Bengaluru Lakes: ಬೆಂಗಳೂರಿನ ಈ ಪ್ರಸಿದ್ಧ ಕೆರೆಗಳಿಗೆ ಭೇಟಿ ನೀಡಿ, ನಿಮ್ಮ ಸಂಜೆಯನ್ನು ಮುದವಾಗಿಸಿ
TV9 Web | Updated By: ಆಯೇಷಾ ಬಾನು
Updated on:
Feb 01, 2023 | 12:42 PM
ಸಾಮಾನ್ಯವಾಗಿ ಈಗ ಜನರು ಯೋಗ, ಜಾಗಿಂಗ್, ವಾಕಿಂಗ್ ಸೇರಿದಂತೆ ವ್ಯಾಯಾಮ ಮಾಡಲು ಹಾಗೂ ಮನಸ್ಸಿಗೆ ನೆಮ್ಮದಿಬೇಕೆಂದು ಇಂತಹ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬನ್ನಿ ಬೆಂಗಳೂರಿನ ಕರೆಗಳ ವಿವರ ಇಲ್ಲಿದೆ. ಹೆಚ್ಚಿನ ಮಾಹಿತಿಗೆ https://karnatakatourism.org/lakes-in-bangalore/ ಭೇಟಿ ನೀಡಿ.
1 / 7
ಅದೆಷ್ಟೂ ವರ್ಷಗಳ ಹಿಂದೆ ಕೆರೆಗಳ ನಗರವಾಗಿದ್ದ ಬೆಂಗಳೂರಿನಲ್ಲೀಗ ಬೆರಳೆಣಿಕೆಷ್ಟು ಕೆರೆಗಳು ಮಾತ್ರ ಕಾಣ ಸಿಗುತ್ತವೆ. ಅದರಲ್ಲೂ ಆ ಕೆರೆಗಳು ಕೂಡ ಸರಿಯಾದ ನಿರ್ವಹಣೆಯಿಂದ ವಂಚಿತವಾಗಿವೆ. 1985 ರ ಸಮಯದಲ್ಲಿ 51 ಕೆರೆಗಳನ್ನು ಹೊಂದಿದ್ದ ಬೆಂಗಳೂರು ಪ್ರಸ್ತುತ ಕೇವಲ 15ರಿಂದ 17 ಕೆರೆಗಳನ್ನು ಮಾತ್ರ ಹೊಂದಿದೆ. ಸಾಮಾನ್ಯವಾಗಿ ಈಗ ಜನರು ಯೋಗ, ಜಾಗಿಂಗ್, ವಾಕಿಂಗ್ ಸೇರಿದಂತೆ ವ್ಯಾಯಾಮ ಮಾಡಲು ಹಾಗೂ ಮನಸ್ಸಿಗೆ ನೆಮ್ಮದಿಬೇಕೆಂದು ಇಂತಹ ಪ್ರಶಾಂತ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬನ್ನಿ ಬೆಂಗಳೂರಿನ ಕರೆಗಳ ವಿವರ ಇಲ್ಲಿದೆ. ಹೆಚ್ಚಿನ ಮಾಹಿತಿಗೆ https://karnatakatourism.org/lakes-in-bangalore/ ಭೇಟಿ ನೀಡಿ.
2 / 7
ಹಲಸೂರು ಕೆರೆ: ಈ ಕೆರೆಯು ನಗರದ ಕೇಂದ್ರ ಭಾಗದಲ್ಲಿದೆ. ಪ್ರಕೃತಿ ಪ್ರಿಯರು, ಪಕ್ಷಿ ವೀಕ್ಷಕರು, ಛಾಯಾಗ್ರಾಹಕರು, ಫಿಟ್ ನೆಸ್ ಬಗ್ಗೆ ಗಮನ ಕೊಡುವವರು ಸೇರಿದಂತೆ ಎಲ್ಲಾ ವಯಸ್ಸಿನ ಮಕ್ಕಳು ಮತ್ತು ಹಿರಿಯ ನಾಗರಿಕರು ಇಲ್ಲಿಗೆ ಬಂದು ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾರೆ. ನಗರದ ಹೃದಯಭಾಗದಲ್ಲಿರುವ 1.5 ಚದರ ಕಿ.ಮೀ ಗಿಂತಲೂ ಹೆಚ್ಚು ಹರಡಿರುವ ಈ ಕೆರೆಯು ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು 1537 ರಲ್ಲಿ ನಿರ್ಮಿಸಲಾಗಿದ್ದು ಬೆಂಗಳೂರಿನ ಅತ್ಯಂತ ಹಳೆಯ ಮತ್ತು ದೊಡ್ಡ ಕೆರೆಗಳಲ್ಲಿ ಒಂದಾಗಿದೆ.
3 / 7
ಸ್ಯಾಂಕಿ ಟ್ಯಾಂಕ್ ಕೆರೆ: ಈ ಕೆರೆಯು ಪಟ್ಟಣದ ಹೃದಯಭಾಗದಲ್ಲಿ ಮತ್ತು ಬೆಂಗಳೂರಿನ ಹಳೆಯ ನಗರಗಳಾದ ಸದಾಶಿವನಗರ ಮತ್ತು ಮಲ್ಲೇಶ್ವರಂ ನಡುವೆ ಇದೆ. ಸ್ಯಾಂಕಿ ಟ್ಯಾಂಕ್ ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಆಕರ್ಷಕ ಕೆರೆಯಾಗಿದೆ. ಜಾಗಿಂಗ್, ವಾಕಿಂಗ್ ಮಾಡುವವರಿಗೆ ಮತ್ತು ಚಿಕ್ಕ ಮಕ್ಕಳಿಗೆ ಆಟವಾಡಲು ಇದೊಂದು ಉತ್ತಮ ಜಾಗ. ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಲು ಸೂಕ್ತವಾದ ಸ್ಥಳವಾಗಿದೆ. ಇಲ್ಲಿ ಪ್ರಕೃತಿ ಪ್ರಿಯರು ಸೂರ್ಯೋದಯದ ಸಮಯದಲ್ಲಿ ಪಕ್ಷಿಗಳನ್ನು ವೀಕ್ಷಿಸಲು ಬರುತ್ತಾರೆ.
4 / 7
ಕೆಂಪಾಂಬುದಿ ಕೆರೆ: ಇದು ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಿರ್ಮಿಸಿದ ಐತಿಹಾಸಿಕ ಕೆರೆಯಾಗಿದೆ. ಇತ್ತೀಚೆಗೆ ಇಲ್ಲಿ ನಡೆದ ಕಡಲೆಕಾಯಿ ಪರಿಷೆ ವೇಳೆ ಬಸವಣ್ಣನ ತೆಪ್ಪೋತ್ಸವ ಜರುಗಿರು. ಸೂರ್ಯೋದಯ ಸಮಯದಲ್ಲಿ ಮುಳುಗುವ ಸೂರ್ಯನನ್ನು ನೋಡಲು ಇಲ್ಲಿಗೆ ಅನೇಕರು ಭೇಟಿ ನೀಡುತ್ತಾರೆ. ಇದೊಂದು ಬೆಂಗಳೂರಿನ ಸುಂದರೆ ಸ್ಥಳವಾಗಿದೆ.
5 / 7
ಅಗರ ಕೆರೆ: 8ನೇ ಶತಮಾನದ ಈ ಹಳೆಯದಾದ ಅಗರ ಕೆರೆಯು HSR ಲೇಔಟ್‌ನಲ್ಲಿದೆ. ಇದು ಬೆಂಗಳೂರಿನ ಅತ್ಯಂತ ಪ್ರಸಿದ್ಧ ನೈಸರ್ಗಿಕ ಕೆರೆಗಳಲ್ಲಿ ಒಂದಾಗಿದೆ. 98 ಎಕರೆಗಳಲ್ಲಿ ಹರಡಿರುವ ಈ ಕೆರೆಯು ಸ್ಪಾಟ್-ಬಿಲ್ಡ್ ಪೆಲಿಕಾನ್‌ಗಳಂತಹ ಕೆಲವು ವಲಸೆ ಹಕ್ಕಿಗಳಿಗೆ ನೆಲೆಯಾಗಿದ್ದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಇಲ್ಲಿನ ದೊಡ್ಡ ಮರಗಳು, ಸಸ್ಯಗಳ ಅದ್ಭುತ ಪ್ರಭೇದಗಳು, ತಂಪಾದ ಗಾಳಿ, ಮಕ್ಕಳ ಆಟದ ಪ್ರದೇಶ ಮತ್ತು ಉತ್ತಮವಾದ ಜಾಗಿಂಗ್ ಟ್ರ್ಯಾಕ್, ನಗರದಾದ್ಯಂತ ನಿವಾಸಿಗಳನ್ನು ಮಾತ್ರವಲ್ಲದೆ ಉತ್ಸಾಹಿಗಳನ್ನೂ ಆಕರ್ಷಿಸುತ್ತದೆ.
6 / 7
ಲಾಲ್ ಬಾಗ್ ಕೆರೆ: ಪ್ರಸಿದ್ಧ ಲಾಲ್ ಬಾಗ್ ಬೊಟಾನಿಕಲ್ ಗಾರ್ಡನ್ನಲ್ಲಿರುವ ಈ ಕೆರೆಯು ನೋಡಲು ಸುಂದರವಾಗಿದೆ. ಲಾಲ್ ಬಾಗನ್ನು 1760 ರಲ್ಲಿ ಹೈದರ್ ಅಲಿಯು ನಿರ್ಮಿಸಲು ಪ್ರಾರಂಭಿಸಿದರು. ನಂತರ ಇದನ್ನು ಅವರ ಮಗ ಟಿಪ್ಪು ಸುಲ್ತಾನ್ ಪೂರ್ಣಗೊಳಿಸಿದರು. 240 ಎಕರೆಗಳಲ್ಲಿ ಹರಡಿರುವ ಲಾಲ್ ಬಾಗ್ ಪ್ರಪಂಚದಾದ್ಯಂತ ಮನ್ನಣೆಯನ್ನು ಗಳಿಸಿದೆ. ಕೆರೆ, ಸಸ್ಯಶಾಸ್ತ್ರೀಯ ಕಲಾಕೃತಿ, ಸಸ್ಯಗಳ ವೈವಿಧ್ಯತೆ, ವೈಜ್ಞಾನಿಕ ಅಧ್ಯಯನ ಮತ್ತು ಸಸ್ಯಗಳ ಸಂರಕ್ಷಣೆ ಮತ್ತು 3000 ಮಿಲಿಯನ್ ವರ್ಷಗಳಿಗಿಂತಲೂ ಹಳೆಯದು ಎಂದು ಹೇಳಲಾದ ಬಂಡೆಗಳು ಲಾಲ್ ಬಾಗ್‌ನ ಮುಖ್ಯಾಂಶಗಳಾಗಿವೆ.
7 / 7
ಹೆಸರಘಟ್ಟ ಕೆರೆ: ಈ ಕೆರೆಯ ಹಚ್ಚ ಹಸಿರಿನ ಪರಿಸರದಲ್ಲಿ ಹಕ್ಕಿಗಳ ಇಂಪಾದ ಚಿಲಿಪಿಲಿ ಶಬ್ದವು ನಮ್ಮೆಲ್ಲರನ್ನೂ ಮುಗ್ಧಗೊಳಿಸುತ್ತದೆ. ಈ ಹೆಸರಘಟ್ಟ ಕೆರೆಯನ್ನು ಸಾಮಾನ್ಯವಾಗಿ ಮಿನಿ ಪಕ್ಷಿಧಾಮ ಎಂದು ಕರೆಯಲಾಗುತ್ತದೆ. ಇದು ವಿವಿಧ ಜಾತಿಯ ಸ್ಥಳೀಯ ಪಕ್ಷಿಗಳಿಗೆ ನೆಲೆಯಾಗಿದೆ. 1000 ಎಕರೆಗಳಲ್ಲಿ ಹರಡಿರುವ ಹೆಸರಘಟ್ಟ ಬೆಂಗಳೂರಿಗರಿಗೆ ವಾರಾಂತ್ಯದ ತಾಣವಾಗಿದೆ. ಆರ್ಕಾವತಿ ನದಿಯಿಂದ ನೀರು ಸಂಗ್ರಹಿಸಲು ಮತ್ತು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲು 1894 ರಲ್ಲಿ ಈ ಮಾನವ ನಿರ್ಮಿತ ಕೆರೆಯನ್ನು ಮಾಡಲಾಯಿತು.
Published On - 12:42 pm, Wed, 1 February 23