- Kannada News Photo gallery Key Announcements For The Automobile Sector In Union Budget 2023, check out all details
Union Budget 2023: ಎಲೆಕ್ಟ್ರಿಕ್ ಕಾರುಗಳ ಖರೀದಿದಾರರಿಗೆ ಬಂಪರ್ ಆಫರ್
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ (ಫೆ 1) ಲೋಕಸಭೆಯಲ್ಲಿ ಬಜೆಟ್ ಮಂಡಿಸಿದರು. 2023-24ನೇ ಸಾಲಿನ ಬಜೆಟ್ ನಲ್ಲಿ ಪರಿಸರ ಸ್ನೇಹಿ ವಾಹನಗಳ ಹೆಚ್ಚಳಕ್ಕಾಗಿ ಮಹತ್ವದ ಘೋಷಣೆ ಮಾಡಲಾಗಿದೆ.
Updated on:Feb 01, 2023 | 3:32 PM

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನ ತಗ್ಗಿಸಲು ಕೇಂದ್ರ ಸರ್ಕಾರವು 2023-24ನೇ ಸಾಲಿನ ಬಜೆಟ್ ನಲ್ಲಿ ದೇಶಾದ್ಯಂತ ಪರಿಸರ ಸ್ನೇಹಿ ವಾಹನಗಳ ಹೆಚ್ಚಳಕ್ಕಾಗಿ ಮಹತ್ವದ ಘೋಷಣೆ ಮಾಡಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟದ ಮೇಲಿನ ಸರಕು ಮತ್ತು ಸೇವಾ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದ್ದು, ಈ ಹಿಂದಿನ 12% ರಿಂದ 5% ಕ್ಕೆ ಇಳಿಕೆ ಮಾಡಲಾಗಿದೆ.

ಸರಕು ಮತ್ತು ಸೇವಾ ತೆರಿಗೆಯಲ್ಲಿ ಇಳಿಕೆಯ ಜೊತೆಗೆ ಇವಿ ವಾಹನಗಳ ಬೆಲೆ ತಗ್ಗಿಸಲು ಲೀಥಿಯಂ ಬ್ಯಾಟರಿ ಉತ್ಪಾದನೆಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.

ಇವಿ ವಾಹನಗಳ ಬೆಲೆ ತಗ್ಗಿಸಲು ಸ್ಥಳೀಯವಾಗಿ ಬ್ಯಾಟರಿ ಉತ್ಪಾದನೆಯನ್ನ ಉತ್ತೇಜಿಸಲು PLI(ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್) ಯೋಜನೆ ಜಾರಿ ಮಾಡಿದೆ.

PLI ಯೋಜನೆಯಿಂದ FAME ಯೋಜನೆಯಲ್ಲಿ ಹಣ ದ್ವಿಗುಣಗೊಳಿಸಲು ಇದು ಸಹಕಾರಿಯಾಗಲಿದ್ದು, FAME ಯೋಜನೆಯಡಿ ಇವಿ ಕಾರುಗಳ ಖರೀದಿದಾರರಿಗೆ ಹೆಚ್ಚುವರಿ ಸಬ್ಸಡಿ ಸಿಗಲಿದೆ.

ದುಬಾರಿ ಬೆಲೆ ಕಾರಣಕ್ಕೆ ಇವಿ ವಾಹನ ಅಳವಡಿಸಿಕೊಳ್ಳಲು ಹಿಂಜರಿಯುತ್ತಿರುವ ಹೊಸ ವಾಹನ ಖರೀದಿದಾರರಿಗೆ ಹೊಸ ಯೋಜನೆಯು ಸಾಕಷ್ಟು ಸಹಕಾರಿಯಾಗಲಿದೆ.
Published On - 3:32 pm, Wed, 1 February 23



















