2023 ರಲ್ಲಿ ನಡೆಯೋ ಜಿ20 ಶೃಂಗಸಭೆ ಆತಿಥ್ಯ ಭಾರತದ ಪಾಲಿಗೆ ಸಿಕ್ಕಿದೆ. ಅದ್ರಲ್ಲೂ ಬೆಂಗಳೂರಿನಲ್ಲೇ ನಡೆಯಲಿದೆ. ಇದೇ ಕಾರಣಕ್ಕೆ ನಾಡಿನ ಇತಿಹಾಸ ಪ್ರಸಿದ್ಧ, ಯುನೆಸ್ಕೋ ಪಟ್ಟಿಯಲ್ಲಿರೋ ದೇಗುಲಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.
ವಿಶ್ವಪ್ರಸಿದ್ಧ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಐತಿಹಾಸ ಪ್ರಸಿದ್ದ ಪುರಾಣ ಪ್ರಸಿದ್ದ ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಕಲರ್ ಪುಲ್ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಇದರಿಂದ ದೇವಸ್ಥಾನದ ದೀಪಾಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ.
ದೇವಸ್ಥಾನದ ಅರುಣಾಚಲೇಶ್ವರ, ಭೋಗನಂದೀಶ್ವರ ಗೋಪುರಗಳು ಸೇರಿದಂತೆ ಒಳಾಂಗಣ ಪ್ರಾಂಗಣಕ್ಕೆ ಕಲರ್ ಪುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಭೋಗನಂದೀಶ್ವರ ದೇವಸ್ಥಾನದ ಭಿತ್ತಿಗಳು, ಪಡಸಾಲೆ, ಮಂಟಪ, ಆವರಣದಲ್ಲಿನ ಎಲ್ಲಾ ದೇವಸ್ಥಾನಗಳು ಸೇರಿದಂತೆ ಹೊರಾಂಗಣದ ಸ್ಮಾರಕಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ಕಲರ್ಫುಲ್ ಲೈಟಿಂಗ್ ನಲ್ಲಿ ದೇವಸ್ಥಾನದ ಶಿಲ್ಪಕಲಾ ಸೌಂದರ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಎರಡು ಕಣ್ಣುಗಳು ಸಾಲ್ತಿಲ್ಲ, ಈಗ ಅಳವಡಿಸಿರುವ ಲೈಟಿಂಗ್ ನ್ನು ವರ್ಷಪೂರ್ತಿ ಮುಂದುವರೆಸುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ.
ಶೃಂಗಸಭೆಯ ಸದಸ್ಯ ರಾಷ್ಟ್ರಗಳ ಗಣ್ಯರು ಒಂದು ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ್ರೂ ದೇಶದ ಭವ್ಯ ಪರಂಪರೆ, ಶ್ರೀಮಂತ ಇತಿಹಾಸಕ್ಕೆ ಯಾವುದೆ ಅಡಚಣೆಯಾಗದಂತೆ ದೇವಸ್ಥಾನವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಲಾಗಿದೆ