
ಪ್ರತಿ ರಾಜಕೀಯ ಪಕ್ಷವೂ ತಾವು ಗೆಲ್ಲುವುದಾಗಿ ಹೇಳಿಕೆ ನೀಡುತ್ತಿವೆ ಆದರೆ ರಿಯಾಲಿಟಿ ಏನೆಂದರೆ ಅವೆಲ್ಲಾ ಪಕ್ಷಗಳು ಸೇರಿದ್ರೂ ಗೆಲುವು ಸಾಧ್ಯವಿಲ್ಲ ಎಂದು ಮಿಮ್ಸ್ ಮಾಡಲಾಗಿದೆ. ಅದರಲ್ಲಿ ಲಾಲು ಪ್ರಸಾದ್ ಯಾದವ್ ಹಾಗೂ ತೇಜಸ್ವಿ ಯಾದವ್ ನಡುವಿನ ಸಂಭಾಷಣೆ ನಡೆದಂತೆ ಪೋಸ್ಟರ್ ಬಳಸಲಾಗಿದ್ದು, ಅದರಲ್ಲಿ ತೇಜಸ್ವಿ ಯಾದವ್ ತಲೆ ಮೇಲೆ ಕೈಹೊತ್ತುಕೊಂಡರೆ ಲಾಲೂ ಮಗನಿಗೆ ಸಮಾಧಾನ ಮಾಡುತ್ತಾ ನಿನ್ನಿಂದ ಇದು ಸಾಧ್ಯವಾಗಲ್ಲ ಮಗನೇ ಎಂದು ಹೇಳುತ್ತಿರುವಂತೆ ಕ್ರಿಯೇಟ್ ಮಾಡಲಾಗಿದೆ.

ಮತ್ತೊಂದು ಕಡೆ ಆಯೆಶಾ ಎಂಬುವವರು ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಪ್ರಶಾಂತ್ ಕಿಶೋರ್ ಚಿತ್ರವಿದೆ. ಅದರಲ್ಲಿ ಗೆಲುವಂತೂ ನಿಮ್ಮದಾಗಿಲ್ಲ ಕೊನೆಯಲ್ಲಿ ಎಲ್ಲಾದರೂ ನಿಮ್ಮ ಹೆಸರಿರಬಹುದು ಹುಡುಕಿಕೊಳ್ಳಿ ಎಂದು ತಮಾಷೆ ಮಾಡುವಂತಿದೆ.

ಸೂರಜ್ ಕುಶ್ವಾಹ ಎಂಬುವವರು ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ನಿತೀಶ್ ಕುಮಾರ್ ಲಾಲೂ ಪ್ರಸಾದ್ ಯಾದವ್ಗೆ ಚುನಾವಣೆ ಬಗ್ಗೆ ಕಿವಿ ಮಾತು ಹೇಳುತ್ತಿರುವಂತಿದೆ. ಓ ಭೇಟಾ ಜಿ ಹಿಂದಿ ಹಾಡನ್ನು ಹಾಡುತ್ತಾ ಚುನಾವಣೆಯಲ್ಲಿ ಈ ಬಾರಿ ಗೆಲುವು ನಮ್ಮದೇ ಎಂದು ಮಾರ್ಮಿಕವಾಗಿ ಹೇಳುವಂತಿದೆ.

ರವೀಶ್ ಎಂಬುವವರು ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ದೊಡ್ಡ ಮೀನು ಹಾಗೂ ಸಣ್ಣ ಮೀನಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅಂದರೆ ಮಹಾಘಟಬಂಧನ್ ಹೆಚ್ಚು ಮತಗಳನ್ನು ಪಡೆಯಬಹುದು, ನಮ್ಮ ಬಲ ಇಷ್ಟಿದೆ ಎಂದು ತೋರಿಸಿದ್ದರೂ ಕೊನೆಗೆ ಗಳಿಸಿದ್ದು ಇಷ್ಟೇ ಮತ ಎಂಬಂತಿದೆ.

ಸಾಗರ್ ಎಂಬುವವರು ಪೋಸ್ಟ್ ಮಾಡಿರುವ ಪೋಸ್ಟರ್ನಲ್ಲಿ ತೇಜಸ್ವಿ ಯಾದವ್ ಕಾರಿನಲ್ಲಿ ಕುಳಿತಿದ್ದಾರೆ. ನಾನು ಮುಖ್ಯಮಂತ್ರಿಯಾಗುವ ಸರದಿ ಬಂದಾಗ ಎಕ್ಸಿಟ್ ಪೋಲ್ ಕೂಡ ನಿಜವಾಗೋಯ್ತು ಎಂದು ಬೇಸರದಿಂದ ಹೇಳಿಕೊಳ್ಳುವಂತಿದೆ.
Published On - 1:32 pm, Fri, 14 November 25