
2026 ರ ಗ್ಲಾಸ್ಗೋ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಆರನೇ ಪದಕ ಲಭಿಸಿದೆ. ವೇಟ್‌ಲಿಫ್ಟಿಂಗ್‌ನಲ್ಲಿ ಬಿಂದಿಯಾರಾಣಿ ದೇವಿ 58 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಸ್ನ್ಯಾಚ್ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು 199 ಕೆಜಿ ಎತ್ತುವ ಮೂಲಕ ಬಿಂದಿಯಾರಾಣಿ ಪದಕವನ್ನು ಖಚಿತಪಡಿಸಿದರು. ಇದಕ್ಕೂ ಮೊದಲು, ಅವರು ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು(PC-PTI).

ಇದು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಲಭಿಸಿದ ಐದನೇ ಪದಕವಾಗಿದೆ. ಬಿಂದಿಯಾರಾಣಿ ದೇವಿ ಅವರಿಗೂ ಮೊದಲು ಜ್ಞಾನೇಶ್ವರಿ ಯಾದವ್ 53 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ, ಮೀರಾಬಾಯಿ ಚಾನು ಚಿನ್ನದ ಪದಕ, ರಿಷಿಕಾಂತ ಸಿಂಗ್ ಚಾನ್‌ಬಮ್ ಬೆಳ್ಳಿ ಪದಕ, ರಾಜ ಮುತ್ತುಪಾಂಡಿ ಬೆಳ್ಳಿ ಪದಕ, ಝಂಡು ಕುಮಾರ್ ಕಂಚಿನ ಪದಕ ಗೆದ್ದಿದ್ದರು(PC-PTI).

58 ಕೆಜಿ ವಿಭಾಗದಲ್ಲಿ ಬಿಂದಿಯಾರಾಣಿ ದೇವಿ ಸ್ನ್ಯಾಚ್‌ನಲ್ಲಿ 86 ಕೆಜಿ ತೂಕ ಎತ್ತಿದರೆ, ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ತೂಕ ಎತ್ತುವ ಮೂಲಕ ಒಟ್ಟು 199 ಕೆಜಿ ತೂಕ ಎತ್ತುವ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು. ಇದಕ್ಕೂ ಮೊದಲು ಬಿಂದಿಯಾರಾಣಿ ದೇವಿ 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಒಟ್ಟು 202 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದರು(PC-PTI).

ಇದಲ್ಲದೆ, ಅವರು 2023 ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ, IWF ವಿಶ್ವಕಪ್ (2024) ನಲ್ಲಿ ಕಂಚಿನ ಪದಕ ಮತ್ತು 2025 ರ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. 55 ಕೆಜಿ ತೂಕ ವಿಭಾಗದಲ್ಲಿ ಸ್ನ್ಯಾಚ್ ವಿಭಾಗದಲ್ಲಿ 88 ಕೆಜಿ ಎತ್ತುವ ಮೂಲಕ ಅವರು ರಾಷ್ಟ್ರೀಯ ದಾಖಲೆಯನ್ನು ಹೊಂದಿದ್ದಾರೆ(PC-PTI).

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ವೇಟ್‌ಲಿಫ್ಟರ್‌ಗಳು ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಸ್ಟ್ರೇಲಿಯಾದ ನಂತರ ಭಾರತವು ವೇಟ್‌ಲಿಫ್ಟಿಂಗ್‌ನಲ್ಲಿ ಎರಡನೇ ಅತ್ಯಂತ ಯಶಸ್ವಿ ರಾಷ್ಟ್ರವಾಗಿದ್ದು, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇದುವರೆಗೆ 46 ಚಿನ್ನ ಸೇರಿದಂತೆ 134 ಪದಕಗಳನ್ನು ಗೆದ್ದಿದೆ(PC-PTI).