿವಾಟು ಭರದಿಂದ ಸಾಗಿದೆ.

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us