Narendra Modi Praises Bidar Company: ಬೀದರ್​ನ ಹುಲಸೂರು ಮಿಲೆಟ್ಸ್ ಕಂಪನಿ ಬಗ್ಗೆ ಪ್ರಧಾನಿ ಪ್ರಶಂಸೆ; ಯಾವುದಿದು ಈ ಸಂಸ್ಥೆ?

| Updated By: ಸುಗ್ಗನಹಳ್ಳಿ ವಿಜಯಸಾರಥಿ

Updated on: Jan 29, 2023 | 3:36 PM

ಬೀದರ್ ಜಿಲ್ಲೆಯ ಹುಲಸೂರು ಪಟ್ಟಣದ ಮಹಿಳಾ ಕಿಸಾನ್ ಮಿಲೆಟ್ಸ್ ಪ್ರೋಡೂಸರ್ ಕಂಪನಿ ಲಿಮಿಟೆಡ್ (ಹುಲಸೂರು ಸಿರಿಧ್ಯಾನ ಕಂಪನಿ) ಬಗ್ಗೆ ಮನ್ ಕಿ ಬಾತ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ. ಈ ಸಂಸ್ಥೆಯ ಬಗ್ಗೆ ಒಂದು ಕಿರುಪರಿಚಯದ ಫೋಟೋ ವರದಿ ಇಲ್ಲಿದೆ. (ವರದಿ: ಸುರೇಶ್ ನಾಯ್ಕ್, ಬೀದರ್​ನ ಟಿವಿ9 ವರದಿಗಾರ)

1 / 8
ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಆರೋಗ್ಯ ವೃದ್ಧಿಗೆ ಹೆಚ್ಚು ಒತ್ತು ನೀಡುವ ಈ ಧಾನ್ಯಗಳ ಬಳಕೆಯನ್ನ ಜನರು ನಿಧಾನವಾಗಿ ಸೇವಿಸುತ್ತಿದ್ದಾರೆ. ಇದೇ ಕಾರಣಕ್ಕೆ ಸರ್ಕಾರ ಕೂಡ ಸಿರಿಧಾನ್ಯ ಬಿತ್ತನೆಗೆ ರೈತರಿಗೆ ಪ್ರೋತ್ಸಾಹಿಸುತ್ತಿದೆ.

2 / 8
ಇದೇ ಸಿರಿಧಾನ್ಯದಲ್ಲಿ ಬದುಕು ಕಂಡುಕೊಂಡಿರುವ ಮಹಿಳಾ ಕಿಸಾನ್ ಮಿಲೆಟ್ಸ್ ಪ್ರೋಡೂಸರ್ ಕಂಪನಿ ಲಿಮಿಟೆಡ್ ಹುಲಸೂರು ಯಶಸ್ವಿಯಾಗಿದ್ದು, ತಮ್ಮದೇ ಆದ ಮಾರುಕಟ್ಟೆ ಸೃಷ್ಟಿಸಿ ಲಾಭ ಪಡೆಯುತ್ತಿದ್ದಾರೆ.

3 / 8
ಸುಮಾರು ನಾಲ್ಕು ಜನ ಯುವಕರು ಸೇರಿಕೊಂಡು ಆರಂಭಿಸಿದ ಈ ಸಂಸ್ಥೆಯಲ್ಲಿ 308 ಮಹಿಳಾ ಷೇರುದಾರರಿದ್ದಾರೆ. 63 ಜನ ಸಣ್ಣ ರೈತರು, 30 ಮಹಿಳಾ ರೈತರಿದ್ದು ಈ ರೈತರು ಬೆಳೆದ ಸಿರಿಧಾನ್ಯವನ್ನ ಕೊಂಡು ಕೊಂಡು ಅದನ್ನ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದಾರೆ.

4 / 8
ಬೀದರ್ ಜಿಲ್ಲೆಯ ಗಡಿ ತಾಲೂಕು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಹುಲಸೂರು ಪಟ್ಟಣದಲ್ಲಿ 2 ನೇ ಮಾರ್ಚ್ 2021 ರಂದು ಸಿರಿಧಾನ್ಯ ತಯಾರಿಕಾ ಕಂಪನಿ ಆರಂಭಿಸಿ 9 ಬಗೆಯ ಸಿರಿಧಾನ್ಯಗಳ ಉತ್ಪಾದಿಸಿ ಮಾರಾಟ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ.

5 / 8
ನವಣಿ, ರಾಗಿ, ಸಾವೆ, ಬರಗ, ಸಜ್ಜೆ, ಕೂರ್ಲೆ ಊದಲುಗಳು ಇವರು ತಯಾರಿಸುವ ಸಿರಿಧಾನ್ಯಗಳಾಗಿವೆ. ರಾಗಿ ಹಿಟ್ಟು, ಜೋಳದ ಹಿಟ್ಟು, ಸಜ್ಜೆ ಹಿಟ್ಟು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಜೊತೆಗೆ ಕುಸಬಿ ಎಣ್ಣೆ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.

6 / 8
ಈ ಸಿರಿಧಾನ್ಯ ಪದಾರ್ಥಗಳನ್ನು ದೆಹಲಿ, ಬೆಂಗಳೂರು, ಹೈದರಾಬಾದ್, ಬಸವಕಲ್ಯಾಣ, ಬೀದರ್​ನ ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ.

7 / 8
ಎರಡು ವರ್ಷ ಹಿಂದೆ ಆರಂಭವಾದ ಈ ಕಂಪನಿಯೂ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿ ವಹಿವಾಟು ಮಾಡುತ್ತಿದೆ. 50 ರಿಂದ 60 ಲಕ್ಷ ರೂಪಾಯಿ ಖರ್ಚು ಮಾಡಿ ಪ್ರೋಸಸಿಂಗ್ ಯೂನಿಟ್ ಕೂಡ ಪ್ರಾರಂಭಿಸಿ ಇದರಿಂದಲೇ ತಮ್ಮ ಜೀವನ ಕಂಡುಕೊಂಡಿದ್ದು ಸಿರಿಧಾನ್ಯ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ.

8 / 8
ಸಿರಿಧಾನ್ಯಗಳಾದ ರಾಗಿ, ಜೋಳ, ಆರ್ಕಾ, ಸಾಮೆ, ಸಜ್ಜೆ, ನವಣೆ, ಕೊರ್ಲೆ, ಉರುಲು, ಬರ್ಗು ಹೀಗೆ ಒಟ್ಟು ಒಂಬತ್ತು ಬಗೆಯ ಸಿರಿಧಾನ್ಯಗಳು ಬರುತ್ತವೆ. ಇದರಿಂದ 22 ಬಗೆಯ ರೀತಿ ಆಹಾರ ಪದಾರ್ಥಗಳನ್ನ ತಯಾರು ಮಾಡಬಹುದಾಗಿದೆ. ಮುಖ್ಯವಾಗಿ ರಾಗಿ ಮಿಲೆಟ್, ಗೋಧಿ ಪೌಡರ್, ಆರ್ಕಾ ಉಪ್ಪಿಟ್ಟು ಸೇರಿದಂತೆ ಹಲವು ಬಗೆಯ ಪೌಡರ್‌ಗಳನ್ನ ತಯಾರು ಮಾಡಿ ನಮ್ಮದೇ ಬ್ರ್ಯಾಂಡ್  ಹೆಸರಿನಲ್ಲಿ ಮಾರಾಟ ಮಾಡ್ತಿದ್ದೇವೆಂದು ಕಂಪನಿಯ ಸಂಯೋಜಕರು ಅಶೋಕ್ ಸಜ್ಜನ‌ ಹೇಳುತ್ತಿದ್ದಾರೆ.

Published On - 3:34 pm, Sun, 29 January 23