Kannada News Photo gallery Brahma Rathotsava of Biligiri Ranganatha which was performed in grandeur, See Swami's decoration in photos
ಅದ್ದೂರಿಯಾಗಿ ನೆರವೇರಿದ ಬಿಳಿಗಿರಿ ರಂಗನಾಥನ ಬ್ರಹ್ಮ ರಥೋತ್ಸವ; ಸ್ವಾಮಿಯ ಅಲಂಕಾರ ರೂಪ ಫೋಟೋಗಳಲ್ಲಿ ನೋಡಿ
ಚಂಪಕಾರಣ್ಯ ಕ್ಷೇತ್ರ ಎಂದೇ ಹೆಸರುವಾಸಿಯಾದ ಬಿಳಿಗಿರಿರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ನಿನ್ನೆ(ಮೇ.4) ಅದ್ದೂರಿಯಾಗಿ ನೆರವೇರಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿ ರಂಗನಾಥ ಸ್ವಾಮಿ ಕೃಪೆಗೆ ಪಾತ್ರರಾದರು.
1 / 7
ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ. ಚಾಮರಾಜನಗರ ನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನಲ್ಲಿರುವ ಪ್ರಸಿದ್ದ ತೀರ್ಥಕ್ಷೇತ್ರ. ಇಲ್ಲಿ ಪ್ರತಿವರ್ಷ ಚೈತ್ರಮಾಸದ ಹುಣ್ಣಿಮೆಯ ದಿನ ಬಿಳಿಗಿರಿ ರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತದೆ.
2 / 7
ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆಯಾದ ದಿನ ಇವತ್ತು(ಮೇ.4) ಎಂಬುದು ನಂಬಿಕೆ. ವಸಿಷ್ಠ ಮಹರ್ಷಿಗಳು ನೆಲೆಸಿದ ಪುಣ್ಯಕ್ಷೇತ್ರ ಎಂಬ ಹೆಗ್ಗಳಿಕೆಗೂ ಬಿಳಿಗಿರಿ ರಂಗನ ಬೆಟ್ಟ ಸಾಕ್ಷಿಯಾಗಿದೆ.
3 / 7
ಗುರುವಾರ ಮಧ್ಯಾಹ್ನ 12.24ರ ಶುಭ ಕರ್ಕಾಟಕ ಧನುರ್ಗುರು ನಾರ್ವಾಂಶ ಮೂಹುರ್ತದಲ್ಲಿ ರಥೋತ್ಸವ ನಡೆಯಿತು. ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆಯಿಂದ ಬಂದಿದ್ದ 50 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದಿದ್ದಾರೆ. ಬೆಳಗ್ಗೆ 5ರಿಂದ ಸ್ವಾಮಿಗೆ ವಿಶೇಷ ಪೂಜೆ ನೆರವೇರಿದೆ. ಎಲ್ಲ ಭಕ್ತರು ಸರದಿ ಸಾಲಿನಲ್ಲಿ ಬಂದು ಜಾತ್ರೆ ಯಶಸ್ವಿಗೊಳಿಸಿದ್ದಾರೆ ಅಂತಾರೆ ದೇವಾಲಯ ಪ್ರಧಾನ ಅರ್ಚಕ.
4 / 7
ರಥೋತ್ಸವ ಬಳಿಕ ಒಂದೇ ಸಾರಿ ಭಕ್ತರು ರಸ್ತೆಗೆ ನುಗ್ಗುವುದನ್ನು ತಡೆಯಲು ಸಿಆರ್ಪಿಎಫ್ ಪೊಲೀಸರು ಬ್ಯಾರಿಕೇಡ್ ಹಾಕಿ ಕಟ್ಟೆಚ್ಚರ ವಹಿಸಿದ್ದರು. ಸರದಿ ಸಾಲಿನಲ್ಲೇ ಬಂದು ಕೆಎಸ್ ಆರ್ ಟಿಸಿ ಬಸ್ ಹತ್ತುವ ವ್ಯವಸ್ಥೆ ಮಾಡಲಾಗಿತ್ತು.
5 / 7
ಇನ್ನು ಬಿಳಿಗಿರಿ ರಂಗನಾಥ ಸ್ವಾಮಿಯ ಅಲಂಕಾರ ರೂಪ ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ಬಂದಿದ್ದರು. ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಪೂರ್ಣ ನಿಷೇಧಿಸಲಾಗಿತ್ತು. ಬೆಟ್ಟದಿಂದ ಎರಡು ಕಿ.ಮೀ. ದೂರದಲ್ಲೇ ವಾಹನ ನಿಲ್ಲಿಸಿ ಕಾಲ್ನಡಿಗೆಯಲ್ಲಿ ಬರುವಂತೆ ಪೊಲೀಸರು ಸೂಚನೆ ನೀಡಿದ್ದರು. ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬರುವವರಿಗೆ ಯಳಂದೂರು ಮತ್ತು ಕೆ.ಗುಡಿ ಚೆಕ್ ಪೋಸ್ಟ್ ನಿಂದ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 80 ಬಸ್ ಗಳನ್ನು ಜಾತ್ರೆಗೆ ಬರುವ ಭಕ್ತರಿಗಾಗಿ ನಿಯೋಜಿಸಲಾಗಿತ್ತು.
6 / 7
ಹೀಗಾಗಿ ಕಳೆದ ವರ್ಷದಂತೆ ಯಾವುದೇ ಗೊಂದಲ ಆಗಲಿಲ್ಲ. ಕಳೆದ ಬಾರಿ ಜಿಲ್ಲಾಡಳಿತದ ಅವೈಜ್ಞಾನಿಕ ನಿರ್ಧಾರದಿಂದ ಭಕ್ತರು ತೀವ್ರ ಪ್ರಯಾಸ ಪಟ್ಟಿದ್ದರು.
7 / 7
ರಾಜ್ಯಾದ್ಯಂತ ಚುನಾವಣೆ ಕಾವು ರಂಗೇರಿದೆ. ಈ ನಡುವೆ ರಾಜಕೀಯ ಜಂಜಾಟ ಬಿಟ್ಟು ಭಕ್ತರು ಬಿಳಿಗಿರಿ ರಂಗನಬೆಟ್ಟದ ಪ್ರಕೃತಿ ಸೌಂದರ್ಯ ಸವಿದರು. ಒಟ್ಟಾರೆ ಈ ವರ್ಷ ಯಾವುದೇ ಗೊಂದಲವಿಲ್ಲದೆ ಬಿಳಿಗಿರಿ ರಂಗನಾಥಸ್ವಾಮಿ ರತೋತ್ಸವ ನೆರವೇರಿತು.